Bhopal – ಇತ್ತೀಚೆಗೆ ಸಮಾಜದಲ್ಲಿ ವಿಕೃತ ಕಾಮಾಂಧರ ಸಂಖ್ಯೆ ಹೆಚ್ಚಾಗುತ್ತಿದ್ದು, ಹೆಣ್ಣುಮಕ್ಕಳಷ್ಟೇ ಅಲ್ಲದೆ, ಗಂಡು ಮಕ್ಕಳ ಮೇಲೂ ದೌರ್ಜನ್ಯ ಎಸಗುತ್ತಿರುವ ಘಟನೆಗಳು ವರದಿಯಾಗುತ್ತಿವೆ. ಇಂತಹದ್ದೇ ಒಂದು ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಬೆಳಕಿಗೆ ಬಂದಿದೆ.
Bhopal – ಸ್ನೇಹಿತನ ಪರಿಚಯ, ಕಾಮದ ಕರಾಳ ಬಯಕೆ
ಪೊಲೀಸರು ಮತ್ತು ಸಂತ್ರಸ್ತ ಯುವಕ ನೀಡಿದ ಮಾಹಿತಿ ಪ್ರಕಾರ, ಭೋಪಾಲ್‌ನ ಒಬೆದುಲ್ಲಾ ಗಂಜ್ ನಿವಾಸಿಯೊಬ್ಬರು ಉನ್ನತ ವ್ಯಾಸಂಗಕ್ಕಾಗಿ ತಮ್ಮ ಸಹೋದರಿಯ ಅತ್ತೆ-ಮಾವನ ಮನೆಗೆ ಹೋಗಿದ್ದರು. ಅಲ್ಲಿ ಅವರಿಗೆ ನರ್ಮದಾಪುರದ ಶುಭಂ ಯಾದವ್ ಎಂಬಾತನ ಪರಿಚಯವಾಯಿತು. ಈ ಪರಿಚಯ ಸ್ನೇಹವಾಗಿ ಬೆಳೆಯಿತು, ಇಬ್ಬರೂ ಒಟ್ಟಿಗೆ ಓಡಾಡಲು ಶುರುಮಾಡಿದರು. ಈ ಸಂದರ್ಭದಲ್ಲಿ, ಅಶೋಕ ಗಾರ್ಡನ್ ಪ್ರದೇಶದಲ್ಲಿ ಶುಭಂ ಜೊತೆ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದಾಗ, ಶುಭಂ ತನ್ನ ಮೇಲೆ ಪ್ರೀತಿ ಮತ್ತು ಆಸಕ್ತಿ ತೋರಿಸಲು ಪ್ರಾರಂಭಿಸಿದ ಎಂದು ಸಂತ್ರಸ್ತ ಯುವಕ ಹೇಳಿದ್ದಾನೆ.
Bhopal – ಬಲವಂತದ ಹಾರ್ಮೋನ್ ಚಿಕಿತ್ಸೆ ಮತ್ತು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ
ಕೆಲವು ತಿಂಗಳ ಹಿಂದೆ, ಶುಭಂ ತನ್ನನ್ನು ಪದೇ ಪದೇ ತಲೆನೋವಿಗೆ ಚಿಕಿತ್ಸೆ ಪಡೆಯುವ ನೆಪದಲ್ಲಿ ಭೋಪಾಲ್‌ನ ಎಂಪಿ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದನು. ಈ ಸಂದರ್ಭದಲ್ಲಿ, ಶುಭಂ ತನಗೆ ತಿಳಿಯದಂತೆ, ತಲೆನೋವಿನ ಚಿಕಿತ್ಸೆಯ ಹೆಸರಿನಲ್ಲಿ ಹಾರ್ಮೋನ್ ಥೆರಪಿ ಮಾಡಿಸಿದ್ದಾನೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ. ಚಿಕಿತ್ಸೆಯ ನಂತರ ಒಂದು ತಿಂಗಳಲ್ಲಿ ತನ್ನ ದೇಹದಲ್ಲಿ ಬದಲಾವಣೆಗಳಾಗುವುದನ್ನು ಗಮನಿಸಿದಾಗಿ ತಿಳಿಸಿದ್ದಾನೆ. ಈ ಬದಲಾವಣೆಗಳಿಂದ ತಾನು ತುಂಬಾ ಗೊಂದಲಕ್ಕೊಳಗಾಗಿದ್ದೆ ಎಂದು ಹೇಳಿದ್ದಾರೆ. ತನ್ನ ದೇಹದಲ್ಲಿ ಏನಾಗುತ್ತಿದೆ ಎಂದು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮೊದಲು, ಶುಭಂ ತನ್ನನ್ನು ಇಂದೋರ್‌ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತನಗೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿ, ಬಲವಂತವಾಗಿ ತನ್ನನ್ನು ಪುರುಷನಿಂದ ಮಹಿಳೆಯನ್ನಾಗಿ ಪರಿವರ್ತಿಸಿದ್ದಾನೆ ಎಂದು ತಿಳಿಸಿದ್ದಾನೆ. ಈ ಶಸ್ತ್ರಚಿಕಿತ್ಸೆಗಾಗಿ ಶುಭಂ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
Bhopal – ಲೈಂಗಿಕ ದೌರ್ಜನ್ಯ ಮತ್ತು ಬ್ಲಾಕ್‌ಮೇಲ್
ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಯ ನಂತರ ಶುಭಂ ತನ್ನನ್ನು ಮತ್ತೆ ನರ್ಮದಾಪುರಕ್ಕೆ ಕರೆತಂದನು. ಅಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದನು. ಅಷ್ಟೇ ಅಲ್ಲದೆ, ಇದಕ್ಕಾಗಿ ತನ್ನನ್ನು ಪದೇ ಪದೇ ಹಿಂಸಿಸುತ್ತಿದ್ದನು ಎಂದು ಸಂತ್ರಸ್ತ ಯುವಕ ಆರೋಪಿಸಿದ್ದಾನೆ. ಇದೀಗ ತನ್ನಿಂದ 10 ಲಕ್ಷ ರೂಪಾಯಿ ನೀಡುವಂತೆ ಬ್ಲಾಕ್‌ಮೇಲ್ ಮಾಡುತ್ತಿದ್ದಾನೆ, ಹಣ ನೀಡದಿದ್ದರೆ ತನ್ನ ಜೀವನವನ್ನು ಹಾಳುಮಾಡುತ್ತೇನೆ ಎಂದು ಶುಭಂ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತ ಆರೋಪಿಸಿದ್ದಾನೆ.
Read this also : ಸೈಬರ್ ಕ್ರಿಮಿನಲ್‌ಗಳ ಹೊಸ ತಂತ್ರ: ‘ಅಶ್ಲೀಲ ವಿಡಿಯೋ’ ನೋಡುವವರಿಗೆ ಕಾದಿದೆ ಭಾರಿ ಸಂಕಷ್ಟ…!
Bhopal – ಪೊಲೀಸ್ ತನಿಖೆ
ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಗಾಂಧಿನಗರ ಪೊಲೀಸ್ ಠಾಣೆಯ ಇನ್‌ಚಾರ್ಜ್ ವಿಜೇಂದ್ರ ಮಾರ್ಸ್ಕೋಲ್, ಸಂತ್ರಸ್ತ ಯುವಕನ ದೂರಿನ ಆಧಾರದ ಮೇಲೆ, ಘಟನೆಯ ಬಗ್ಗೆ ಜೀರೋ ಎಫ್‌ಐಆರ್ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಶಾರೀರಿಕ ಶೋಷಣೆ ಮತ್ತು ಬ್ಲಾಕ್‌ಮೇಲ್ (Blackmail) ಗಂಭೀರ ಆರೋಪಗಳಿವೆ. ಘಟನೆ ಮುಖ್ಯವಾಗಿ ನರ್ಮದಾಪುರದಲ್ಲಿ ನಡೆದ ಕಾರಣ, ಮುಂದಿನ ತನಿಖೆಗಾಗಿ ಪ್ರಕರಣದ ಡೈರಿಯನ್ನು ಅಲ್ಲಿಗೆ ವರ್ಗಾಯಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದ್ದು, ಸದ್ಯಕ್ಕೆ ಈ ಪ್ರಕರಣದಲ್ಲಿ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.