ಇತ್ತೀಚಿಗಷ್ಟೆ ಕಡಿಮೆ ದರದಲ್ಲಿ ಕೇಂದ್ರ ಸರ್ಕಾರ ಭಾರತ್ ರೈಸ್ ಮಾರಾಟವನ್ನು ಆರಂಭಿಸಿತ್ತು. ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿಯ ಈ ಭಾರತ್ ರೈಸ್ ಮಾರಾಟವನ್ನು ಸದ್ಯ ಅಂದರೇ ಜುಲೈ ತಿಂಗಳಿನಿಂದ ತಾತ್ಕಲಿಕವಾಗಿ ಸ್ಥಗಿತ ಮಾಡಲಾಗಿದೆ. ಕಡಿಮೆ ಬೆಲೆಯಲ್ಲಿ ದೇಶವಾಸಿಗಳಿಗೆ ಅಕ್ಕಿ ವಿತರಿಸಲು ಕೇಂದ್ರ ಸರ್ಕಾರ ಕಳೆದ ಫೆಬ್ರವರಿ ಮಾಹೆಯಿಂದ ಭಾರತ್ ರೈಸ್ ಬಿಡುಗಡೆ ಮಾಡಲಾಘಿತ್ತು. ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಈ ಭಾರತ್ ರೈಸ್ ಮತದಾರರನ್ನು ಸೆಳೆದಿತ್ತು ಎನ್ನಲಾಗಿದೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಗಳಲ್ಲಿ ಒಂದಾದ ಭಾರತ್ ರೈಸ್ ಯೋಜನೆಯ ಅಡಿ 29 ರೂಪಾಯಿಗೆ ಅಕ್ಕಿ, 27.50 ರೂಪಾಯಿಗೆ 1 ಕೆ.ಜಿ ಗೋಧಿ ಹಿಟ್ಟು, 60 ರೂಪಾಯಿಗೆ 1 ಕೆಜಿ ಕಡಲೆಬೇಳೆ ಮಾರಾಟ ಮಾಡಲಾಗುತ್ತಿತ್ತು. ಹೆಚ್ಚು ಜನರು ಸೇರುವ ಜಾಗಗಳಲ್ಲಿ ಮೊಬೈಲ್ ವ್ಯಾನ್ ಮೂಲಕ ಈ ಆಹಾರ ಧಾನ್ಯಗಳನ್ನು ಗ್ರಾಹಕರಿಗೆ ನೀಡಲಾಗುತ್ತಿತ್ತು. ಜೂನ್ 10 ರವರೆಗೆ ಕೇಂದ್ರ ಸರ್ಕಾರದ ಆದೇಶದಂತೆ ದಾಸ್ತಾನುಗಳು ಮಾರಾಟವಾದ ಬಳಿಕ ಅಂದರೇ ಸದ್ಯ ಭಾರತ್ ರೈಸ್ ಪೂರೈಕೆಯನ್ನು ಸ್ಥಗಿತ ಮಾಡಲಾಗಿದೆ. ಬೆಲೆ ಏರಿಕೆಯ ನಿಮಿತ್ತ ಸಂಕಷ್ಟ ಎದುರಿಸುತ್ತಿದ್ದ ಜನಸಾಮಾನ್ಯರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಭಾರತ್ ಬ್ರಾಂಡ್ ಅಕ್ಕಿಯನ್ನು ಮಾರಾಟ ಅರಂಭಿಸಿದ್ದಾಗಿ ಕೇಂದ್ರ ಸರ್ಕಾರ ಹೇಳಿತ್ತು. ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ (NAFED), ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (NCCF) ಹಾಗೂ ಕೇಂದ್ರೀಯ ಭಂಡಾರಗಳು ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಭಾರತ್ ರೈಸ್ ಯೋಜನೆಯಡಿ ಆಹಾರ ಧಾನ್ಯಗಳನ್ನು ಜನರಿಗೆ ಪೂರೈಕೆ ಮಾಡಲಾಗುತ್ತಿತ್ತು.
ಇದೀಗ ಈ ಮಹತ್ತರ ಯೋಜನೆ ಇದೀಗ ತಾತ್ಕಲಿಕ ಸ್ಥಗಿತಗೊಂಡಿದೆ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಕಳೆದ ವರ್ಷ ಸರಿಯಾಗಿ ಮಳೆಯಾಗದ ಕಾರಣದಿಂದ ಭತ್ತದ ಉತ್ಪಾದನೆ ಕಡಿಮೆಯಾಗಿದೆ. ದೇಶದಾದ್ಯಂತ ಈ ಭಾರತ್ ರೈಸ್ ಯೋಜನೆ ಜಾರಿಯಲ್ಲಿರುವ ಕಾರಣ ಭತ್ತ ಪೂರೈಕೆ ಮಾಡುವುದು ಕಷ್ಟಕರವಾಗಿದೆ. ಭಾರತ್ ಅಕ್ಕಿ ವಿತರಣೆ ಸಂಬಂಧ ಕೇಂದ್ರ ಸರ್ಕಾರ ಹೊಸ ನೀಡಿ ಜಾರಿಗೆ ತರಲು ಚಿಂತನೆ ನಡೆಸುತ್ತಿರುವುದು ಸಹ ಭಾರತ್ ರೈಸ್ ತಾತ್ಕಲಿಕವಾಗಿ ಸ್ಥಗಿತವಾಗಲು ಕಾರಣ ಎಂದು ಸಹ ಹೇಳಲಾಗುತ್ತಿದೆ.
ಇನ್ನೂ ಕೇಂದ್ರ ಸರ್ಕಾರದ ಈ ಭಾರತ್ ರೈಸ್ ಯೋಜನೆಯಡಿ ಅಕ್ಕಿ, ಗೋಧಿ ಹಿಟ್ಟು, ಬೇಳೆ ವಿತರಣೆ ಮಾಡಲಾಗುತ್ತಿತ್ತು. ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ಧಾನ್ಯಗಳನ್ನು ಪೂರೈಕೆ ಮಾಡಿದ್ದು, ಅನೇಕ ಜನರು ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಅಕ್ಕಿಯ ಬಗ್ಗೆ ಕೆಲವು ಕಡೆ ಅಪಸ್ವರ ಸಹ ಕೇಳಿಬಂತು. ಆದರೆ ಅನೇಕ ಜನರು ಈ ಆಹಾರ ಧಾನ್ಯಗಳು ಒಳ್ಳೆಯ ಗುಣಮಟ್ಟದ್ದು ಎಂದು ಸರ್ಕಾರದ ಯೋಜನೆಯ ಬಗ್ಗೆ ಪ್ರಶಂಸೆ ಮಾಡಿದ್ದರು.