Thursday, February 5, 2026
HomeNationalMobile Party: ಹೊಸ ಮೊಬೈಲ್ ಖರೀದಿಸಿದ ಸ್ನೇಹಿತ ಪಾರ್ಟಿ ಕೊಡಲಿಲ್ಲ ಸ್ನೇಹಿತರು ಮಾಡಿದ್ದಾದರೂ ಏನು ಗೊತ್ತಾ?

Mobile Party: ಹೊಸ ಮೊಬೈಲ್ ಖರೀದಿಸಿದ ಸ್ನೇಹಿತ ಪಾರ್ಟಿ ಕೊಡಲಿಲ್ಲ ಸ್ನೇಹಿತರು ಮಾಡಿದ್ದಾದರೂ ಏನು ಗೊತ್ತಾ?

Mobile Party: ಇಂದಿನ ಕಾಲದಲ್ಲಿ ವಿಶೇಷ ದಿನಗಳು, ವಿಶೇಷ ಸಮಯ, ಏನಾದರೂ ಹೊಸ ವಸ್ತುಗಳನ್ನು ಖರೀದಿಸಿದರೇ ಸ್ನೇಹಿತರು ಅಥವಾ ಸಂಬಂಧಿಕರು ಪಾರ್ಟಿ ಕೇಳೋದು ಸಹಜ. ಅದೇ ರೀತಿ ಸ್ನೇಹಿತನೋರ್ವ ಹೊಸ ಪೋನ್ ಖರೀದಿಸಿದ್ದಕ್ಕಾಗಿ ಪಾರ್ಟಿ (Mobile Party) ಕೊಡಿಸಲಿಲ್ಲ ಅಂತಾ ಸ್ನೇಹಿತರು ಚಾಕುವಿನಿಂದ ಇರಿದು ಕೊ*ಲೆ ಮಾಡಿದ್ದಾರೆ. ಈ ಧಾರುಣವಾದ ಘಟನೆ ನವದೆಹಲಿಯ ಷಕರ್‍ ಪುರ ಪ್ರಾಂತ್ಯದಲ್ಲಿ ನಡೆದಿದ್ದು, ಮೃತ ದುರ್ದೈವಿಯನ್ನು ಸಚಿನ್ (16) ಎಂದು ತಿಳಿದುಬಂದಿದೆ.

boy killed for mobile party 0

ಮಾಹಿತಿಯ ಪ್ರಕಾರ ನವದೆಹಲಿಯ ಷಕರ್‍ ಪುರ ವ್ಯಾಪ್ತಿಯ ಸಚಿನ್ ಎಂಬ ಯುವಕ ಹೊಸ ಪೋನ್ ತೆಗೆದುಕೊಂಡಿದ್ದಾನೆ. ಸೆ.23 ಸಂಜೆ 7 ಗಂಟೆಯ ಸಮಯದಲ್ಲಿ ಹೊಸ ಮೊಬೈಲ್ ಖರೀದಿಸಿದ ಮೃತ ಸಚಿನ್ ಮನೆಗೆ ವಾಪಸ್ಸಾಗುತ್ತಿದ್ದ. ಈ ವೇಳೆ ಅಲ್ಲಿನ ಅಂಗಡಿಯ ಬಳಿ ಸಚಿನ್ ಸ್ನೇಹಿತರು ಸಿಕ್ಕಿದ್ದಾರೆ. ಸಚಿನ್ ಬಳಿ ಹೊಸ ಪೋನ್ ನೋಡಿದ ಅವರು ಪಾರ್ಟಿ ಬೇಕೆಂದು ಡಿಮ್ಯಾಂಡ್ ಮಾಡಿದ್ದಾರೆ. ಆದರೆ ತನ್ನ ಬಳಿ ಹಣ ಇಲ್ಲ ಪಾರ್ಟಿ ಕೊಡೋಕೆ ಆಗಲ್ಲ ಅಂತಾ ಪಾರ್ಟಿ ನಿರಾಕರಿಸಿದ್ದಾನೆ. ಈ ಕಾರಣದಿಂದ ಸ್ನೇಹಿತರು ಹಾಗೂ ಸಚಿನ್ ನಡುವೆ ವಾಗ್ವಾದ ಶುರುವಾಗಿದೆ. ಈ ವಾಗ್ವಾದ ತೀವ್ರವಾಗಿ ದೊಡ್ಡ ಮಟ್ಟದ ಗಲಾಟೆಯಾಗಿದೆ.

ಈ ಜಗಳದಲ್ಲಿ ಓರ್ವ ಯುವಕ ಸಚಿನ್ ಗೆ ಹಿಂದಿನಿಂದ ಎರಡು ಬಾರಿ ಚಾಕುವಿನಿಂದ ಇರಿದಿದ್ದಾನೆ. ಈ ಕಾರಣದಿಂದ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾನೆ. ಬಳಿಕ ಅಲ್ಲಿದ್ದ ಬೇರೆ ಸ್ನೇಹಿತರೆಲ್ಲಾ ಅಲ್ಲಿಂದ ಓಡಿ ಹೋಗಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಸಚಿನ್ ಗೆ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇನ್ನೂ ಈ ಕುರಿತು ಪೊಲೀಸರಿಗೆ ಮಾಹಿತಿ ತಲುಪಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರುಮಾಡಿದ್ದಾರೆ. ಲಭ್ಯವಾದ ಸಿಸಿಟಿವಿ ವಿಡಿಯೋಗಳನ್ನು ಆಧರಿಸಿ ಮೂರು ಮಂದಿ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಮೂರು ಮಂದಿಯನ್ನೂ ವಶಕ್ಕೆ ಪಡೆದುಕೊಂಡ ಪೊಲೀಸರು ಅವರ ಬಳಿ ಸಚಿನ್ ಮೇಲೆ ದಾಳಿ ನಡೆಸಿದ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಜೊತೆಗೆ ಉಳಿದ ಆರೋಪಿಗಳನ್ನು ಪತ್ತೆಹಚ್ಚುವ ಕೆಲಸ ಚುರುಕಾಗಿದೆ ಎಂದು ಹೇಳಲಾಗಿದೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular