ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆ ಎಂಬುದು ಮತ್ತೆ ಪ್ರಶ್ನಾರ್ಥಕ ಚಿಹ್ನೆಯಾಗಿ ಮೂಡಿದೆ. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯೊಬ್ಬಳಿಗೆ (Bengaluru Woman) ಬೆತ್ತಲೆ ವ್ಯಕ್ತಿಯೊಬ್ಬ ಕಿರುಕುಳ ನೀಡಿ, ಬೆನ್ನಟ್ಟಿದ ಘಟನೆ ಈಗ ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಸಂತ್ರಸ್ತ ಯುವತಿ ತನಗಾದ ಅನ್ಯಾಯವನ್ನು ಸ್ವತಃ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Bengaluru Woman – ನಡೆದಿದ್ದೇನು?
ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಯುವತಿ ಕೆಲಸ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಯುವತಿಯ ಆರೋಪದಂತೆ, ವ್ಯಕ್ತಿಯೊಬ್ಬ ಕಾರಿನೊಳಗೆ ಸಂಪೂರ್ಣ ಬೆತ್ತಲೆಯಾಗಿ ಕುಳಿತು ಆಕೆಯನ್ನು ಹಿಂಬಾಲಿಸಿದ್ದಾನೆ. ಅಷ್ಟೇ ಅಲ್ಲದೆ, ಆಕೆಯನ್ನು ಹತ್ತಿರ ಕರೆಯುತ್ತಾ ಅಸಭ್ಯವಾಗಿ ವರ್ತಿಸಿದ್ದಾನೆ.
ಯುವತಿ ವಿಡಿಯೋದಲ್ಲಿ ಅಳುತ್ತಲೇ ತನ್ನ ಅಳಲನ್ನು ತೋಡಿಕೊಂಡಿದ್ದು, “ಅವನು ಕಾರಿನ ಒಳಗಿದ್ದಾನೆ, ನನ್ನನ್ನು ಕರೆಯುತ್ತಿದ್ದಾನೆ. ನಾನು ಸಹಾಯಕ್ಕಾಗಿ ಕೂಗಿಕೊಂಡರೂ ಯಾರೂ ನನ್ನ ನೆರವಿಗೆ ಬರುತ್ತಿಲ್ಲ” ಎಂದು ಹಿಂದಿಯಲ್ಲಿ (Help, Help Bolri Hu Koi Sunn Nhi Rha) ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. Read this also : ಅಲಿಗಢದಲ್ಲಿ ಪತಿಯನ್ನು ಮಂಚಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪತ್ನಿ, ಉತ್ತರ ಪ್ರದೇಶದ ವೈರಲ್ ವಿಡಿಯೋದ ಅಸಲಿಯತ್ತೇನು?
ಮಾನವೀಯತೆ ಸತ್ತಿದೆಯೇ? ಯುವತಿಯ ಆಕ್ರೋಶ
ಈ ಘಟನೆಯಲ್ಲಿ ಅತ್ಯಂತ ಬೇಸರದ ಸಂಗತಿಯೆಂದರೆ, ರಸ್ತೆಯಲ್ಲಿ ಜನರಿದ್ದರೂ ಯಾರೂ ಆಕೆಯ ಸಹಾಯಕ್ಕೆ ಬರದಿರುವುದು. ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಯುವತಿ: “ನಾನು ಆಫೀಸ್‌ನಿಂದ ಮನೆಗೆ ಹೋಗುವಾಗ ಕಾರಿನಲ್ಲಿದ್ದ ವ್ಯಕ್ತಿ ಬೆತ್ತಲೆಯಾಗಿ ನನ್ನನ್ನು ಕರೆಯುತ್ತಿದ್ದ. ರಸ್ತೆಯಲ್ಲಿ ಜನರು ಓಡಾಡುತ್ತಿದ್ದರೂ, (Bengaluru Woman) ನಾನು ಕಿರುಚಾಡಿದರೂ ಯಾರೂ ಸಹಾಯ ಮಾಡಲಿಲ್ಲ. ಆತ ಕಾರನ್ನು ನನ್ನತ್ತಲೇ ಚಲಾಯಿಸಿಕೊಂಡು ಬಂದಾಗ ಪ್ರಾಣಭಯವಾಯಿತು. ಜೀವ ಉಳಿಸಿಕೊಳ್ಳಲು ವಿಡಿಯೋ ಮಾಡಿದೆ,” ಎಂದು ನೋವು ಹಂಚಿಕೊಂಡಿದ್ದಾರೆ.

ನೆಟ್ಟಿಗರ ಆಕ್ರೋಶ
ಈ ವಿಡಿಯೋ ವೈರಲ್ (Bengaluru Woman) ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
- “ಇಂತಹ ಘಟನೆಗಳು ನಡೆಯುತ್ತಿರುವುದು ನಾಚಿಕೆಗೇಡು,” ಎಂದು ಒಬ್ಬರು ಕಮೆಂಟ್ ಮಾಡಿದರೆ,
- ಮತ್ತೊಬ್ಬ ಮಹಿಳೆ “ನನಗೂ ಇಂತಹದ್ದೇ ಅನುಭವವಾಗಿತ್ತು, ಆಫೀಸ್‌ನಿಂದ ಬರುವಾಗ ಒಬ್ಬ ಕಾರಿನಲ್ಲಿ ಅಸಭ್ಯವಾಗಿ ಸನ್ನೆ ಮಾಡುತ್ತಿದ್ದ,” ಎಂದು ತಮ್ಮ ಕಹಿ ನೆನಪನ್ನು ಹಂಚಿಕೊಂಡಿದ್ದಾರೆ.
ಸದ್ಯ ಈ (Bengaluru Woman) ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆಯೇ ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಆದರೆ, ರಾಜಧಾನಿಯ ರಸ್ತೆಗಳಲ್ಲಿ ಮಹಿಳೆಯರಿಗೆ ರಕ್ಷಣೆ ಎಲ್ಲಿ ಎಂಬ ಪ್ರಶ್ನೆ ಮಾತ್ರ ಮತ್ತೊಮ್ಮೆ ಜೋರಾಗಿ ಕೇಳಿಬರುತ್ತಿದೆ.
