ಸುಪ್ರೀಂ ಕೋರ್ಟ್ ಪ.ಜಾತಿ ಹಾಗೂ ಪ.ಪಂಗಡಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪನ್ನು ನೀಡಿದ್ದು, ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ದಲಿತ ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ (Celebration News) ಸಂಭ್ರಮಿಸಿದರು. ಜೊತೆಗೆ ಕೂಡಲೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ತೀರ್ಪನ್ನು ಪಾಲನೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಮಯದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಡಾ .ನಾರಾಯಣಸ್ವಾಮಿ ಮಾತನಾಡಿ ಒಳ ಮೀಸಲಾತಿ ಜಾರಿಗಾಗಿ ಸರಿಸುಮಾರು 35 ವರ್ಷಗಳ ಕಾಲ ನಿರಂತರವಾಗಿ ಹೋರಾಟ ಚಳುವಳಿಯನ್ನು ಮಾಡಿದ ಹೋರಾಟದ ಪರಿಣಾಮದಿಂದ ಆ ಕಷ್ಟ ನಷ್ಟಗಳನ್ನು ಸುಪ್ರೀಂ ಕೋರ್ಟ್ ನ್ಯಾಯ ಪೀಠವು ಗಂಭೀರವಾಗಿ ಪರಿಗಣಿಸಿ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರಗಳು ನೀಡಬಹುದು ಎಂದು ನೀಡಿರುವಂತಹ ತೀರ್ಪು ಆಗಿರುವುದರಿಂದ ಇದನ್ನು ರಾಜ್ಯ ಸರ್ಕಾರ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಬಳಿಕ ಕರಿಗತಮ್ಮನಹಳ್ಳಿ ಭಾವನ್ನ ಮಾತನಾಡಿ ಡಾ ಬಿ ಆರ್ ಅಂಬೇಡ್ಕರ್ ರವರು ಬರೆದು ಕೊಟ್ಟಿರುವಂತಹ ಸಂವಿಧಾನದ ಆಧಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ .ಅನೇಕ ವರ್ಷಗಳಿಂತ್ದ ಸಾಮಾಜಿಕ ರಾಜಕೀಯ ಆರ್ಥಿಕವಾಗಿ ಹಿಂದುಳಿಯುವಂತೆ ಆಯಿತು .ನಮ್ಮಲಿ ಜನಸಂಖ್ಯೆ ಹೆಚ್ಚು ಇದ್ದು ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪಾಲು ಸಿಗದೇ ಅನ್ಯಾಯಕ್ಕೆ ಒಳಗಾಗಿದ್ದ ನಮ್ಮನ್ನು ಸುಪ್ರೀಂ ಕೋರ್ಟ್ ಗುರುತಿಸಿ ನಮಗೆ ನ್ಯಾಯವನ್ನು ನೀಡಿದೆ . ರಾಜ್ಯ ಸರ್ಕಾರ ತಜ್ಙರ ಸಮಿತಿಯನ್ನು ರಚಿಸಿ ಆಗುಹೋಗುಗಳನ್ನು ಚರ್ಚಿಸಿ ತಿರ್ಮಾನಿಸಿ ಒಳ ಮೀಸಲಾತಿಯನ್ನು ಜಾರಿ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಬ್ರಾಹ್ಮಣರಹಳ್ಳಿ ನರಸಿಂಹಮೂರ್ತಿ ಮಾತನಾಡಿ ಒಳ ಮೀಸಲಾತಿಗಾಗಿ ಅನೇಕ ವರ್ಷಗಳಿಂದ ನಮ್ಮ ಸಮುದಾಯದ ಜನರ ಪ್ರಾಣ ತ್ಯಾಗ ಬಲಿದಾನಗಳು ಆಗಿವೆ. ಸ್ಪರ್ಷ ಜಾತಿಗಳ ಶಾಸಕರು ನಮಗೆ ಸಿಗುತ್ತಿರುವಂತಹ ಮೀಸಲಾತಿಯನ್ನು ನೀಡಬಾರದು ಎಂದು ಅನೇಕ ರೀತಿಯಲ್ಲಿ ತೊಂದರೇಗಳನ್ನು ಕೊಟ್ಟರು. ಆದರೂ ನಮ್ಮ ಹೋರಾಟಗಳನ್ನು ನಿಲ್ಲಿಸದೆ ಮುಂದುವರಿಸಿದ ಭಾಗವಾಗಿ ನಮಗೆ ಪ್ರತಿಫಲ ಸಿಕ್ಕಿದೆ ಮುಂದಿನ ದಿನ ಹೋರಾಟಕ್ಕೆ ನಾವು ಎಲ್ಲಾರು ಒಂದಾಗಿ ಹೋರಾಡೋಣ ಎಂದು ಹೇಳಿದರು .
ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಬ್ರಾಹ್ಮಣರಹಳ್ಳಿ ನರಸಿಂಹಮೂರ್ತಿ, ಚಲಪತಿ, ಕೆ ಎನ್ ನರಸಿಂಹಪ್ಪ, ಈಶ್ವರಪ್ಪ, ಆದೆಪ್ಪ, ನರಸಿಂಹಪ್ಪ, ಅಶ್ವತ್ಥಪ್ಪ, ರಾಮಾಂಜಿ, ನಾಗೇಂದ್ರ, ವೆಂಕಟೇಶ್, ಪೂಜಪ್ಪ, ಗಂಗಾಧರಪ್ಪ, ಎಂ ಎನ್ ನಾರಾಯಣಪ್ಪ, ರಾಜು, ಅಶ್ವತ್ಥಪ್ಪ, ಸಂತೋಷ, ಕೃಷ್ಣಪ್ಪ, ಜಗನಾಥ್, ಶ್ರೀನಿವಾಸ್, ಅಮರಾವತಿ, ಮಂಜುನಾಥ್ , ಜಾಂಬವ ಸೇನೆ ಶ್ರೀನಿವಾಸ್, ಅಂಜಿನಪ್ಪ ಸೇರಿದಂತೆ ಹಲವರಿದ್ದರು.