HomeStateBengaluru Salon Incident : ಪ್ರೀತಿ ನಿರಾಕರಿಸಿದ್ದಕ್ಕೆ ಬ್ಯೂಟಿಷಿಯನ್ ಕೆಲಸದಿಂದ ವಜಾ? ಸಲೂನ್ ಮಾಲೀಕನ ಮೇಲೆ...

Bengaluru Salon Incident : ಪ್ರೀತಿ ನಿರಾಕರಿಸಿದ್ದಕ್ಕೆ ಬ್ಯೂಟಿಷಿಯನ್ ಕೆಲಸದಿಂದ ವಜಾ? ಸಲೂನ್ ಮಾಲೀಕನ ಮೇಲೆ ಪತಿಯಿಂದ ‘ಗ್ಯಾಂಗ್’ ಅಟ್ಯಾಕ್!

ಬೆಂಗಳೂರಿನ ಸಲೂನ್ ಒಂದರಲ್ಲಿ (Bengaluru Salon Incident) ನಡೆದ ಈ ಘಟನೆ ಸಿನಿಮೀಯ ತಿರುವು ಪಡೆದಿದೆ. ಕೆಲಸ ಕೊಡಬೇಕಾದ ಮಾಲೀಕ ಬ್ಯೂಟಿಷಿಯನ್ ಕೈಗೆ ಬಿಸ್ಕೆಟ್ ನೀಡಿ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದಾನೆ! ಆದರೆ ಈ ಪ್ರಪೋಸಲ್ ರಿಜೆಕ್ಟ್ ಆದ ಬೆನ್ನಲ್ಲೇ ಬ್ಯೂಟಿಷಿಯನ್ ಕೆಲಸವೂ ಹೋಗಿದೆ. ಇದರಿಂದ ರೊಚ್ಚಿಗೆದ್ದ ಆಕೆಯ ಪತಿ ಗ್ಯಾಂಗ್ ಕಟ್ಟಿಕೊಂಡು ಬಂದು ಸಲೂನ್ ಒಳಗೆ ಮಾಲೀಕನಿಗೆ ಸರಿಯಾಗಿಯೇ ಬೆವರಿಳಿಸಿದ್ದಾನೆ.

Bengaluru salon incident where owner was attacked after proposal rejection captured on CCTV

Bengaluru Salon Incident – ಅಸಲಿಗೆ ಅಲ್ಲಿ ಆಗಿದ್ದೇನು?

ಆವಲಹಳ್ಳಿಯ ‘ಸ್ಕಿನ್ ಶೈನ್ ಫ್ಯಾಮಿಲಿ ಸಲೂನ್’ ಮಾಲೀಕ ಮೋಹನ್ ಕುಮಾರ್ ಎಂಬುವವರ ಮೇಲೆ ಈ ಹಲ್ಲೆ ನಡೆದಿದೆ. ಕಳೆದ ಕೆಲವು ದಿನಗಳಿಂದ ಮೋಹನ್ ಕುಮಾರ್ ತಮ್ಮ ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದ ಸುಷ್ಮಾ ಎಂಬ ಬ್ಯೂಟಿಷಿಯನ್‌ಗೆ ಪ್ರಪೋಸ್ ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಸುಷ್ಮಾಗೆ ಬಿಸ್ಕೆಟ್ ನೀಡಿ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆದರೆ, ಮಾಲೀಕನ ಈ ಪ್ರಸ್ತಾವನೆಯನ್ನು ಸುಷ್ಮಾ ನೇರವಾಗಿಯೇ ತಿರಸ್ಕರಿಸಿದ್ದರು. ಇದರಿಂದ ಕುಪಿತಗೊಂಡ ಮಾಲೀಕ ಮೋಹನ್ ಕುಮಾರ್, ಸುಷ್ಮಾರನ್ನು ಕೆಲಸದಿಂದ ವಜಾಗೊಳಿಸಿದ್ದರು ಎನ್ನಲಾಗಿದೆ. Read this also : ಅಮಾನವೀಯ ಕೃತ್ಯ: ಜಗಳದ ಭರದಲ್ಲಿ ಪತ್ನಿಯ ಮೂಗು, ಕೆನ್ನೆ ಕಚ್ಚಿ ಮಾಂಸ ಕಿತ್ತ ರಾಕ್ಷಸ ಪತಿ!

ಸಲೂನ್‌ಗೆ ನುಗ್ಗಿ ಪತಿಯಿಂದ ರಂಪಾಟ!

ತನ್ನ ಪತ್ನಿಗೆ ಸಲೂನ್ ಮಾಲೀಕ ಕಿರುಕುಳ ನೀಡಿ, ಕೆಲಸದಿಂದ ತೆಗೆದುಹಾಕಿದ್ದನ್ನು ಕೇಳಿ ಸುಷ್ಮಾ ಪತಿ ಕೆರಳಿದ್ದಾರೆ. ತಕ್ಷಣವೇ ನಾಲ್ಕೈದು ಜನರ ಗುಂಪಿನೊಂದಿಗೆ ಸಲೂನ್‌ಗೆ ನುಗ್ಗಿದ ಪತಿ ಮತ್ತು ಆತನ ಬೆಂಬಲಿಗರು, ಮಾಲೀಕ ಮೋಹನ್ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆಯನ್ನು ತಡೆಯಲು ಬಂದ ಮೋಹನ್ ಕುಮಾರ್ (Bengaluru Salon Incident) ಅವರ ಪತ್ನಿ ಶ್ರೀಜಾ ಅವರ ಮೇಲೆಯೂ ಈ ಗ್ಯಾಂಗ್ ಹಲ್ಲೆ ನಡೆಸಿದೆ. ಶ್ರೀಜಾ ಅವರ ಕುತ್ತಿಗೆಗೆ ಕೈ ಹಾಕಿ ದೂಡಿರುವ ದೃಶ್ಯಗಳು ಕಂಡುಬಂದಿವೆ. ಬಂದವರೆಲ್ಲರೂ ಸಲೂನ್ ಮಾಲೀಕನಿಗೆ ಮನಸೋ ಇಚ್ಛೆ ಗದರಿಸುತ್ತಾ, ಕೈಗೆ ಸಿಕ್ಕಂತೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.

Bengaluru salon incident where owner was attacked after proposal rejection captured on CCTV

CCTV ಕ್ಯಾಮೆರಾದಲ್ಲಿ ಸೆರೆಯಾಯ್ತು ಅಸಲಿ ದೃಶ್ಯ

ಸಲೂನ್ ಒಳಗೆ ನಡೆದ ಈ (Bengaluru Salon Incident) ಸಂಪೂರ್ಣ ಗಲಾಟೆ ಮತ್ತು ಹಲ್ಲೆಯ ದೃಶ್ಯಗಳು ಅಲ್ಲಿನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ (ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ) ಸೆರೆಯಾಗಿವೆ. ಸದ್ಯ ಈ ವಿಡಿಯೋ ತುಣುಕುಗಳು ಪೊಲೀಸರ ಕೈ ಸೇರಿವೆ. ಸಲೂನ್ ಮಾಲೀಕ ಮೋಹನ್ ಕುಮಾರ್ ಅವರು ಸುಷ್ಮಾ, ಆಕೆಯ ಪತಿ ಹಾಗೂ ಬೆಂಬಲಿಗರ ವಿರುದ್ಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

by Baluhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular