Monday, February 23, 2026
HomeNationalChennai Crime Case - ಛೀ.. ಇವಳನ್ನು ತಾಯಿ ಅನ್ನಬೇಕಾ? ಮಗಳಿಗೆ ನಿದ್ರೆ ಮಾತ್ರೆ ನೀಡಿ...

Chennai Crime Case – ಛೀ.. ಇವಳನ್ನು ತಾಯಿ ಅನ್ನಬೇಕಾ? ಮಗಳಿಗೆ ನಿದ್ರೆ ಮಾತ್ರೆ ನೀಡಿ ಪ್ರಿಯಕರನಿಂದ ಅತ್ಯಾ**ರ ಮಾಡಿಸಿದ ಘೋರ ಕೃತ್ಯ..!

ಹಡೆದವ್ವ ಕಣ್ಣ ಮುಂದೆ ಇರುವಾಗ ದೈವವೇಕೆ? ಎಂಬ ಮಾತಿದೆ. ಆದರೆ, ತಮಿಳುನಾಡಿನಲ್ಲಿ ನಡೆದ ಈ ಘಟನೆ ಕೇಳಿದರೆ ಮನುಷ್ಯ ಸಂಬಂಧಗಳ ಮೇಲಿದ್ದ ನಂಬಿಕೆಯೇ ಸಾರಿ ಹೋಗುತ್ತದೆ. ಅಕ್ರಮ ಸಂಬಂಧದ ಅಮಲಿನಲ್ಲಿ ಮೈ ಮರೆತ ತಾಯಿಯೊಬ್ಬಳು, ತನ್ನ ಸ್ವಂತ ಮಗಳಿಗೇ ನಿದ್ದೆ ಮಾತ್ರೆ ನೀಡಿ (Chennai Crime Case) ಪ್ರಿಯಕರನಿಂದ ಅತ್ಯಾ**ಚಾರ ಮಾಡಿಸಿರುವ ಘೋರ ಕೃತ್ಯವೊಂದು ಬೆಳಕಿಗೆ ಬಂದಿದೆ. ಕಾಮದ ಹಸಿವಿಗಾಗಿ ಹೆತ್ತ ಮಗಳ ಜೀವನವನ್ನೇ ನರಕವಾಗಿಸಿದ ಈ ‘ಕಟುಕ’ ತಾಯಿಯ ಕಥೆ ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ.

Chennai police investigating shocking crime case in Tamil Nadu

Chennai Crime Case – ಘಟನೆಯ ಹಿನ್ನೆಲೆ ಏನು?

ಚೆನ್ನೈನ ಸಾಲಿಗ್ರಾಮ ನಿವಾಸಿಯಾದ ವ್ಯಕ್ತಿಯೊಬ್ಬರು ವಾಚ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪತ್ನಿ ಮತ್ತು 20 ವರ್ಷದ ಒಬ್ಬಳು ಮಗಳಿದ್ದಾಳೆ. ಕೆಲಸದ ನಿಮಿತ್ತ ಅವರು ವಾರಕ್ಕೊಮ್ಮೆ ಮಾತ್ರ ಮನೆಗೆ ಬರುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಪತ್ನಿ, ಅದೇ ಪ್ರದೇಶದ ದಕ್ಷಿಣಾಮೂರ್ತಿ (50) ಎಂಬುವವನ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದಳು. ಪತಿ ಇಲ್ಲದ ಸಮಯದಲ್ಲಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ರಾಸಲೀಲೆಯಲ್ಲಿ ಮುಳುಗುತ್ತಿದ್ದಳು. Read this also : ದೆಹಲಿಯಲ್ಲಿ ಘೋರ ಕೃತ್ಯ: ಎರಡೇ ವರ್ಷದ ಮಗುವಿನ ಗಂಟಲು ಸೀಳಿ ಕೊಂದ ಅತ್ತೆ, ಅಸಲಿ ಕಾರಣವೇನು?

ಒಮ್ಮೆ ಮಗಳು ತಾಯಿಯ ಈ ನೀಚ ಕೃತ್ಯವನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಬುದ್ಧಿ ಹೇಳಿದ್ದಳು. ಅಷ್ಟೇ ಅಲ್ಲದೆ, ತಾಯಿ ತನ್ನ ದಾರಿ ತಿದ್ದಿಕೊಳ್ಳದಿದ್ದಾಗ ಆಕೆಯೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದ್ದಳು. ಇದು ತಾಯಿಯ ಮನಸ್ಸಿನಲ್ಲಿ ಮಗಳ ಮೇಲೆ ದ್ವೇಷ ಹುಟ್ಟುವಂತೆ ಮಾಡಿತು.

ಮಗಳ ಮೇಲೆ ನಡೆದ ದೌರ್ಜನ್ಯ

ಕಳೆದ ತಿಂಗಳು 3ನೇ ತಾರೀಖಿನಂದು ಮಗಳು ಅನಾರೋಗ್ಯಕ್ಕೆ ಒಳಗಾಗಿದ್ದಳು. ಇದನ್ನೇ ಅವಕಾಶವಾಗಿ ಬಳಸಿಕೊಂಡ ತಾಯಿ, ಮಗಳಿಗೆ ನಿದ್ರೆ ಮಾತ್ರೆ ನೀಡಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮಗಳು ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿದ್ದಾಗ ಪ್ರಿಯಕರನಿಂದ ಅತ್ಯಾಚಾರ ಮಾಡಿಸಿದ್ದಾಳೆ. ಅಷ್ಟಕ್ಕೇ ನಿಲ್ಲದ ಈ ದಾರುಣ ಕೃತ್ಯ, ಅದೇ ತಿಂಗಳ (Chennai Crime Case) 23ರಂದು ಮರುಕಳಿಸಿದೆ. ಎರಡನೇ ಬಾರಿ ಮಗಳಿಗೆ ಪ್ರಜ್ಞೆ ಬಂದಾಗ ಆಕೆ ಕಿರುಚಾಡಿದ್ದಾಳೆ. ತಕ್ಷಣ ಆಕೆಯನ್ನು ಕೊಠಡಿಯಲ್ಲಿ ಕೂಡಿ ಹಾಕಿ, ಈ ವಿಷಯ ಯಾರಿಗಾದರೂ ತಿಳಿದರೆ ಕೊಲೆ ಮಾಡುವುದಾಗಿ ತಾಯಿ ಮತ್ತು ಆಕೆಯ ಪ್ರಿಯಕರ ಬೆದರಿಕೆ ಹಾಕಿದ್ದಾರೆ.

Chennai police investigating shocking crime case in Tamil Nadu

ಗರ್ಭಿಣಿಯಾದ ಮಗಳು: ಬಯಲಾದ ಸತ್ಯ

ಹೇಗೋ ಮನೆಯಿಂದ ತಪ್ಪಿಸಿಕೊಂಡು ತಿರುವಣ್ಣಾಮಲೈನಲ್ಲಿರುವ ಸಂಬಂಧಿಕರ ಮನೆಗೆ ಸೇರಿದ ಯುವತಿ, ತನಗೆ ನಡೆದ ಅನ್ಯಾಯವನ್ನು ಹೇಳಿ ಕಣ್ಣೀರು ಹಾಕಿದ್ದಾಳೆ. ಈ ನಡುವೆ ತೀವ್ರ ಹೊಟ್ಟೆನೋವು (Chennai Crime Case) ಕಾಣಿಸಿಕೊಂಡಾಗ ಸಂಬಂಧಿಕರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ತಪಾಸಣೆ ನಡೆಸಿದ ವೈದ್ಯರು ಯುವತಿ ಗರ್ಭಿಣಿ ಎಂದು ತಿಳಿಸಿದಾಗ ಎಲ್ಲರೂ ದೆಪ್ಪೆರಾದರು.

ಪೊಲೀಸರ ಕ್ರಮ

ಈ ಬಗ್ಗೆ ಸಂಬಂಧಿಕರು ಕೂಡಲೇ (Chennai Crime Case) ಸೆಯ್ಯಾರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನೆ ನಡೆದದ್ದು ಚೆನ್ನೈನ ವಡಪಳನಿಯಲ್ಲಿ ಆದ ಕಾರಣ, ಪ್ರಕರಣವನ್ನು ವಡಪಳನಿ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಸದ್ಯ ಪೊಲೀಸರು ತಾಯಿ ಮತ್ತು ಆಕೆಯ ಪ್ರಿಯಕರ ದಕ್ಷಿಣಾಮೂರ್ತಿ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular