ಇಂದಿನ ಕಾಲದಲ್ಲಿ ಲವ್, ಬ್ರೇಕಪ್, ಮದುವೆ, ವಿಚ್ಚೇದನ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಮಾನವ ಸಂಬಂಧಗಳೆಲ್ಲಾ ಆರ್ಥಿಕ ಬಂಧಗಳು ಎಂದು ಕಾರ್ಲ್ ಮಾರ್ಕ್ಸ್ ಸಹ ಹೇಳಿದ್ದರು. ಅದರಂತೆ ಮಾನವ ಸಂಬಂಧಗಳು ಕ್ಷಣದಲ್ಲೇ ಮಾಯವಾಗಿಬಿಡುತ್ತದೆ. ಅಂತಹ ಘಟನೆಗಳ ಸಾಲಿಗೆ ಇಲ್ಲೊಂದು ಘಟನೆ ಸೇರಿಕೊಂಡಿದೆ. ಒಂದು ಜೋಡಿಯ ನಡುವೆ ಬ್ರೇಕಪ್ ಆಗಿದೆ. ಬ್ರೇಕಪ್ ಆದ ಬಳಿಕ ಆ ಯುವಕ ತಾನು ಖರ್ಚು ಮಾಡಿದ ಹಣಕ್ಕೆ ಜಿ.ಎಸ್.ಟಿ ಸೇರಿಸಿ ಕಳುಹಿಸಿದ್ದು, ಈ ಸಂಬಂಧ ಪೋಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.
ವಯಸ್ಸು, ಗಡಿ, ಜಾತಿ, ಭಾಷೆಗೆ ಸಂಬಂಧವಿಲ್ಲದಂತೆ ಇಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ. ಆ ಪ್ರೀತಿ ಸಾಯುವವರೆಗೂ ಸಾಗುತ್ತದೆ. ಆದರೆ ಕೆಲವು ಜೋಡಿಗಳು ಕಡಿಮೆ ಸಮಯದಲ್ಲೇ ಬ್ರೇಕಪ್ ಮಾಡಿಕೊಳ್ಳುತ್ತಿರುತ್ತಾರೆ. ಬ್ರೇಕಪ್ ಆದ ಬಳಿಕ ಒಬ್ಬರನ್ನೊಬ್ಬರು ದೂಷಣೆ ಮಾಡಿಕೊಳ್ಳುವುದು ಸಾಮಾನ್ಯ ಎಂದೇ ಹೇಳಬಹುದು. ಇದೀಗ ಯುವಕ ನೋರ್ವ ತನ್ನ ಪ್ರೇಯಸಿಯೊಂದಿಗೆ ಬ್ರೇಕಪ್ ಆದ ಬಳಿಕ ಆತ ಖರ್ಚು ಮಾಡಿದ ಎಲ್ಲಾ ಮೊತ್ತವನ್ನು ಲೆಕ್ಕ ಹಾಕಿದ್ದಾನೆ. ಅದಕ್ಕೆ ಜಿ.ಎಸ್.ಟಿ ಸೇರಿಸಿ ವಾಪಸ್ಸು ನೀಡುವಂತೆ ಯುವತಿಗೆ ಕಳುಹಿಸಿದ್ದಾನೆ. ಈ ಸಂಬಂಧ ಪೋಸ್ಟ್ ಒಂದು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಈ ವಿಡಿಯೋದ ಪ್ರಕಾರ ಯುವಕನೋರ್ವ ತನ್ನ ಪ್ರೇಯಸಿಯೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದು, ಪ್ರೇಯಸಿಗೆ ಮಾಡಿದ ಖರ್ಚಿನ ಲೀಸ್ಟ್ ಮಾಡಿ ಹಣವನ್ನು ವಾಪಸ್ಸು ನೀಡುವಂತೆ ಡಿಮ್ಯಾಂಡ್ ಮಾಡಿದ್ದಾನೆ .
ಪೋಸ್ಟ್ ನೋಡಲು ಲಿಂಕ್ ಒಪೆನ್ ಮಾಡಿ: https://www.instagram.com/p/C7emSDIPOpd/?img_index=2
ಇನ್ನೂ ಈ ಲೀಸ್ಟ್ ನಲ್ಲಿ ಪ್ರಯಾಣದ ಕ್ಯಾಬ್ ಖರ್ಚು, ಸಿನೆಮಾಗಳನ್ನು ನೋಡಿದ್ದು, ಕಾಫಿ ಕುಡಿದಿದ್ದು ಸೇರಿದಂತೆ ಎಲ್ಲಾ ಖರ್ಚುಗಳನ್ನು ನೀಡುವಂತೆ ಲೀಸ್ಟ್ ತಯಾರಿಸಿದ್ದಾನೆ. ಇಲ್ಲೊಂದು ತಮಾಷೆ ಏನಪ್ಪಾ ಅಂದ್ರೇ ಖರ್ಚುಗಳ ವಿವರಗಳನ್ನು ಎಕ್ಸ್ ಎಲ್ ಶೀಟ್ ತಯಾರಿಸಿ ಒಂದೊಂದು ತಿಂಗಳಲ್ಲಿ ಎಷ್ಟು ಖರ್ಚಾಗಿದೆ ಎಂದು ಟೈಪ್ ಮಾಡಿ ಹುಡುಗಿಗೆ ಕಳುಹಿಸಿದ್ದಾನೆ. ಯುವತಿಯೊಂದಿಗೆ ತಾನು ಏಳು ತಿಂಗಳಿನಿಂದ ರಿಲೇಷನ್ ಶಿಪ್ ನಲ್ಲಿದ್ದೀನಿ. ಆ ಅವಧಿಯಲ್ಲಿ ಒಟ್ಟು ಒಂದು ಲಕ್ಷ ಎರಡು ಸಾವಿರ ಖರ್ಚು ಮಾಡಿದ್ದಾಗಿ, ಖರ್ಚುಗಳನ್ನು ಅರ್ಧಕ್ಕೆ ಕಡಿಮೆ ಮಾಡಿ, ತಾನು ಖರ್ಚು ಮಾಡಿದ ಹಣಕ್ಕೆ ಶೇ.18 ರಷ್ಟು ಜಿ.ಎಸ್.ಟಿ ಸಹ ಹಾಕಿದ್ದಾರೆ. ಈ ಲೀಸ್ಟ್ ನಲ್ಲಿ ಸೊಳ್ಳೆಗಳಿಗಾಗಿ ಮಾರ್ಟಿನ್ ಕಾಯಿಲ್ ತಂದುಕೊಟ್ಟಿದ್ದನ್ನು ಸಹ ಲೀಸ್ಟ್ ನಲ್ಲಿ ಸೇರಿಸಿದ್ದಾನೆ.