Tuesday, November 5, 2024

Deepavali 2024: ಮಣ್ಣಿನ ಹಣತೆ ಹಚ್ಚಿ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ: ಗುಂಪು ಮರದ ಆನಂದ್

Deepavali 2024 – ಪರಿಸರಕ್ಕೆ ಹಾನಿಕಾರಕವಾದಂತಹ ಪಟಾಕಿಗಳನ್ನು ಸಿಡಿಸುವ ಬದಲು ಮಣ್ಣಿನ ಹಣತೆಗಳನ್ನು ಹಚ್ಚಿ ದೀಪಾವಳಿ ಆಚರಿಸಿ ಪರಿಸರವನ್ನು (Deepavali 2024) ಕಾಪಾಡಬೇಕೆಂದು ಪರಿಸರ ವೇದಿಕೆಯ ಗುಂಪು ಮರದ ಆನಂದ್ ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪರಿಸರ ವೇದಿಕೆ, ಜೈ ಕರ್ನಾಟಕ, ಉರ್ದು ಸಾಹಿತ್ಯ ಪರಿಷತ್ ನ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ (Deepavali 2024) ಜಾಗೃತಿ ಆಂದೋಲನ ಎಂಬ ಹೆಸರಿನ ಮೂಲಕ ಸಾರ್ವಜನಿಕರಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ಮಣ್ಣಿನ ಹಣತೆಗಳನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

celebrate eco friendly deepavali 1

ದೀಪಾವಳಿ ಹಬ್ಬದಂದು (Deepavali 2024) ಪ್ರತಿಯೊಬ್ಬರು ಹಣತೆಯ ದೀಪವನ್ನು ಹಚ್ಚಬೇಕು. ಸದ್ದು ಮಾಡುವ ಪಟಾಕಿಯನ್ನು ಹೊಡೆಯಬಾರದು ಏಕೆಂದರೆ ಇದರಿಂದ ಶಬ್ದ ಮಾಲಿನ್ಯ ವಾಯುಮಾಲಿನ್ಯ ಉಂಟಾಗುತ್ತದೆ. ಇದರಿಂದ ವೃದ್ಧರಿಗೆ, ಮಕ್ಕಳಿಗೆ ಪ್ರಾಣಿ ಪಕ್ಷಿಗಳಿಗೆ ತೊಂದರೆಯಾಗುತ್ತದೆ. ಪಟಾಕಿಗಳಿಂದ ಹೊರಬರುವಂತಹ ವಿಷಕಾರಿ ಹೊಗೆಯಿಂದಾಗಿ ಪರಿಸರ ಮಾಲಿನ್ಯವಾಗುತ್ತದೆ. ಈಗಾಗಲೇ ವಾಯುಮಾಲಿನ್ಯದಿಂದ ಹಲವಾರು ಕಾಯಿಲೆಗಳಿಗೆ  ಸಾರ್ವಜನಿಕರು  ತುತ್ತಾಗಿದ್ದಾರೆ. ಮಣ್ಣಿನ ಹಣತೆಗಳನ್ನು ಹಚ್ಚುವುದರಿಂದ (Deepavali 2024) ಪರಿಸರ ಮಾಲೀನ್ಯ ತಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರಿಸರವನ್ನು ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಬೇಕೆಂದರು.

ಬಳಿಕ ಸಾರ್ವಜನಿಕ ಆಸ್ಪತ್ರೆಯ ಟಿ.ಹೆಚ್.ಒ ಡಾ.ನರಸಿಂಹಮೂರ್ತಿ ಮಾತನಾಡಿ, (Deepavali 2024) ದೀಪಾವಳಿ ಹಬ್ಬದ ಮಹತ್ವದ ಬಗ್ಗೆ ಸವಿವರವಾಗಿ ತಿಳಿಸಿದರು ಹಾಗೂ ಪಟಾಕಿ ಸಿಡಿಸುವುದರಿಂದ ಆಗುವ ಅನಾಹುತಗಳ ಬಗ್ಗೆ ವಿವರಿಸಿ ಪ್ರತಿಯೊಬ್ಬರು ಹಣತೆಯ ದೀಪವನ್ನು ಹಚ್ಚಿ (Deepavali 2024) ದೀಪಾವಳಿ ಹಬ್ಬವನ್ನು ಆಚರಿಸಬೇಕೆಂದರು. ಈ ವೇಳೆ (Deepavali 2024)  ಸಾರ್ವಜನಿಕ ಆಸ್ಪತ್ರೆಯ ವೈದ್ಯ ಡಾ.ಉಮೇಶ್, ಜಯ ಕರ್ನಾಟಕ ತಾಲೂಕು ಅಧ್ಯಕ್ಷ ಬುಲೆಟ್ ಶ್ರೀನಿವಾಸ್, ಪರಿಸರ ವೇದಿಕೆಯ ಶ್ರೀನಾಥ್ , ರಾಜಶೇಖರ್, ಉರ್ದು ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಹಮದ್ ನಾಸೀರ್‍, ಸಾರ್ವಜನಿಕ ಆಸ್ಪತ್ರೆಯ ಅಮೃತ, ಸರೋಜ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!