ನೀವು ಹೊಸದಾಗಿ ಬಿಸಿನೆಸ್ (Business) ಶುರು ಮಾಡುವ ಪ್ಲಾನ್ ಮಾಡಿದ್ದೀರಾ? ಅಥವಾ ಈಗಾಗಲೇ ಇರುವ ಉದ್ಯಮವನ್ನು ದೊಡ್ಡದಾಗಿ ಬೆಳೆಸುವ ಆಸೆ ಇದೆಯೇ? ಆದರೆ ಕೈಯಲ್ಲಿ ಬಂಡವಾಳ ಇಲ್ಲ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿರಬಹುದು. ಇನ್ನು ಮುಂದೆ ಆ ಚಿಂತೆ ಬಿಡಿ! ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (MSME) ಕೇಂದ್ರ ಸರ್ಕಾರ ಭರ್ಜರಿ ಆರ್ಥಿಕ ನೆರವು ನೀಡುತ್ತಿದೆ. ಯಾವುದೇ ಅಡಮಾನವಿಲ್ಲದೆ (Collateral-free) ಸಾಲದಿಂದ ಹಿಡಿದು, ಭರ್ಜರಿ ಸಬ್ಸಿಡಿವರೆಗೆ ಸರ್ಕಾರ ನೀಡುವ ಟಾಪ್ ಬಿಸಿನೆಸ್ ಲೋನ್‌ಗಳ (Business Loans) ಮಾಹಿತಿ ಇಲ್ಲಿದೆ.

Business Loans – ಟಾಪ್ ಬಿಸಿನೆಸ್ ಲೋನ್‌ಗಳು ಯಾವುವು?
1. ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY)
ಸಣ್ಣ ಉದ್ಯಮಿಗಳಿಗೆ ವರದಾನವಾಗಿರುವ ಮುದ್ರಾ (MUDRA) ಯೋಜನೆಯಡಿ ನೀವು 10 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ವಿಶೇಷವೆಂದರೆ ಇದಕ್ಕೆ (Business Loans) ಯಾವುದೇ ಭದ್ರತೆ ಅಥವಾ ಅಡಮಾನ (Collateral-free) ಬೇಕಿಲ್ಲ.
ಈ ಯೋಜನೆಯಲ್ಲಿ ಮೂರು ಹಂತಗಳಿವೆ:
- ಶಿಶು (Shishu): ಬಿಸಿನೆಸ್ ಆರಂಭಿಸುವವರಿಗೆ 50,000 ರೂ. ವರೆಗೆ ಸಾಲ.
- ಕಿಶೋರ್ (Kishore): ಉದ್ಯಮವನ್ನು ಬೆಳೆಸಲು 50,001 ರೂ. ನಿಂದ 5 ಲಕ್ಷ ರೂ. ವರೆಗೆ ಸಾಲ.
- ತರುಣ್ (Tarun): ಉದ್ಯಮ ವಿಸ್ತರಣೆಗೆ 5 ಲಕ್ಷದಿಂದ 10 ಲಕ್ಷ ರೂ. ವರೆಗೆ ಸಾಲ.
ಯಾರು ಅರ್ಹರು?: 18 ರಿಂದ 65 ವರ್ಷದೊಳಗಿನ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಬಡ್ಡಿ ದರವು ಬ್ಯಾಂಕ್‌ಗಳಿಗನುಗುಣವಾಗಿ ಶೇ. 8.5 ರಿಂದ ಶೇ. 12 ರವರೆಗೆ ಇರುತ್ತದೆ.
2. ಸಿಜಿಟಿಎಂಎಸ್‌ಇ (CGTMSE) – 2 ಕೋಟಿ ರೂ.ವರೆಗೆ ಸಾಲ!
ದೊಡ್ಡ ಮಟ್ಟದಲ್ಲಿ ಉದ್ಯಮ ಬೆಳೆಸುವ ಪ್ಲ್ಯಾನ್ ಇದ್ದರೆ ಈ ಯೋಜನೆ ಬೆಸ್ಟ್. ಬ್ಯಾಂಕುಗಳು ಯಾವುದೇ ಆಸ್ತಿ ಅಡಮಾನವಿಲ್ಲದೆ ಬರೋಬ್ಬರಿ 2 ಕೋಟಿ ರೂ.ವರೆಗೆ ಸಾಲ (Business Loans) ನೀಡುತ್ತವೆ.

- 50 ಲಕ್ಷ ರೂ.ವರೆಗಿನ ಸಾಲಕ್ಕೆ ಸರ್ಕಾರವೇ ಶೇ.85 ರಷ್ಟು ಗ್ಯಾರಂಟಿ ನೀಡುತ್ತದೆ.
- 50 ಲಕ್ಷದಿಂದ 2 ಕೋಟಿ ರೂ.ವರೆಗಿನ ಸಾಲಕ್ಕೆ ಶೇ.75 ರಷ್ಟು ಗ್ಯಾರಂಟಿ ಲಭ್ಯ.
- ಇದರ ಬಡ್ಡಿ ದರ ಸಾಮಾನ್ಯವಾಗಿ ಶೇ. 10 ರಿಂದ 14 ರವರೆಗೆ ಇರುತ್ತದೆ.
3. ಪಿಎಂಇಜಿಪಿ (PMEGP) – ಸಬ್ಸಿಡಿ ಸಹಿತ ಸಾಲ
ಹೊಸದಾಗಿ ಉದ್ಯಮ ಶುರು ಮಾಡುವವರಿಗೆ ಇದು ಅತ್ಯುತ್ತಮ ಆಯ್ಕೆ. ಏಕೆಂದರೆ ಇದರಲ್ಲಿ ಸಾಲದ ಜೊತೆಗೆ ಸರ್ಕಾರದಿಂದ ಸಬ್ಸಿಡಿ (Business Loans) (Subsidy) ಕೂಡ ಸಿಗುತ್ತದೆ.
- ಉತ್ಪಾದನಾ ಘಟಕಗಳಿಗೆ: 50 ಲಕ್ಷ ರೂ. ವರೆಗೆ ಸಾಲ.
- ಸೇವಾ ವಲಯಕ್ಕೆ: 20 ಲಕ್ಷ ರೂ. ವರೆಗೆ ಸಾಲ.
- ಸಬ್ಸಿಡಿ ಎಷ್ಟು?: ಸಾಮಾನ್ಯ ವರ್ಗದವರಿಗೆ ಶೇ.15-25 ರಷ್ಟು ಸಬ್ಸಿಡಿ ಸಿಕ್ಕರೆ, ಮಹಿಳೆಯರು, SC/ST, OBC ಮತ್ತು ಹಿಂದುಳಿದ ಪ್ರದೇಶದವರಿಗೆ ಶೇ.25 ರಿಂದ 35 ರಷ್ಟು ಸಬ್ಸಿಡಿ ಸಿಗುತ್ತದೆ.
4. 59 ನಿಮಿಷಗಳಲ್ಲಿ ಸಾಲ (PSB Loans in 59 Minutes)
ಡಿಜಿಟಲ್ ಯುಗದಲ್ಲಿ ಸಾಲ (Business Loans) ಪಡೆಯಲು ತಿಂಗಳುಗಟ್ಟಲೆ ಕಾಯಬೇಕಿಲ್ಲ. “PSBLoansIn59Minutes” ಪೋರ್ಟಲ್ ಮೂಲಕ ಕೇವಲ 59 ನಿಮಿಷಗಳಲ್ಲಿ ನಿಮ್ಮ ಬಿಸಿನೆಸ್ ಲೋನ್‌ಗೆ ತಾತ್ವಿಕ ಅನುಮೋದನೆ ಪಡೆಯಬಹುದು. ಇದಕ್ಕೆ ಜಿಎಸ್‌ಟಿ (GST) ರಿಟರ್ನ್ಸ್, ಐಟಿಆರ್ (ITR) ಮತ್ತು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮುಖ್ಯ.

ಇತರ ಪ್ರಮುಖ ಯೋಜನೆಗಳು
- ಸ್ಟ್ಯಾಂಡ್-ಅಪ್ ಇಂಡಿಯಾ (Stand-Up India): ಮಹಿಳೆಯರು ಮತ್ತು SC/ST ಉದ್ಯಮಿಗಳನ್ನು ಪ್ರೋತ್ಸಾಹಿಸಲು ಈ ಯೋಜನೆ ಇದೆ.
- SIDBI ಸಾಲ: ಸ್ಥಾಪಿತ ಉದ್ಯಮಗಳಿಗೆ ಟೆಕ್ನಾಲಜಿ ಅಪ್ಗ್ರೇಡ್ ಮಾಡಲು ಅಥವಾ ಬಂಡವಾಳಕ್ಕಾಗಿ 3 ಕೋಟಿಯಿಂದ 50 ಕೋಟಿ ರೂ.ವರೆಗೆ ನೆರವು ನೀಡುತ್ತದೆ. Read this also : ATM ಮಷಿನ್ನಲ್ಲಿ ಕಾರ್ಡ್ ಸಿಕ್ಕಿಹಾಕಿಕೊಂಡರೆ ಈ ತಪ್ಪು ಮಾಡ್ಬೇಡಿ: ಅಕೌಂಟ್ ಸೇಫ್ ಆಗಿರಬೇಕಂದ್ರೆ ತಕ್ಷಣ ಹೀಗೆ ಮಾಡಿ..!
ಗಮನಿಸಿ: ಪ್ರತಿಯೊಂದು ಯೋಜನೆಯ ಬಡ್ಡಿ ದರ, ನಿಯಮಗಳು ಮತ್ತು ಸಬ್ಸಿಡಿ ಪ್ರಮಾಣ ಬೇರೆ ಬೇರೆಯಾಗಿರುತ್ತದೆ. ಸಾಲಕ್ಕೆ (Business Loans) ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಅಗತ್ಯಕ್ಕೆ ತಕ್ಕುದಾದ ಯೋಜನೆಯನ್ನು ಆರಿಸಿ, ಸೂಕ್ತ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ. ಪಿಎಂಇಜಿಪಿ ಸಬ್ಸಿಡಿ ಮತ್ತು CGTMSE ನಂತಹ ಯೋಜನೆಗಳನ್ನು ಬಳಸಿಕೊಂಡು ನಿಮ್ಮ ಸಾಲದ ಹೊರೆ ಕಡಿಮೆ ಮಾಡಿಕೊಳ್ಳಬಹುದು.
(ಸೂಚನೆ: ಈ ಲೇಖನವು ಕೇವಲ ಮಾಹಿತಿಗಾಗಿ ಮಾತ್ರ. ಯಾವುದೇ ಹೂಡಿಕೆ ಅಥವಾ ಸಾಲದ ನಿರ್ಧಾರ ತೆಗೆದುಕೊಳ್ಳುವ ಮುನ್ನ ಅಧಿಕೃತ ಬ್ಯಾಂಕ್ ಅಧಿಕಾರಿಗಳು ಅಥವಾ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ. ಲೇಖನದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಮಾಹಿತಿಯ ಉದ್ದೇಶಕ್ಕೆ ಮಾತ್ರ ಸೀಮಿತ.)
