Video – ಪ್ರೀತಿ, ಪ್ರೇಮ ಸಂಬಂಧಗಳು ಸಾಮಾನ್ಯವಾಗಿ ಸಂತೋಷ ಮತ್ತು ನಲಿವಿನಿಂದ ಕೂಡಿರುತ್ತವೆ. ಆದರೆ ಕೆಲವೊಮ್ಮೆ ಸಣ್ಣ ಪುಟ್ಟ ಜಗಳಗಳು ಮತ್ತು ಮನಸ್ತಾಪಗಳು ಉಂಟಾಗುವುದು ಸಹಜ. ಇಂತಹ ಘಟನೆಗಳು ಪ್ರೇಮಿಗಳ ನಡುವೆ ಸಾಮಾನ್ಯ. ಆದರೆ, ಇತ್ತೀಚೆಗೆ ಓರ್ವ ಯುವಕ ಜಗಳವಾದ ಕಾರಣ ಇಡೀ ಊರಿಗೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಸುದ್ದಿಯಾಗಿದ್ದಾನೆ. ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾ ವೈರಲ್ ಆಗುತ್ತಿದೆ.
Video – ಪ್ರೇಯಸಿಗಾಗಿ ಇಡೀ ಊರನ್ನೇ ಕತ್ತಲಲ್ಲಿರಿಸಿದ ಪ್ರೇಮಿ!
ಸಾಮಾನ್ಯವಾಗಿ ಕೋಪ ಬಂದಾಗ ಅಥವಾ ಮನಸ್ತಾಪ ಉಂಟಾದಾಗ ಪ್ರೇಮಿಗಳು ಪರಸ್ಪರ ಮಾತನಾಡುವುದನ್ನು ನಿಲ್ಲಿಸುವುದುಂಟು. ಕೆಲವೊಮ್ಮೆ ಹುಡುಗಿಯರು ಫೋನ್ ಬ್ಲಾಕ್ ಮಾಡಿ ಅಥವಾ ಮೆಸೇಜ್‌ಗಳಿಗೆ ಪ್ರತಿಕ್ರಿಯಿಸದೇ ಇರುವುದು ಸಾಮಾನ್ಯ. ಹೀಗಾದಾಗ ಹುಡುಗರು ಸಾಮಾನ್ಯವಾಗಿ ಕ್ಷಮೆ ಕೇಳಿ ಅಥವಾ ಗೆಳೆಯರ ಸಹಾಯದಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಯತ್ನಿಸುತ್ತಾರೆ. ಆದರೆ, ಇಲ್ಲೊಬ್ಬ ಯುವಕ ತಾನು ಪ್ರೀತಿಸಿದ ಹುಡುಗಿ ಫೋನ್ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂಬ ಕಾರಣಕ್ಕೆ ಆಕೆಯ ಮನೆಯ ಕರೆಂಟ್ ವೈರ್ ಕತ್ತರಿಸುವ ಬದಲು, ಆಕೆಯ ಇಡೀ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾನೆ. ಇದರ ಪರಿಣಾಮವಾಗಿ ಇಡೀ ಗ್ರಾಮವೇ ಕತ್ತಲಲ್ಲಿ ಮುಳುಗುವಂತಾಗಿದೆ. Read this also : ಇನ್ಸ್ಟಾಗ್ರಾಂ ನಲ್ಲಿ ಹುಟ್ಟಿದ ಪ್ರೀತಿ, ಪ್ರಿಯತಮೆ 3 ಮಕ್ಕಳ ತಾಯಿ ಎಂದಾಗ ಪ್ರೇಮಿ ಶಾಕ್! ಆದರೂ ಮದುವೆಯಾಗಲು ನಿರ್ಧಾರ….!
Video – ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋ
ಈ ವಿಚಿತ್ರ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್ ಆದ ಈ ವಿಡಿಯೋದಲ್ಲಿ ಯುವಕನೊಬ್ಬ ವಿದ್ಯುತ್ ಕಂಬ ಏರಿ, ದೊಡ್ಡ ಕಟಿಂಗ್ ಪ್ಲೇಯರ್ ಸಹಾಯದಿಂದ ವಿದ್ಯುತ್ ತಂತಿಗಳನ್ನು ಕತ್ತರಿಸುತ್ತಿರುವುದು ಕಂಡುಬರುತ್ತದೆ. ಇದರಿಂದಾಗಿ ಇಡೀ ಗ್ರಾಮದ ವಿದ್ಯುತ್ ಸಂಪರ್ಕವೇ ಕಡಿತಗೊಂಡಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
Video – ವಿಡಿಯೋಗೆ ನೆಟ್ಟಿಗರ ಫನ್ನಿ ಪ್ರತಿಕ್ರಿಯೆ!
ಈ ವಿಡಿಯೋ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಪ್ರೇಯಸಿ ಫೋನ್ ಎತ್ತುತ್ತಿಲ್ಲ, ಹಾಗಾಗಿ ಕರೆಂಟ್ ಕಟ್ ಮಾಡಿದರೆ ಟಿವಿ ಆಫ್ ಮಾಡಿ ನನ್ನೊಡನೆ ಮಾತನಾಡುತ್ತಾಳೆ’ ಎಂಬ ಉದ್ದೇಶದಿಂದ ಈ ಯುವಕ ಹೀಗೆ ಮಾಡಿರಬಹುದು ಎಂದು ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ.