HomeStateBengaluru Viral Video : ಮದ್ಯದ ಅಮಲಿನಲ್ಲಿ ಯುವತಿಯರ ಅತಿರೇಕದ ವರ್ತನೆ; ಕ್ಯಾಬ್ ಚಾಲಕನ ಮೇಲೆ...

Bengaluru Viral Video : ಮದ್ಯದ ಅಮಲಿನಲ್ಲಿ ಯುವತಿಯರ ಅತಿರೇಕದ ವರ್ತನೆ; ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆಸಿ ರಸ್ತೆಯಲ್ಲೇ ಹೈಡ್ರಾಮಾ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru Viral Video) ಕುಡಿದ ಅಮಲಿನಲ್ಲಿ ಯುವತಿಯರು ರಸ್ತೆಯಲ್ಲೇ ರಂಪಾಟ ಮಾಡಿರುವ ಘಟನೆ ವರದಿಯಾಗಿದೆ. ಬನ್ನೇರುಘಟ್ಟ ರಸ್ತೆಯ ಹುಳಿಮಾವು ಬಳಿ ನಡೆದ ಈ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮದ್ಯದ ಅಮಲಿನಲ್ಲಿದ್ದ ಯುವತಿಯರು ಕ್ಯಾಬ್‌ಗೆ ಗುದ್ದಿದ್ದಲ್ಲದೆ, ಪ್ರಶ್ನಿಸಿದ ಚಾಲಕ ಮತ್ತು ಸಾರ್ವಜನಿಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.

Bengaluru viral video showing drunk women creating chaos after hitting a cab on Bannerghatta Road

Bengaluru Viral Video – ಘಟನೆ ಹಿನ್ನೆಲೆ: ಸ್ಕೂಟಿ ಗುದ್ದಿ ಎಸ್ಕೇಪ್ ಆಗಲು ಯತ್ನ!

ಜೆ.ಪಿ.ನಗರ ಮತ್ತು ಕೋರಮಂಗಲ ಮೂಲದ ಲೀಸಾ ಹಾಗೂ ಮ್ಯಾಥ್ಯೂ ಎಂಬ ಯುವತಿಯರು ಖಾಸಗಿ ಹೋಟೆಲ್‌ನಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ತಮ್ಮ ಸ್ಕೂಟಿಯಲ್ಲಿ ವಾಪಸ್ ಹೊರಟಿದ್ದರು. ಮದ್ಯದ ಅಮಲಿನಲ್ಲಿದ್ದ ಇವರು ವಾಹನ ಚಾಲನೆಯ ಮೇಲೆ ನಿಯಂತ್ರಣ ತಪ್ಪಿ, ಮುಂದಕ್ಕೆ ಹೋಗುತ್ತಿದ್ದ ಅಹ್ಮದ್ ಎಂಬುವವರ ಕ್ಯಾಬ್‌ಗೆ ಹಿಂಬದಿಯಿಂದ ಜೋರಾಗಿ ಗುದ್ದಿದ್ದಾರೆ. ಅಪಘಾತದಿಂದ ಕ್ಯಾಬ್ ಜಖಂಗೊಂಡಿದ್ದು, ಚಾಲಕ ಗಾಡಿ ನಿಲ್ಲಿಸಿ ಕೆಳಗಿಳಿದಾಗ ಅಸಲಿ ರಂಪಾಟ ಶುರುವಾಗಿದೆ.

ತಪ್ಪಿಸಿಕೊಳ್ಳಲು ಯತ್ನಿಸಿ ಸಾರ್ವಜನಿಕರ ಜೊತೆ ಕಿರಿಕ್

ಕ್ಯಾಬ್ ಚಾಲಕ ಅಹ್ಮದ್ ಅಪಘಾತದ ಬಗ್ಗೆ ಪ್ರಶ್ನಿಸಿದಾಗ ಯುವತಿಯರು ಆತನನ್ನು ನಿಂದಿಸಲು ಶುರು ಮಾಡಿದ್ದಾರೆ. ಅಲ್ಲಿಂದ ಎಸ್ಕೇಪ್ ಆಗಲು ಯತ್ನಿಸಿದಾಗ ಸ್ಥಳೀಯರು ಇವರನ್ನು ಸುತ್ತುವರಿದಿದ್ದಾರೆ. (Bengaluru Viral Video) ಈ ವೇಳೆ ಉತ್ತರ ಭಾರತ ಮೂಲದ ಈ ಯುವತಿಯರು ಅಕ್ಷರಶಃ ರಸ್ತೆಯಲ್ಲೇ ಹೈಡ್ರಾಮಾ ನಡೆಸಿದ್ದಾರೆ. ಪ್ರಶ್ನಿಸಲು ಬಂದ ಸಾರ್ವಜನಿಕರ ವಿರುದ್ಧ ಅಸಭ್ಯ ಸನ್ನೆಗಳನ್ನು ಮಾಡುತ್ತಾ, ಕಿರುಚಾಡುತ್ತಾ ಅತಿರೇಕದ ವರ್ತನೆ ತೋರಿದ್ದಾರೆ. Read this also : CCTV Assault : ಮಹಾರಾಷ್ಟ್ರದಲ್ಲಿ ಅಮಾನವೀಯ ಅಟ್ಟಹಾಸ: ಯುವತಿಯನ್ನು ನಡುರಸ್ತೆಯಲ್ಲೇ ಎಳೆದಾಡಿ ವಿಕೃತಿ ಮೆರೆದ ಕಾಮಾಂಧ

ಕೈಗೆ ಚೈನ್ ಸುತ್ತಿಕೊಂಡು ಚಾಲಕನ ಮೇಲೆ ಹಲ್ಲೆ

ಘಟನೆ ಬಗ್ಗೆ ಸಂತ್ರಸ್ತ ಚಾಲಕ ಅಹ್ಮದ್ ಆತಂಕಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ. ಯುವತಿಯರು ಸ್ಕೂಟಿ ಸ್ಟಾರ್ಟ್ ಮಾಡಿಕೊಂಡು ಓಡಿಹೋಗಲು ನೋಡಿದಾಗ ಅಹ್ಮದ್ ಕೀ (Bengaluru Viral Video) ತೆಗೆಯಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಯುವತಿಯರು ತಮ್ಮ ಕೈಗೆ ಚೈನ್ ಸುತ್ತಿಕೊಂಡು ಅಹ್ಮದ್ ಅವರ ಮುಖ, ಕೈ ಮತ್ತು ಬೆನ್ನಿನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಪೆಟ್ಟಿನಿಂದ ಚಾಲಕ ಕಂಗಾಲಾಗಿದ್ದರೂ ಸ್ಥಳೀಯರು ಯುವತಿಯರನ್ನು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

Bengaluru viral video showing drunk women creating chaos after hitting a cab on Bannerghatta Road

Bengaluru viral video showing drunk women creating chaos after hitting a cab on Bannerghatta Road

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ಪೊಲೀಸರ ಮುಂದೆಯೂ ನಿಲ್ಲದ ಯುವತಿಯರ ನಖರಾ

ಘಟನಾ ಸ್ಥಳಕ್ಕೆ ಪೊಲೀಸರು ಬಂದ ಮೇಲೂ (Bengaluru Viral Video) ಯುವತಿಯರ ಹಠಮಾರಿ ವರ್ತನೆ ಮುಂದುವರಿದಿದೆ. ಸದ್ಯ ಹುಳಿಮಾವು ಪೊಲೀಸರು ಲೀಸಾ ಮತ್ತು ಮ್ಯಾಥ್ಯೂ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಮದ್ಯದ ಅಮಲಿನಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತಂದಿದ್ದಲ್ಲದೆ, ಹಲ್ಲೆ ನಡೆಸಿದ ಆರೋಪದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಘಟನೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular