ಇತ್ತೀಚಿಗೆ ಕಡಿಮೆ ದರದಲ್ಲಿ ಇಂಟರ್ ನೆಟ್, ಮೊಬೈಲ್ ಗಳು ದೊರೆಯುತ್ತಿರುವ ಹಿನ್ನೆಲೆಯಲ್ಲಿ ಇದು ಅನೇಕರಿಗೆ ಅನುಕೂಲವಾಗಿದ್ದರೇ, ಅನೇಕರು ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅದರಲ್ಲೂ ಮೊಬೈಲ್ ಕಾರಣದಿಂದಲೇ ಕೆಲವೊಂದು ಕಡೆ ಕೊಲೆಗಳು, ಆತ್ಮಹತ್ಯೆಗಳೂ ಸಹ ನಡೆದಿದೆ. ಇದೀಗ ಅಂತಹುದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಮೊಬೈಲ್ ಗೇಮ್ ವಿಚಾರಕ್ಕಾಗಿ ಹುಡುಗನೋರ್ವ ತನ್ನ ತಮ್ಮನನ್ನೇ ಕೊಲೆ ಮಾಡಿರುವಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ನೆರಿಗಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮೃತ ದುರ್ದೈವಿಯನ್ನು ಪ್ರಣೀಶ್ ಎಂದು ಗುರ್ತಿಸಲಾಗಿದೆ. ಶಿವಕುಮಾರ್ ಎಂಬ ಯುವಕನ್ನು ಆರೋಪಿ ಎಂದು ಗುರ್ತಿಸಲಾಗಿದೆ. 18 ವರ್ಷದ ಶಿವಕುಮಾರ್ ತನ್ನ ಸಹೋದರನ್ನು ಸುತ್ತಿಗೆಯಿಂದ ಒಡೆದು ಸಾಯಿಸಿದ್ದಾನೆ. ಶಿವಕುಮಾರ್ ಶಾಲೆ ಬಿಟ್ಟು ಮನೆಯಲ್ಲಿದ್ದ ಎನ್ನಲಾಗಿದೆ. ಮೃತ ಪ್ರಣೀಶ್ ಮೊಬೈಲ್ ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಶಿವಕುಮಾರ್ ಮೊಬೈಲ್ ವಾಪಸ್ಸು ನೀಡುವಂತೆ ಕೇಳಿದ್ದಾನೆ. ಅದಕ್ಕೆ ಪ್ರಣೀಶ್ ನಿರಾಕರಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾಧ ಏರ್ಪಟ್ಟಿದೆ. ಈ ಸಮಯದಲ್ಲಿ ಶಿವಕುಮಾರ್ ಸುತ್ತಿಗೆ ಹಿಡಿದು ಪ್ರಣೀಶ್ ಗೆ ಮೊಬೈಲ್ ವಾಪಸ್ಸು ನೀಡು ಇಲ್ಲ ಹೊಡೆಯುತ್ತೇನೆ ಎಂದು ಬೆದರಿಸಿದ್ದಾನೆ. ಆದರೆ ಪ್ರಣೀಶ್ ಮೊಬೈಲ್ ವಾಪಸ್ಸು ನೀಡಲಿಲ್ಲ.
ಮೊಬೈಲ್ ವಾಪಸ್ಸು ನೀಡದೇ ಇರುವ ಕಾರಣದಿಂದ ಶಿವಕುಮಾರ್ ಪ್ರಣೀಶ್ ಗೆ ಹೊಡೆದಿದ್ದಾನೆ. ಅಣ್ಣನಿಂದ ಸತತವಾಗಿ ಪೆಟ್ಟು ತಿಂದ ಪ್ರಣೀಶ್ ರಕ್ತದ ಮಡುವಿನಲ್ಲಿ ಕುಸಿದು ಬಿದ್ದು, ಮೃತಪಟ್ಟಿದ್ದಾನೆ. ಇನ್ನೂ ಈ ಘಟನೆ ನಡೆದಾಗ ಮೃತರ ಪೋಷಕರು ಮನೆಯಲ್ಲಿರಲಿಲ್ಲ ಎನ್ನಲಾಗಿದೆ. ಮೊದಲಿಗೆ ಈ ವಿಚಾರದ ಬಗ್ಗೆ ಪೊಲೀಸರು ಶಿವಕುಮಾರ್ ರನ್ನು ಕೇಳಿದಾಗ ಕೊಲೆಯ ಬಗ್ಗೆ ತಿಳಿಸಿಲ್ಲ. ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂತ ಹೊರಹಾಕಿದ್ದಾನೆ. ಈ ಕುಟುಂಬ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅದೋನಿ ಮೂಲದವರು. ಈ ಘಟನೆ ಮೇ.15 ರಂದು ನಡೆದಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನದಲ್ಲಿಡಲಾಗಿದೆ ಎಂದು ತಿಳಿದುಬಂದಿದೆ.