Bangladesh – ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ ಕೆಲವು ದಿನಗಳಿಂದ ಹಿಂಸಾಚಾರ ನಡೆಯುತ್ತಲೇ ಇದೆ. ಅದರಲ್ಲೂ ಬಾಂಗ್ಲಾ ಹಿಂದೂಗಳ ಮೇಲೆ ಹಿಂಸಾಚಾರ ಸಹ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಹೇಳಬಹುದಾಗಿದೆ. ಬಾಂಗ್ಲಾದಲ್ಲಿನ ಹಿಂದೂಗಳ ಮೇಲೆ ಹಾಗೂ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಲಾಗಿತ್ತು. ಇದೀಗ ಬಾಂಗ್ಲಾ ಪೊಲೀಸರು ಹಿಂದೂ ಧಾರ್ಮಿಕ ಸಂಘಟನೆಯಾದ ಇಸ್ಕಾನ್ (ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ ನೆಸ್) ಅನ್ನು ಭಯೋತ್ಪಾದಕ ಸಂಘಟನೆ (Bangladesh) ಎಂದು ಘೋಷಣೆ ಮಾಡಿದ್ದಾರೆ.
ಬಾಂಗ್ಲಾ ಸರ್ಕಾರದ ವಿರುದ್ದ ಅಂತರಾಷ್ಟ್ರೀಯ ಮಟ್ಟದಲ್ಲಿ ವಿರೋಧ ಸಹ ಇದೆ. ಅಮೇರಿಕಾ ಚುನಾವಣೆಗೂ ಮುಂಚೆ ಡೊನಾಲ್ಡ್ ಟ್ರಂಪ್ ಸಹ ಬಾಂಗ್ಲಾ ಹಿಂದೂಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಯೂನಸ್ ನೇತೃತ್ವದ ಬಾಂಗ್ಲಾ ಸರ್ಕಾರದ ವಿರುದ್ದ ಪಾಶ್ಚಿಮಾತ್ಯ ದೇಶಗಳೂ ಬೇಸರಗೊಂಡಿವೆ ಎನ್ನಲಾಗಿದೆ. ಸದ್ಯ ಬಾಂಗ್ಲಾದೇಶದ ಪೊಲೀಸರು ಇಸ್ಕಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಣೆ ಮಾಡಿದೆ. ಬಾಂಗ್ಲಾದಲ್ಲಿ ನಡೆಯುತ್ತಿರುವ ಕೋಮುಗಲಭೆಗೆ ಇಸ್ಕಾನ್ ಸದಸ್ಯರು ಭಾಗಿಯಾಗಿದ್ದಾರೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ. ಇತ್ತೀಚಿಗೆ ಇಸ್ಕಾನ್ ಹಿರಿಯ ಬೋಧಕ ಚಿನ್ಮಯ್ ಕೃಷ್ಣದಾಸ್ ವಿರುದ್ದವೂ ದೇಶದ್ರೋಹದ ಪ್ರಕರಣ ದಾಖಲಾಗಿತ್ತು. ಇದೀಗ ಇಸ್ಕಾನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಣೆ ಮಾಡಿರೋದು ಬಾಂಗ್ಲಾ ಹಿಂದೂಗಳು, ಹಿಂದೂ ಸಂಘಟನೆಗಳು ಹಾಗೂ ಅವರ ಅನುಯಾಯಿಗಳಲ್ಲಿ ಮತಷ್ಟು ಆತಂಕ ಸೃಷ್ಟಿಸಿದೆ ಎನ್ನಲಾಗಿದೆ.
ಇನ್ನೂ ಬಾಂಗ್ಲಾದ ಸರ್ಕಾರ ಹಿಂದೂ ಸಂಘಟನೆಗಳನ್ನು ನೇರವಾಗಿ ಗುರಿಯಾಗಿಸುತ್ತಿದೆ. ಇಸ್ಕಾನ್ ನಂತಹ ಭಕ್ತಿ ಸಂಸ್ಥೆಗಳ ಮೇಲೆ ಬಾಂಗ್ಲಾ ಸರ್ಕಾರ ಏತಕ್ಕಾಗಿ ಈ ರೀತಿಯ ಗಂಭೀರ ಆರೋಪಗಳನ್ನು ಮಾಡಲಾಗುತ್ತಿದೆ ಎಂಬ ಪ್ರಶ್ನೆ ಉದ್ಬವಿಸುವಂತೆ ಮಾಡಿದೆ. ಸೋಷಿಯಲ್ ಮಿಡಿಯಾದಲ್ಲಿ ಬಂದಂತಹ ಪೋಸ್ಟ್ ಗಳನ್ನು ಆಧರಿಸಿ ಬಾಂಗ್ಲಾ ಪೊಲೀಸ್, ಸೇನೆ ಹಾಗೂ ಗುಪ್ತಚರ ವಿಭಾಗ ಇಸ್ನಾನ್ ನ ಚಟುವಟಿಕೆಗಳು ಹಿಂಸಾಚಾರವನ್ನು ಉತ್ತೇಜಿಸುತ್ತಿದೆ ಎಂದು ಹೇಳಿಕೊಳ್ಳುತ್ತಿದೆ. ಜೈ ಶ್ರೀರಾಮ್ ಅಂದರೇ ಅವರಿಗೆ ಭಯೋತ್ಪಾದಕರ ಹಣೆಪಟ್ಟಿ ಕಟ್ಟುತ್ತಿದ್ದಾರೆ. ಇಸ್ಕಾನ್ ಸಂಸ್ಥೆ ಜನರಿಗೆ ಆಹಾರ, ಔಷಧ ಹಾಗೂ ಪರಿಹಾರ ಸಾಮಗ್ರಿಗಳನ್ನು ಒದಗಿಸುತ್ತಿದ್ದಾರೇ ವಿನಃ ಭಯೋತ್ಪಾದನೆಯ ಚಟುವಟಿಕೆಗಳನ್ನಲ್ಲ. ಬಾಂಗ್ಲಾದ ಈ ರೀತಿಯ ಕ್ರಮದ ವಿರುದ್ದ ಅಂತರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಜೊತೆಗೆ ಅವಾಮಿ ಲೀಗ್ ಮೊಹಮದ್ ಯೂನಸ್ ಸರ್ಕಾರದ ವಿರುದ್ದ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದು, ಈ ದೂರು ಸ್ವೀಕಾರವಾದರೇ ಯೂನಸ್ ಸರ್ಕಾರದ ವಿರುದ್ದ ಅಂತರಾಷ್ಟ್ರೀಯ ತನಿಖೆ ನಡೆಯಬಹುದು ಎನ್ನಲಾಗಿದೆ.