Bharat Bandh – ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ಬಿಸಿ ಊಟ ನೌಕರರು, ಗ್ರಾಮ ಪಂಚಾಯಿತಿ ನೌಕರರು, ಅಂಗನವಾಡಿ ಕಾರ್ಯಕರ್ತರು ಸೇರಿ ನೂರಾರು ಕಾರ್ಯಕರ್ತರು ಕರ್ನಾಟಕ ಪ್ರಾಂತರೈತ ಸಂಘ, ಸಿಐಟಿಯು, ಡಿವೈಎಫ್‌ಐ ಹಾಗೂ ದಲಿತ ಸಂಘಗಳ ಸಹಕಾರದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣ ಮುಖ್ಯ ಬೀದಿಗಳಲ್ಲಿ ಬೃಹತ್ ಮೇರವಣಿಗೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ ಯಶಸ್ವಿಯಾಯಿತು.
Bharat Bandh – ಅಭಿವೃದ್ಧಿಯ ಹೆಸರಲ್ಲಿ ಕಾರ್ಪೊರೇಟ್ ಗುಲಾಮಗಿರಿ
ಕೇಂದ್ರ ಸರ್ಕಾರ ಇತ್ತೀಚಿಗೆ ಜಾರಿ ಮಾಡಿರುವಂತಹ 4 ಕಾರ್ಮಿಕ ನೀತಿಗಳು ಕಾರ್ಮಿಕ ವಿರೋಧಿ ನೀತಿಗಳಾಗಿದ್ದು, ಇದು ಕಾರ್ಮಿಕರನ್ನು ಕಾರ್ಪೋರೇಟ್ ಗುಲಾಮರನ್ನಾಗಿ ಮಾಡುವ ಹುನ್ನಾರವಾಗಿದೆ ಎಂದು ಗುಡಿಬಂಡೆ ಸಿಐಟಿಯು ಕಾರ್ಯದರ್ಶಿ ಭಾಗ್ಯಮ್ಮ ಆರೋಪಿಸಿದರು. ಕೇಂದ್ರ ಸರ್ಕಾರ ಅಭಿವೃದ್ದಿ ಹೆಸರಿನಲ್ಲಿ ಕಾರ್ಪೋರೇಟರ್ ಕಂಪನಿಗಳ ಸೇವಕರನ್ನಾಗಿ ಮಾಡಲು ವೇತನ ಸಂಹಿತೆಯಲ್ಲಿ 4 ಕಾನೂನು, ಕೈಗಾರಿಕಾ ಬಾಂಧವ್ಯ ಸಂಹಿತೆಯಲ್ಲಿ 3 ಕಾನೂನು ಸೇರಿದಂತೆಒಟ್ಟು 29 ಕಾನೂನುಗಳನ್ನು 4 ಸಂಹಿತೆಗಳನ್ನು ರೂಪಿಸಲಾಗಿದೆ. ದೇಶದಲ್ಲಿ ಅತಿ ಹೆಚ್ಚು ಅಸಂಘಟಿತ ಸ್ಕೀಂ ಮತ್ತು ಅನೌಪಚಾರಿಕ ಕಾರ್ಮಿಕರನ್ನು ಕಾನೂನುಗಳಡಿಯಲ್ಲಿ ತರಬೇಕು ಮತ್ತು 600 ರೂಗಳನ್ನು ಒಂದು ದಿನದ ವೇತನ ನಿಗಧಿ ಮಾಡಬೇಕೆಂಬ ಕೇಂದ್ರಕಾರ್ಮಿಕರ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ವೇತನ ಸಂಹಿತೆಯಲ್ಲಿ 15ನೇ ಐಎಲ್‌ಸಿಯ ಕನಿಷ್ಟ ವೇತನ, ನ್ಯಾಯ ಸಮ್ಮತ ಮತ್ತು ಜೀವಿತ ವೇತನಗಳನ್ನು ನಿಗದಿ ಮಾಡುವ ಅಂಶಗಳನ್ನು ಒಳಗೊಳ್ಳುವ ಬದಲಿಗೆ 187 ರೂ ನೆಲದ ಕೂಲಿಯನ್ನು ನೀಡಲು ನಿರ್ಧರಿಸಿದೆ. ಇವೆಲ್ಲವೂ ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುವ ಹುನ್ನಾರವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಕೂಡಲೇ ಕೆಲಸಕ್ಕೆ ತಕ್ಕಂತೆ ವೇತನ ನೀಡಬೇಕು ಎಂದು ಒತ್ತಾಯಿಸಿದರು.
Bharat Bandh – ಕೇಂದ್ರ ಸರ್ಕಾರಕ್ಕೆ ಬಡವರು, ಕಾರ್ಮಿಕರೆಂದರೆ ಗುಲಾಮರೇ?
ಬಳಿಕ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಜಯರಾಮರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರಕ್ಕೆ ಬಡವರು, ದಲಿತರು, ಕಾರ್ಮಿಕರು, ರೈತರು ಎಂದರೇ ಗುಲಾಮರೆಂಬ ಕೀಳು ಭಾವನೆಯನ್ನು ಹೊಂದಿದೆ. ಈಗಾಗಲೇ ರೈತರನ್ನು ಬೀದಿಗೆ ಬರುವಂತೆ ಮಾಡುವ ಹಲವು ಕಾಯ್ದೆಗಳನ್ನು ಜಾರಿ ಮಾಡಿದೆ. ಅನೇಕ ಸಂಘಟನೆಗಳು ರೈತ ವಿರೋಧಿ ನೀತಿಗಳ ವಿರುದ್ದ ಹೋರಾಟಗಳನ್ನು ಸಹ ಮಾಡಿದೆ. ಇದೀಗ ಹೊಸದಾಗಿ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿ ಮಾಡುವ ಮೂಲಕ ಕಾರ್ಮಿಕರ ಹೊಟ್ಟೆ ಮೇಲೆ ಬರೆ ಎಳೆಯುವಂತೆ ಮಾಡಿದೆ.
Read this also : ಮೆದುಳಿಗೆ ಹಾನಿ ಮಾಡುವ ಒತ್ತಡ: ರಕ್ಷಿಸಿಕೊಳ್ಳಲು 5 ಸುಲಭ ಮಾರ್ಗಗಳು…!
ಕೇಂದ್ರ ಸರ್ಕಾರ ಬಂಡವಾಳಷಾಹಿ, ಕಾರ್ಪೋರೇಟ್ ಕಂಪನಿಗಳ ಪರವಾಗಿದೆ ಎಂದು ಹೇಳೋಕೆ ಈ ನಾಲ್ಕು ಕಾರ್ಮಿಕ ನೀತಿಗಳು ಸ್ಪಷ್ಟ ಉದಾಹರಣೆಯಾಗಿದೆ. ಕೇಂದ್ರ ಸರ್ಕಾರ ಕೂಡಲೇ ಈ ಕಾರ್ಮಿಕ ವಿರೋಧಿ ನೀತಿಗಳನ್ನು ರದ್ದು ಗೊಳಿಸದೇ ಇದ್ದರೇ ಮುಂದೆ ಮತ್ತಷ್ಟು ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.
Bharat Bandh – ಮುಷ್ಕರದಲ್ಲಿ ಭಾಗಿಯಾಗಿದ್ದ ಪ್ರಮುಖರು
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಇನ್ನು ತಾಲೂಕಿನ ಎಲ್ಲಾ ಬಿಸಿ ಊಟ ನೌಕರರು ಕೆಲಸಕ್ಕೆ ರಜೆ ಹಾಕಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಸಿಐಟಿಯು ತಾಲೂಕು ಅಧ್ಯಕ್ಷೆ ಮಂಜುಳ, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದಜಿ ಲ್ಲಾ ಸಹ ಕಾರ್ಯದರ್ಶಿ ಬೆಣ್ಣೆಪರ್ತಿ ಆದಿನಾರಾಯಣಸ್ವಾಮಿ, ಡಿವೈಎಫ್‌ಐ ತಾಲೂಕು ಅಧ್ಯಕ್ಷ ಶ್ರೀನಿವಾಸ, ಉಪಾಧ್ಯಕ್ಷ ದೇವರಾಜು, ಕೃಷಿ ಕೂಲಿ ಕಾರ್ಮಿಕರ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ರಮಣ, ಮುಖಂಡರಾದ ರಾಜಪ್ಪ, ರಾಮು ಸೇರಿತಾಲೂಕು ಬಿಸಿ ಊಟ ನೌಕರರು ಹಾಜರಿದ್ದರು.