ಒಂಬತ್ತು ವರ್ಷಗಳ ದೀರ್ಘಕಾಲದ ಪ್ರೇಮಾಯಣ, ಮನೆಯವರ ಸಮ್ಮತಿಯೊಂದಿಗೆ ನಡೆದ ಅದ್ಧೂರಿ ಮದುವೆ, ಇನ್ನು ನೂರು ಕಾಲ ಸುಖವಾಗಿ ಬಾಳಬೇಕೆಂಬ ಕನಸು… ಆದರೆ, ಈ (Bareilly Murder Case) ಸುಂದರ ಪ್ರೇಮಕಥೆ ಕೇವಲ 60 ದಿನಗಳಲ್ಲಿ ಸ್ಮಶಾನ ಸೇರುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಕ್ಷಣಿಕ ಕೋಪ ಮತ್ತು ಹಣದ ಹಪಾಹಪಿ ಒಬ್ಬ ವ್ಯಕ್ತಿಯ ಪ್ರಾಣ ತೆಗೆದರೆ, ಇಡೀ ಕುಟುಂಬವನ್ನೇ ಜೈಲು ಪಾಲಾಗುವಂತೆ ಮಾಡಿದೆ. ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಈ ಭೀಕರ ಹತ್ಯಾಕಾಂಡದ ಹಿಂದಿರುವ ಆ ‘ಸಸ್ಪೆನ್ಸ್’ ಕಥೆ ಇಲ್ಲಿದೆ ನೋಡಿ.

Bareilly Murder Case – ಏನಿದು ಘಟನೆ?
ಜಿತೇಂದ್ರ ಕುಮಾರ್ ಯಾದವ್ ಮತ್ತು ಜ್ಯೋತಿ ಎಂಬುವವರು ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದರು. ಕಳೆದ ವರ್ಷ ನವೆಂಬರ್ 25, 2025 ರಂದು ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಎಲ್ಲವೂ ಸರಿಯಾಗಿಯೇ ಇತ್ತು ಎನ್ನುವಷ್ಟರಲ್ಲಿ, ಜಿತೇಂದ್ರನಿಗೆ ಅಂಟಿದ್ದ ಆನ್‌ಲೈನ್ ಜೂಜಿನ (Online Gambling) ಚಟ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿದೆ.
20 ಸಾವಿರ ರೂಪಾಯಿ ತಂದ ತಲ್ಲಣ
ಜಿತೇಂದ್ರ ಆನ್‌ಲೈನ್ ಜೂಜಿಗೆ ಎಷ್ಟು ದಾಸನಾಗಿದ್ದನೆಂದರೆ, ಪತ್ನಿ ಜ್ಯೋತಿಯ ಬ್ಯಾಂಕ್ ಖಾತೆಯಿಂದ ಅವಳಿಗೆ ತಿಳಿಯದಂತೆ 20,000 ರೂಪಾಯಿ ಡ್ರಾ ಮಾಡಿ ಜೂಜಿನಲ್ಲಿ ಸೋತಿದ್ದ. ಈ ವಿಷಯ (Bareilly Murder Case) ತಿಳಿಯುತ್ತಿದ್ದಂತೆಯೇ ದಂಪತಿಗಳ ನಡುವೆ ತೀವ್ರ ಜಗಳ ಶುರುವಾಗಿದೆ. ಈ ಸಣ್ಣ ಮೊತ್ತದ ಹಣದ ವಿಚಾರ ಕೊನೆಗೆ ಕೊಲೆಯಲ್ಲಿ ಅಂತ್ಯವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಸಂಚು ರೂಪಿಸಿ ಪತಿಯ ಹತ್ಯೆ
ಜನವರಿ 26 ರಂದು ದಂಪತಿಗಳ ನಡುವಿನ ಜಗಳ ವಿಕೋಪಕ್ಕೆ ಹೋಗಿದೆ. ಈ ವೇಳೆ ಜ್ಯೋತಿ ತನ್ನ ಪೋಷಕರು ಮತ್ತು ಸಹೋದರನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಜ್ಯೋತಿಯ ತಂದೆ-ತಾಯಿ ಜಿತೇಂದ್ರನ ಕೈಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡರೆ, ಆಕ್ರೋಶಗೊಂಡ ಜ್ಯೋತಿ ಪತಿಯ ಗಂಟಲನ್ನೇ ಸೀಳಿದ್ದಾಳೆ. 9 ವರ್ಷಗಳ ಕಾಲ (Bareilly Murder Case) ಪ್ರೀತಿಸಿದ ವ್ಯಕ್ತಿಯನ್ನು ಕ್ಷಣಾರ್ಧದ ಕೋಪದಲ್ಲಿ ಬಲಿ ಪಡೆದಿದ್ದಾಳೆ. Read this also : ಬಾಗಲಕೋಟೆಯಲ್ಲಿ ಬೆಚ್ಚಿಬೀಳಿಸುವ ಘಟನೆ: ಅತ್ತೆ ಕಿರುಕುಳಕ್ಕೆ ಮೂರು ಮಕ್ಕಳನ್ನು ಬಲಿಪಡೆದ ತಾಯಿ; ನಂತರ ಮಾಡಿದ್ದೇನು?
ಆತ್ಮಹತ್ಯೆ ಎಂದು ಬಿಂಬಿಸಲು ನಾಟಕ!
ಕೊಲೆ ಮಾಡಿದ ನಂತರ ಸಿಕ್ಕಿಬೀಳುವ ಭೀತಿಯಿಂದ ಜ್ಯೋತಿ ಮತ್ತು ಆಕೆಯ ಪೋಷಕರು ಇದಕ್ಕೊಂದು ಹೊಸ ರೂಪ ನೀಡಲು ಯತ್ನಿಸಿದರು. ಶವವನ್ನು ವೆಂಟಿಲೇಟರ್ ಗ್ರಿಲ್‌ಗೆ ನೇತುಹಾಕಿ, “ನಮ್ಮ ಅಳಿಯ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂದು ಅಕ್ಕಪಕ್ಕದವರಿಗೆ ನಂಬಿಸಲು ಯತ್ನಿಸಿದ್ದಾರೆ.

ಪೋಸ್ಟ್‌ಮಾರ್ಟಂ ವರದಿಯಿಂದ ಬಯಲಾದ ಸತ್ಯ
ಮಾಹಿತಿ ತಿಳಿದ ಇಜ್ಜತ್‌ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಪರೀಕ್ಷೆಗೆ ಕಳುಹಿಸಿದ್ದರು. ಆದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅದು ಆತ್ಮಹತ್ಯೆಯಲ್ಲ, (Bareilly Murder Case) ಬದಲಾಗಿ ಉಸಿರುಗಟ್ಟಿಸಿ ಮತ್ತು ಗಂಟಲು ಸೀಳಿ ಮಾಡಿದ ಹತ್ಯೆ ಎಂಬುದು ಸಾಬೀತಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಜ್ಯೋತಿ, ಆಕೆಯ ತಂದೆ ಕಾಳಿಚರಣ್ ಮತ್ತು ತಾಯಿ ಚಮೇಲಿ ಅವರನ್ನು ಬಂಧಿಸಿದ್ದಾರೆ. ಜ್ಯೋತಿಯ ಸಹೋದರ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
