ಸಾಮಾನ್ಯವಾಗಿ ಗಂಡ-ಹೆಂಡತಿ ಜಗಳ ಅಂದಮೇಲೆ ಅಲ್ಲಿ ಕೋಪ, ತಾಪ, ವಿಚ್ಛೇದನ ಇವೆಲ್ಲಾ ಕಾಮನ್. ಆದರೆ ಇಲ್ಲೊಬ್ಬ ಪತಿ ತನ್ನ ಹೆಂಡತಿಯನ್ನು ಪ್ರಿಯಕರನ ಜೊತೆ ಕಳುಹಿಸಿಕೊಟ್ಟಿದ್ದಾನೆ! ಅಚ್ಚರಿಯ ವಿಷಯವೆಂದರೆ, ಇದಕ್ಕೆ ಕಾರಣ ಪ್ರೀತಿಯಲ್ಲ, ಬದಲಾಗಿ ಸೋಶಿಯಲ್ ಮೀಡಿಯಾದಲ್ಲಿ ಪತ್ನಿ ಹಾಕಿದ್ದ ಒಂದು ‘ನೀಲಿ ಡ್ರಮ್’ (Blue Drum Viral Case) ಪೋಸ್ಟ್. ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ನಡೆದ ಈ ಸಿನಿಮಾ ಸ್ಟೈಲ್ ಘಟನೆ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

Blue Drum Viral Case – ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದ ಫೇಸ್‌ಬುಕ್ ಪೋಸ್ಟ್
ರಾಜ್‌ಕುಮಾರ್ ಅವರ ಪತ್ನಿ ಕಳೆದ ಕೆಲವು ಸಮಯದಿಂದ ಪ್ರೇಮಿಯ ಜೊತೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ ಜಗಳ ನಡೆಯುತ್ತಿತ್ತು. ಕಳೆದ ವರ್ಷ ಜುಲೈನಿಂದ ಆಕೆ ತನ್ನ ಆರು ತಿಂಗಳ ಮಗುವನ್ನು ಬಿಟ್ಟು ತವರು ಮನೆ ಸೇರಿದ್ದರು. ಅಷ್ಟೇ ಅಲ್ಲದೆ, ಪ್ರೇಮಿಯ ಜೊತೆಗೂ ಕೆಲವು ದಿನ ಕಾಲ ಕಳೆದಿದ್ದರು. ಹೆಂಡತಿಯ ಅಕ್ರಮ ಸಂಬಂಧವನ್ನು ಮನೆಯವರಿಗೆ ತಿಳಿಸುತ್ತೇನೆ ಎಂದಾಗಲೆಲ್ಲಾ, “ಸಾಕ್ಷಿ ಎಲ್ಲಿದೆ?” ಎಂದು ಆಕೆ ಸವಾಲು ಹಾಕುತ್ತಿದ್ದರಂತೆ.
‘ನೀಲಿ ಡ್ರಮ್ ಮತ್ತು ಸಿಮೆಂಟ್’: ಆ ಒಂದು ಫೋಟೋ ಸೃಷ್ಟಿಸಿದ ನಡುಕ!
ಇತ್ತೀಚೆಗೆ ಹೆಂಡತಿ ತನ್ನ ಪ್ರೇಮಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ರಾಜ್‌ಕುಮಾರ್ ಆಕೆಯ ಫೋನ್ ಕಸಿದುಕೊಂಡು ಪರಿಶೀಲಿಸಿದ್ದಾರೆ. ಆಗ ಅವರಿಗೆ ಕಂಡ ದೃಶ್ಯಗಳು ಎದೆ ನಡುಗಿಸುವಂತಿದ್ದವು. ಫೋನ್‌ನಲ್ಲಿ ಕೆಲವು ಆಕ್ಷೇಪಾರ್ಹ ಫೋಟೋಗಳ ಜೊತೆಗೆ, ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದ “ಸಿಮೆಂಟ್ ಔರ್ ಡ್ರಮ್” (ಸಿಮೆಂಟ್ ಮತ್ತು ಡ್ರಮ್) ಎಂಬ ಕ್ಯಾಪ್ಷನ್ ಇರುವ ಪೋಸ್ಟ್‌ಗಳು ಕಂಡುಬಂದಿವೆ. ಇಷ್ಟೇ ಆಗಿದ್ದರೆ ರಾಜ್‌ಕುಮಾರ್ (Blue Drum Viral Case) ಅಷ್ಟು ಭಯಪಡುತ್ತಿರಲಿಲ್ಲವೇನೋ. ಆದರೆ ಆ ಪೋಸ್ಟ್ ಹಿಂದಿದ್ದ ಕ್ರೂರ ಇತಿಹಾಸ ಅವರನ್ನು ಬೆಚ್ಚಿಬೀಳಿಸಿದೆ.
ಮೀರತ್ ಹತ್ಯಾಕಾಂಡದ ನೆನಪು!
ಹಾಗಾದರೆ ಈ ‘ನೀಲಿ ಡ್ರಮ್’ ಕಥೆ ಏನು? ಕಳೆದ ವರ್ಷ ಮಾರ್ಚ್‌ನಲ್ಲಿ ಮೀರತ್‌ನಲ್ಲಿ ನಡೆದ ಒಂದು ಭೀಕರ ಕೊಲೆ ಪ್ರಕರಣ ಇಡೀ ದೇಶವನ್ನೇ ನಡುಗಿಸಿತ್ತು. ಮುಸ್ಕಾನ್ ರಸ್ತೋಗಿ ಎಂಬ ಮಹಿಳೆ ತನ್ನ ಪ್ರಿಯಕರನೊಂದಿಗೆ ಸೇರಿ ಪತಿ ಸೌರಭ್‌ನನ್ನು ಕೊಲೆ ಮಾಡಿದ್ದಳು. ಅಷ್ಟೇ ಅಲ್ಲದೆ, ಶವವನ್ನು 15 ತುಂಡುಗಳಾಗಿ ಕತ್ತರಿಸಿ ನೀಲಿ ಡ್ರಮ್‌ನಲ್ಲಿ ತುಂಬಿ, ಅದಕ್ಕೆ ಸಿಮೆಂಟ್ ಹಾಕಿ ಮುಚ್ಚಿದ್ದಳು.
ತನ್ನ ಹೆಂಡತಿಯ ಫೋನ್‌ನಲ್ಲಿಯೂ (Blue Drum Viral Case) ಇಂತಹದ್ದೇ ‘ನೀಲಿ ಡ್ರಮ್ ಮತ್ತು ಸಿಮೆಂಟ್’ ಉಲ್ಲೇಖವಿದ್ದಿದ್ದನ್ನು ಕಂಡು ರಾಜ್‌ಕುಮಾರ್ ಅವರಿಗೆ ತನ್ನ ಸ್ಥಿತಿಯೂ ಸೌರಭ್‌ನಂತೆಯೇ ಆಗಬಹುದು ಎಂಬ ಸಂಶಯ ಶುರುವಾಗಿದೆ. ಹೆಂಡತಿ ಕೂಡ ಜಗಳದ ಸಮಯದಲ್ಲಿ “ನಿನ್ನನ್ನು ನೀಲಿ ಡ್ರಮ್‌ನಲ್ಲಿ ಪ್ಯಾಕ್ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಳಂತೆ. Read this also : ಗಂಡನಿಗೆ ಹೊಡೆದು ಚಿನ್ನ, ಹಣದೊಂದಿಗೆ ಎಸ್ಕೇಪ್ ಆದ್ಲಾ ಪತ್ನಿ? ಯುಪಿ ವಿಡಿಯೋ ವೈರಲ್

ಕೊನೆಗೂ ಒಪ್ಪಂದಕ್ಕೆ ಬಂದ ಪತಿ
ತನ್ನ ಜೀವಕ್ಕೆ ಅಪಾಯವಿದೆ (Blue Drum Viral Case) ಎಂದು ಅರಿತ ರಾಜ್‌ಕುಮಾರ್ ತಕ್ಷಣ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸ್ ಠಾಣೆಯಲ್ಲಿ ಸಂಧಾನ ಪ್ರಕ್ರಿಯೆ ನಡೆಯುವಾಗ, ಆಕೆಯ ಪತ್ನಿ ತನಗೆ ಪ್ರೇಮಿಯ ಜೊತೆಗೇ ಇರಲು ಇಷ್ಟ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ. ರಾಜ್‌ಕುಮಾರ್ ಕೂಡ ಯಾವುದೇ ಹಠಕ್ಕೆ ಬೀಳದೆ, “ನನ್ನ ಜೀವ ಉಳಿದರೆ ಸಾಕು, ಆಕೆ ತನ್ನ ಪ್ರೇಮಿಯ ಜೊತೆಗೇ ಇರಲಿ” ಎಂದು ಹೇಳಿ ಹೆಂಡತಿಯನ್ನು ಬಿಟ್ಟುಕೊಟ್ಟಿದ್ದಾರೆ. ಈಗ ಈ ವಿಚಿತ್ರ ಪ್ರೇಮ ಪುರಾಣ ಮತ್ತು ‘ನೀಲಿ ಡ್ರಮ್’ ಭೀತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
