ದಂತ ವೈದ್ಯೆಯಾಗಿ ಸಮಾಜ ಸೇವೆ ಮಾಡುವ ಕನಸು ಹೊತ್ತಿದ್ದ ಆಕೆ, ಈಗ ನೆನಪು ಮಾತ್ರ. ಬೆಂಗಳೂರಿನ ಪ್ರತಿಷ್ಠಿತ ಡೆಂಟಲ್ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳು (Bengaluru Dental Student) ಅನುಮಾನಾಸ್ಪದವಾಗಿ ಆತ್ಮ**ತ್ಯೆಗೆ ಶರಣಾಗಿರುವ ಘಟನೆ ನಗರದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆನೇಕಲ್ ತಾಲ್ಲೂಕಿನ ಚಂದಾಪುರದಲ್ಲಿ ನಡೆದ ಈ ದುರಂತಕ್ಕೆ ಕಾಲೇಜು ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ನೀಡುತ್ತಿದ್ದ ನಿರಂತರ ಮಾನಸಿಕ ಕಿರುಕುಳವೇ ಕಾರಣ ಎಂದು ಮೃತಳ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

Bengaluru Dental Student – ನಡೆದಿದ್ದೇನು? ಘಟನೆಯ ಹಿನ್ನೆಲೆ
ಬೊಮ್ಮನಹಳ್ಳಿಯ ಪ್ರತಿಷ್ಠಿತ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನಲ್ಲಿ ಓರಲ್ ಮೆಡಿಸಿನ್ ಅಂಡ್ ರೇಡಿಯಾಲಜಿ (Oral Medicine and Radiology) ವಿಭಾಗದಲ್ಲಿ 3ನೇ ವರ್ಷದ ವ್ಯಾಸಂಗ ಮಾಡುತ್ತಿದ್ದ ಯಶಸ್ವಿನಿ (23), ಆತ್ಮ*ಹತ್ಯೆ ಮಾಡಿಕೊಂಡ ದುರ್ದೈವಿ. ಪರಿಮಳ ಮತ್ತು ಭೋದೆವಯ್ಯ ದಂಪತಿಯ ಏಕೈಕ ಪುತ್ರಿಯಾಗಿದ್ದ ಈಕೆ, ಮನೆಯವರ ಆಸರೆಯಾಗಬೇಕಿತ್ತು. ಆದರೆ, ಕಾಲೇಜಿನಲ್ಲಿ ನಡೆದ ಅವಮಾನ ಆಕೆಯ ಬದುಕನ್ನೇ ಕಿತ್ತುಕೊಂಡಿದೆ. ಬುಧವಾರ ಕಣ್ಣು ನೋವಿನ ಕಾರಣಕ್ಕಾಗಿ ಯಶಸ್ವಿನಿ ಕಾಲೇಜಿಗೆ ರಜೆ ಹಾಕಿದ್ದರು. ಗುರುವಾರ ಕಾಲೇಜಿಗೆ ಮರಳಿದಾಗ, ಉಪನ್ಯಾಸಕರು ವಿದ್ಯಾರ್ಥಿಗಳ ಸಮ್ಮುಖದಲ್ಲೇ ಆಕೆಯನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. Read this also : ಮೈಸೂರಿನಲ್ಲಿ ನಡೆದ ಘಟನೆ, ಪ್ರೀತಿ ಹೆಸರಲ್ಲಿ ಯುವಕನ ಕಾಟ, 17 ವರ್ಷದ ವಿದ್ಯಾರ್ಥಿನಿ ದಿವ್ಯ ಆತ್ಮ**ತ್ಯೆ, ಪೋಷಕರ ಆಕ್ರೋಶ..!
‘ಇಡೀ ಬಾಟಲ್ ಸುರಿದುಕೊಂಡೆಯಾ?’ – ಉಪನ್ಯಾಸಕರ ವ್ಯಂಗ್ಯ
ಮೃತ ವಿದ್ಯಾರ್ಥಿನಿಯ ತಾಯಿ ಪರಿಮಳ ಅವರು (Bengaluru Dental Student) ಮಾಧ್ಯಮಗಳ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. “ಕಣ್ಣಿಗೆ ಯಾವ ಡ್ರಾಪ್ಸ್ ಹಾಕಿಕೊಂಡೆ? ಎಷ್ಟು ಹನಿ ಹಾಕಿದೆ? ಇಡೀ ಬಾಟಲ್ ಸುರಿದುಕೊಂಡೆಯಾ?” ಎಂದು ಉಪನ್ಯಾಸಕರು ಇಡೀ ಕ್ಲಾಸ್ ಮುಂದೆ ಯಶಸ್ವಿನಿಯನ್ನು ವ್ಯಂಗ್ಯವಾಡಿ ಅವಮಾನಿಸಿದ್ದರು. ಜೊತೆಗೆ ಯಶಸ್ವಿನಿಗೆ ಸೆಮಿನಾರ್ ನೀಡಲು ಅವಕಾಶ ನಿರಾಕರಿಸಲಾಗುತ್ತಿತ್ತು. ರೇಡಿಯಾಲಜಿ ಕೇಸ್‌ಗಳನ್ನು ಹಂಚಿಕೆ ಮಾಡದೆ ಆಕೆಯನ್ನು ಶೈಕ್ಷಣಿಕವಾಗಿ ಹಿಂದುಳಿಯುವಂತೆ ಮಾಡಲಾಗುತ್ತಿತ್ತು. ಸತತವಾಗಿ ಮಾನಸಿಕ ಟಾರ್ಚರ್ ನೀಡಲಾಗುತ್ತಿತ್ತು ಎಂದು ಪೋಷಕರು ದೂರಿದ್ದಾರೆ.
ನ್ಯಾಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ
ಯಶಸ್ವಿನಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಕೆಯ (Bengaluru Dental Student) ಸಹಪಾಠಿಗಳು ಮತ್ತು ಸ್ನೇಹಿತರು ಆಕ್ರೋಶಗೊಂಡಿದ್ದಾರೆ. ಶವಾಗಾರದ ಮುಂದೆ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು. “ಯಶಸ್ವಿನಿ ಓದಿನಲ್ಲಿ ತುಂಬಾ ಚುರುಕಾಗಿದ್ದಳು. ಅಂತಹ ಹುಡುಗಿ ಇಂತಹ ನಿರ್ಧಾರ ತಳೆದಿದ್ದಾಳೆ ಎಂದರೆ ಕಾಲೇಜಿನ ಕಿರುಕುಳ ಎಷ್ಟಿರಬಹುದು?” ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ. ಪ್ರಾಂಶುಪಾಲರು ಮತ್ತು ಸಂಬಂಧಪಟ್ಟ ಉಪನ್ಯಾಸಕರ ಮೇಲೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಪೊಲೀಸ್ ತನಿಖೆ ಚುರುಕು
ಸದ್ಯ ಈ ಕುರಿತು (Bengaluru Dental Student) ಆನೇಕಲ್ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಕಾಲೇಜಿನ ಸಿಬ್ಬಂದಿ ಮತ್ತು ಸಹಪಾಠಿಗಳ ಹೇಳಿಕೆಗಳನ್ನು ಪಡೆಯುತ್ತಿದ್ದು, ತನಿಖೆ ಮುಂದುವರಿಸಿದ್ದಾರೆ. ಒಂದು ಪ್ರತಿಭಾವಂತ ಜೀವ ಅಕಾಲಿಕವಾಗಿ ಕೊನೆಯಾಗಿರುವುದು ಪೋಷಕರಲ್ಲಿ ಎಂದೂ ಮರೆಯದ ನೋವುಂಟು ಮಾಡಿದೆ.
