Video – ಪ್ರತಿ ಜೀವಕ್ಕೂ ಸ್ವತಂತ್ರವಾಗಿ ಬದುಕುವ ಹಕ್ಕಿದೆ (ಸ್ವಾತಂತ್ರ್ಯ). ಮನುಷ್ಯರಾದಿಯಾಗಿ ಪ್ರಾಣಿ-ಪಕ್ಷಿಗಳಿಗೂ ಇದು ಅನ್ವಯಿಸುತ್ತದೆ. ಆದರೆ ಕೆಲವೊಮ್ಮೆ ನಮ್ಮ ಸ್ವಾರ್ಥಕ್ಕೆ ಮುಗ್ಧ ಪಕ್ಷಿಗಳನ್ನು ಪಂಜರದಲ್ಲಿ ಬಂಧಿಸಿ, ಅದನ್ನು ವ್ಯಾಪಾರವನ್ನಾಗಿ ಮಾಡುವುದನ್ನು ನಾವು ನೋಡುತ್ತೇವೆ.

ಆದರೆ, ಇದೇ ಸಮಾಜದಲ್ಲಿ ಕೆಲವರು ಮಾಡುವ ಕಾರ್ಯಗಳು ಮನಸ್ಸಿಗೆ ಮುದ ನೀಡುವುದಲ್ಲದೆ, ಮಾನವೀಯತೆಯನ್ನು ಎತ್ತಿ ಹಿಡಿಯುತ್ತವೆ. ಇದೇ ರೀತಿ, ಪಂಜರದಲ್ಲಿದ್ದ ಹಕ್ಕಿಗಳನ್ನು (ಪಕ್ಷಿಗಳ ಸ್ವಾತಂತ್ರ್ಯ) ಹಣ ಕೊಟ್ಟು ಖರೀದಿಸಿ, ಮುಗಿಲೆತ್ತರಕ್ಕೆ ಹಾರಲು ಬಿಟ್ಟ ಒಬ್ಬ ಯುವಕನ ಹೃದಯಸ್ಪರ್ಶಿ ದೃಶ್ಯವು ಸದ್ಯ (Video) ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
Video – ಬಸ್ ಸ್ಟ್ಯಾಂಡ್ ಬಳಿ ನಡೆದ ಮಾನವೀಯ ಕಾರ್ಯ
ಮಂಜುನಾಥ್ ಲೋಕಾಪುರ್ (Manjuanath lokapur) ಎಂಬುವವರ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಬಸ್ ನಿಲ್ದಾಣದ ಪಕ್ಕದಲ್ಲಿ ಒಬ್ಬ ವ್ಯಕ್ತಿ ಪಂಜರದಲ್ಲಿ ಹಕ್ಕಿಗಳನ್ನು ಇಟ್ಟುಕೊಂಡು ಮಾರಾಟ ಮಾಡುವುದನ್ನು ಕಾಣಬಹುದು. ಜೀವನೋಪಾಯಕ್ಕಾಗಿ ಅವರು ಈ ಕೆಲಸ ಮಾಡುತ್ತಿರಬಹುದು.
ಅದೇ ದಾರಿಯಲ್ಲಿ ಸಾಗುತ್ತಿದ್ದ ಒಬ್ಬ ಯುವಕನ ಕಣ್ಣು ಈ ದೃಶ್ಯದ ಮೇಲೆ ಬಿದ್ದಿದೆ. ಹಿಂದೇಟು ಹಾಕದೆ, ಆತ ತಕ್ಷಣವೇ ಆ ಒಂದು ಪಂಜರದಲ್ಲಿ ಇಟ್ಟಿದ್ದ ಎಲ್ಲಾ ಪಕ್ಷಿಗಳನ್ನು ಖರೀದಿಸಿದ್ದಾನೆ (ಹಕ್ಕಿ ಬಿಡುಗಡೆ). ಆ ನಂತರ, ಒಂದೊಂದೇ ಹಕ್ಕಿಗಳನ್ನು ಕೈಯಲ್ಲಿ ಹಿಡಿದು, ಅವುಗಳನ್ನು ಮುಗಿಲಿಗೆ ಹಾರಲು ಬಿಟ್ಟಿದ್ದಾನೆ. ಆ ಕ್ಷಣದಲ್ಲಿ ಹಕ್ಕಿಗಳು ಪಂಜರದಿಂದ ಹೊರಬಂದು ಸಂತೋಷದಿಂದ ಹಾರಿದಾಗ, ಈ ಯುವಕನ ಮುಖದಲ್ಲಿ ಮೂಡಿದ ಸಾರ್ಥಕತೆಯ ನಗು ನಿಜಕ್ಕೂ ಅಮೂಲ್ಯ. ಇನ್ನೂ ಈ ಚಿಕ್ಕ ವಿಡಿಯೋ ಇಂಟರ್‌ನೆಟ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಮಾನವೀಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ (Video) ವ್ಯಕ್ತವಾಗುತ್ತಿದೆ.
Video – ನೆಟ್ಟಿಗರ ಪ್ರತಿಕ್ರಿಯೆಗಳು
ಈ ವಿಡಿಯೋ ನೋಡಿದ ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

- ಒಬ್ಬರು, “ದಯವಿಟ್ಟು ಯಾರೂ ಈ ರೀತಿ ಪಕ್ಷಿಗಳನ್ನು ಬಂಧಿಸಬೇಡಿ. ಮನುಷ್ಯರೇ ಒಂದು ಜಾಗದಲ್ಲಿ ಹೆಚ್ಚು ಹೊತ್ತು ಕೂರಲು ಸಾಧ್ಯವಿಲ್ಲ, ಇನ್ನು ಪಾಪ ಅವುಗಳ ಕಥೆಯೇನು?” ಎಂದು ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. Read this also : ಮಾನವೀಯತೆ ಮೆರೆದ ಖಾಕಿ, ಪರೀಕ್ಷೆ ಬರೆಯುತ್ತಿದ್ದ ತಾಯಿಯ ಮಗುವಿಗೆ ಎದೆಹಾಲು ಕುಡಿಸಿದ ಪೊಲೀಸ್..!
- ಇನ್ನೊಬ್ಬ ಬಳಕೆದಾರರು, “ಪಾರಿವಾಳಗಳಾಗಿದ್ದರೆ ಒಳ್ಳೆಯದು, ಆದರೆ ‘ಲವ್ ಬರ್ಡ್ಸ್’ (Love Birds) ಮನೆಯ ಹೊರಗಿನ ವಾತಾವರಣದಲ್ಲಿ ಬದುಕುವುದಿಲ್ಲ, ದಯವಿಟ್ಟು ಪಾರಿವಾಳಗಳನ್ನು ಬಿಡುಗಡೆ ಮಾಡಿ” ಎಂದು ಸಲಹೆ ನೀಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
- ಮತ್ತೊಬ್ಬರು ಬೇಸರದಿಂದ, “ಈ ಪಕ್ಷಿಗಳಿಗೆ ಸ್ವತಂತ್ರವಾಗಿ ಬದುಕುವ ಕಲೆ ಗೊತ್ತಿಲ್ಲ. ಪಾಪ ಆ ಪಕ್ಷಿಗಳನ್ನು ಕೆಲವೇ ಗಂಟೆಗಳಲ್ಲಿ ಕಾಗೆ ಅಥವಾ ಹದ್ದು ಹಿಡಿದುಬಿಡಬಹುದು” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಪ್ರತಿಕ್ರಿಯೆಗಳು ಏನೇ ಇರಲಿ, ಪ್ರಕೃತಿಯಲ್ಲಿ ಪ್ರತಿ ಜೀವಿಯು ಮುಕ್ತವಾಗಿ ಬದುಕುವ ಹಕ್ಕನ್ನು ಗೌರವಿಸಬೇಕು ಎಂಬ ಸಂದೇಶವನ್ನು ಈ ಯುವಕನ ಹೃದಯ ವೈಶಾಲ್ಯ ಎತ್ತಿ ಹಿಡಿದಿದೆ. ನಿಮ್ಮ ಪ್ರಕಾರ, ಇಂತಹ ಸಣ್ಣ ಜೀವಿಗಳ ಸ್ವಾತಂತ್ರ್ಯದ ಕುರಿತು ನಿಮ್ಮ ಅಭಿಪ್ರಾಯವೇನು? ಕಾಮೆಂಟ್ ಮಾಡಿ ತಿಳಿಸಿ.
