ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕ್ರೂರ ಹತ್ಯೆ ನಡೆದಿದೆ. ಪ್ರೀತಿ, ನಂಬಿಕೆ ಎಂಬ ಪದಗಳಿಗೆ ಬೆಲೆಯೇ ಇಲ್ಲದಂತಾಗಿದೆಯೇ ಎಂಬ ಪ್ರಶ್ನೆ ಮೂಡುವಂತಿದೆ ಈ ಘಟನೆ. ಮದುವೆಯಾಗುವಂತೆ ಒತ್ತಾಯಿಸಿದ ಪ್ರಿಯತಮೆಯನ್ನೇ ಪ್ರಿಯಕರನೊಬ್ಬ ಅತ್ಯಂತ ಭೀಕರವಾಗಿ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿ (Kumaraswamy Layout) ನಡೆದಿದೆ.

ಡಿಸೆಂಬರ್ 24ರ ರಾತ್ರಿ ನಡೆದ ಈ ಕೃತ್ಯ, ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ. ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 39 ವರ್ಷದ ಮಮತಾ ಎಂಬುವವರೇ ಈ (Bengaluru crime) ಘಟನೆಯಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿ.
Bengaluru crime – ಒಂಟಿಯಾಗಿದ್ದನ್ನೇ ಕಾಯುತ್ತಿದ್ದ ಆರೋಪಿ!
ಮಮತಾ ಅವರು ಕುಮಾರಸ್ವಾಮಿ ಲೇಔಟ್‌ನ ಬಾಡಿಗೆ ಮನೆಯೊಂದರಲ್ಲಿ ತಮ್ಮ ಸ್ನೇಹಿತೆಯ ಜೊತೆ ವಾಸವಾಗಿದ್ದರು. ಆದರೆ, ಡಿಸೆಂಬರ್ 24ರಂದು ಅವರ ಸ್ನೇಹಿತೆ ಊರಿಗೆ ಹೋಗಿದ್ದರು. ಮನೆಯಲ್ಲಿ ಮಮತಾ ಒಬ್ಬರೇ ಇದ್ದಿದ್ದನ್ನು ಅರಿತ ಪ್ರಿಯಕರ ಸುಧಾಕರ್, ರಾತ್ರಿ ಮನೆಗೆ ನುಗ್ಗಿ ಈ ಭೀಕರ ಕೃತ್ಯ ಎಸಗಿದ್ದಾನೆ. ಡಿಸೆಂಬರ್ 25ರ ಬೆಳಿಗ್ಗೆ ಈ ವಿಷಯ ಬೆಳಕಿಗೆ ಬಂದಾಗ ಇಡೀ ರಸ್ತೆಯೇ ರಕ್ತಸಿಕ್ತವಾಗಿತ್ತು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ತನಿಖೆ ನಡೆಸಿ, (Bengaluru crime) ಆರೋಪಿ ಸುಧಾಕರ್‌ನನ್ನು ಬಂಧಿಸಿದ್ದಾರೆ. Read this also : ಉತ್ತರ ಪ್ರದೇಶದಲ್ಲಿ ನಡೆದ (Crime) ಘಟನೆ, ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೊಂದು, ಶವವನ್ನೇ ಗ್ರೈಂಡರ್‌ನಲ್ಲಿ ರುಬ್ಬಿದ ಕಿರಾತಕಿ!
ಪ್ರೀತಿಯಲ್ಲಿ ಶುರುವಾದ ಬಿರುಕು ಮತ್ತು ಮದುವೆಯ ಹಠ
ಸುಧಾಕರ್ ಮತ್ತು ಮಮತಾ ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ, ಇತ್ತೀಚೆಗೆ ಸುಧಾಕರ್ ಕುಟುಂಬದವರು ಆತನಿಗೆ ಬೇರೆ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಸಿದ್ದರು. ಈ ಸುದ್ದಿ ಮಮತಾಗೆ ತಿಳಿಯುತ್ತಿದ್ದಂತೆ ಗಲಾಟೆ ಶುರುವಾಗಿದೆ. “ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆಯಾಗಬಾರದು, ಒಂದು ವೇಳೆ ಮದುವೆಯಾದರೆ ನಾನು ಆತ್ಮಹತ್ಯೆ (Bengaluru crime) ಮಾಡಿಕೊಂಡು ನಿನ್ನನ್ನು ಹಾಗೂ ನಿನ್ನ ಕುಟುಂಬವನ್ನು ಸಿಲುಕಿಸುತ್ತೇನೆ” ಎಂದು ಮಮತಾ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.

ಹತ್ಯೆಗೆ ಕಾರಣವಾದ ಆ ಒಂದು ಭಯ!
ಮಮತಾ ಅವರ ಬೆದರಿಕೆಯಿಂದ ಆತಂಕಕ್ಕೊಳಗಾದ ಸುಧಾಕರ್, ಹೇಗಾದರೂ ಮಾಡಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಬೇಕೆಂದು ನಿರ್ಧರಿಸಿದ್ದ. ಮಮತಾ ಆತ್ಮಹತ್ಯೆ ಮಾಡಿಕೊಂಡರೆ ತಾನು ಜೈಲಿಗೆ ಹೋಗಬೇಕಾಗುತ್ತದೆ ಎಂಬ ಭಯ ಆತನನ್ನು ಕೊಲೆಗಡುಕನನ್ನಾಗಿ ಮಾಡಿತು. ಹೀಗಾಗಿ, ಆಕೆ ಒಬ್ಬಳೇ ಇದ್ದ ಸಮಯ ನೋಡಿ ಈ ಘನಘೋರ (Bengaluru crime) ಕೃತ್ಯ ಎಸಗಿದ್ದಾನೆ ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.
