Monday, June 30, 2025
HomeEntertainmentBigg Boss Kannada Season 11: ಈ ಬಾರಿಯೂ ಬಿಗ್ ಬಾಸ್ ಶೋ ಹೋಸ್ಟ್ ಮಾಡೋದು...

Bigg Boss Kannada Season 11: ಈ ಬಾರಿಯೂ ಬಿಗ್ ಬಾಸ್ ಶೋ ಹೋಸ್ಟ್ ಮಾಡೋದು ಕಿಚ್ಚ ಸುದೀಪ್, ಸೆ.29 ರಿಂದ ಹೌದು ಸ್ವಾಮಿ ಸೌಂಡ್ ಶುರು.….!

ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಹೈ ಟಿ.ಆರ್‍.ಪಿ ಹೊಂದಿರುವ ಬಿಗ್ ಬಾಸ್ ಶೋ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಸುಮಾರು ದಿನಗಳಿಂದ ಬಿಗ್ ಬಾಸ್ ಸೀಸನ್ 11 (Bigg Boss Kannada Season 11) ರ ಬಗ್ಗೆ ಭಾರಿ ಕುತೂಹಲ ಮೂಡಿಸಿತ್ತು, ಈ ಬಾರಿ ಈ ಶೋ ಅನ್ನು ಸುದೀಪ್ ರವರ ಬದಲಿಗೆ ಬೇರೆಯವರು ಹೋಸ್ಟ್ ಮಾಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಇದು ಬಿಗ್ ಬಾಸ್ ಅಭಿಮಾನಿಗಳ ನಿರಾಸೆಯಾಗಿತ್ತು. ಇದೀಗ ಬಿಗ್ ಬಾಸ್ ಸೀಸನ್ 11 (Bigg Boss Kannada Season 11) ಹೋಸ್ಟ್ ಮಾಡುವುದು ಕಿಚ್ಚ ಸುದೀಪ್ ರವರೇ ಎಂಬುದು ಖಚಿತಗೊಂಡಿದ್ದು, ಈ ಸಂಬಂಧ ಪ್ರೊಮೋ ಹೊರಬಂದಿದೆ.

Bigg Boss Kannada Season 11
Bigg Boss Kannada Season 11

ಬಿಗ್‌ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ಗಾಗಿ ಕಾಯುತ್ತಿದ್ದ ವೀಕ್ಷಕರಿಗೆ ಸೆ.15 ರಂದು ದೊಡ್ಡ ಸುದ್ದಿ ಸಿಕ್ಕಿದೆ. ಈ ಸೀಸನ್ ಆಂಕರ್‍ ಬಗ್ಗೆ ಇರುವಂತಹ ಅನುಮಾನಗಳಿಗೂ ತೆರೆ ಬಿದಿದ್ದೆ. ಬಿಗ್ ಬಾಸ್ ಕನ್ನಡ ಸೀಸನ್ 11 ಇದೇ ಸೆ.29 ರಿಂದ ಆರಂಭವಾಗಲಿದೆ. ಈ ಬಾರಿಯೂ ಕಿಚ್ಚ ಸುದೀಪ್ ರವರೇ ಹೋಸ್ಟ್ ಮಾಡಲಿದ್ದಾರೆ. ಈ ಕುರಿತು ಕಲರ್ಸ್ ಕನ್ನಡ ಟಿ.ವಿ.ಯಲ್ಲಿ ಹೊಸ ಪ್ರೋಮೋ ರಿಲೀಸ್ ಮಾಡಲಾಗಿದೆ. ಈ ಪ್ರೊಮೋ ದಲ್ಲಿ ಕಿಚ್ಚ ಸುದೀಪ್ ಅಬ್ಬರಿಸಿದ್ದಾರೆ. ಈ ಪ್ರೊಮೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಈ ಪ್ರೊಮೋ ಮೂಲಕ ಬಿಗ್‌ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ಆಂಕರ್‍ ಕುರಿತಂತೆ ಇರುವ ಎಲ್ಲಾ ಅನುಮಾನಗಳಿಗೂ ತೆರೆ ಬಿದಿದ್ದೆ.

ಲಿಂಕ್ ಇಲ್ಲಿದೆ ನೋಡಿ: https://x.com/bengalurubouy2/status/1835313834896081118

ಕನ್ನಡದ ಬಿಗ್ ಬಾಸ್ (Bigg Boss Kannada Season 11) ಶೋ ಅನ್ನು ಕಿಚ್ಚ ಸುದೀಪ್ ತುಂಬಾ ಯಶಸ್ವಿಯಾಗಿ ನಡೆಸಿಕೊಡುತ್ತಾ ಬರುತ್ತಾರೆ. ಸುದೀಪ್ ರವರ ಕಾರಣದಿಂದಾಗಿ ಬಿಗ್‌ ಬಾಸ್ ಕನ್ನಡ ಸೀಸನ್ 10 ಸೀಸನ್ ಗಳು ತುಂಬಾನೆ ಖ್ಯಾತಿ ಪಡೆದುಕೊಂಡಿತ್ತು. ಆದರೆ ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ಆಂಕರ್‍ ಬದಲಾಗುತ್ತಾರೆ ಎಂಬ ಸುದ್ದಿಗಳು ಕೆಲವು ದಿನಗಳಿಂದ ಕೇಳಿಬರುತ್ತಿತ್ತು. ಸುದೀಪ್ ಬದಲಿಗೆ ರಮೇಶ್, ರಿಷಭ್ ಶೆಟ್ಟಿ ಸೇರಿದಂತೆ ಹಲವರ ಹೆಸರುಗಳು ಬಿಗ್ ಬಾಸ್ ಹೋಸ್ಟ್ ಮಾಡುವುದಾಗಿ ಕೇಳಿಬಂದಿತ್ತು. ಆದರೆ ಇದು ಕೇವಲ ರೂಮರ್‍ ಗಳಾಗಿಯೇ ಉಳಿದಿದೆ. ಗಿಚ್ಚಿ ಗಿಲಿಗಿಲಿ 3 ರ ಗ್ಯ್ರಾಂಡ್ ಫಿನಾಲೆಯ ಸಂಚಿಕೆಯ ನಡುವೆ ಬಿಗ್‌ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ಹೊಸ ಪ್ರೋಮೋ ಬಿತ್ತರವಾಗಿದೆ.

ಲಿಂಕ್ ಇಲ್ಲಿದೆ ನೋಡಿ: https://x.com/bengalurubouy2/status/1835306515625894195

ಇನ್ನೂ ಬಿಗ್‌ ಬಾಸ್ ಕನ್ನಡ ಸೀಸನ್ 11 ಹೊಸ ಪ್ರೊಮೋದಲ್ಲಿ ಕಿಚ್ಚ ಸುದೀಪ್ ಖಡಕ್ ಡೈಲಾಗ್ ಒಂದನ್ನು ಹೊಡೆದಿದ್ದಾರೆ. 10 ವರ್ಷದಿಂದ ಒಂದು ಲೆಕ್ಕ, ಈಗಿಂದ ಬೇರೆನೇ ಲೆಕ್ಕ, ಇದು ಹೊಸ ಅಧ್ಯಾಯ ಎಂದು ಕಿಚ್ಚ ಸುದೀಪ್ ಡೈಲಾಗ್ ಹೊಡೆದಿದ್ದಾರೆ. ಈ ಪ್ರೊಮೋ ನೋಡಿದ ಕಿಚ್ಚ ಸುದೀಪ್ ಅಭಿಮಾನಿಗಳು ಹಾಗೂ ಬಿಗ್‌ ಬಾಸ್ ಕನ್ನಡ (Bigg Boss Kannada Season 11) ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ. ಇನ್ನೂ ಕಳೆದ ಬಾರಿಯ ಸೀಸನ್ ತುಂಬಾನೆ ಸದ್ದು ಮಾಡಿತ್ತು. ಇದೀಗ ಬಿಗ್‌ ಬಾಸ್ ಕನ್ನಡ ಸೀಸನ್ 11 (Bigg Boss Kannada Season 11) ಕುರಿತು ಸಹ ತುಂಬಾನೆ ನಿರೀಕ್ಷೆ ಹುಟ್ಟಿಕೊಂಡಿದೆ. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ಬರಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಸಿನೆಮಾ ಸೆಲೆಬ್ರೆಟಿಗಳು, ಕಿರುತೆರೆಯ ಕಲಾವಿದರು, ಸೋಷಿಯಲ್ ಮಿಡಿಯಾ ಸ್ಟಾರ್‍ ಗಳು, ಖ್ಯಾತ ಪತ್ರಕರ್ತರು ಸೇರಿದಂತೆ ಹಲವು ಕ್ಷೇತ್ರಗಳಿಂದ ಸ್ಫರ್ಧಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದ್ದು, ಶೀಘ್ರದಲ್ಲೇ ಸ್ಪರ್ಧಿಗಳು ವಿವರ ಹೊರಬರಲಿದೆ ಎಂದು ತಿಳಿದುಬಂದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular