Crime – ಜೂಜಿನ ಹುಚ್ಚಿಗೆ ಬಿದ್ದ ಪತಿಯೊಬ್ಬ ತನ್ನ ಹೆಂಡತಿಯನ್ನೇ ಪಣವಾಗಿ ಇಟ್ಟು ಸೋತ ನಂತರ, ಆಕೆಯ ಮೇಲೆ ಎಂಟು ಮಂದಿ ಅತ್ಯಾಚಾರ ಎಸಗಿದ ಮನಕಲಕುವ ಘಟನೆಯೊಂದು ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ವರದಿಯಾಗಿದೆ. ಈ ಕುರಿತು ಸಂತ್ರಸ್ತ ಮಹಿಳೆ ತನ್ನ ಪತಿ ಮತ್ತು ಆತನ ಕುಟುಂಬದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ. ಒಂದೆಡೆ, ‘ಪತಿ’ ಎಂದರೆ ಜೀವಕ್ಕೆ ಜೀವ ಕೊಡುವ ಸಂಗಾತಿ. ಇನ್ನೊಂದೆಡೆ, ಇದೇ ‘ಪತಿ’ ಕುಡಿದು, ಜೂಜಾಡಿ, ತನ್ನ ಆಸೆಗೆ ಹೆಂಡತಿಯನ್ನೇ ಬಲಿಪಶು ಮಾಡಿರುವ ಕಥೆ ನಿಜಕ್ಕೂ ಯಾರ ಎದೆಯನ್ನು ತಟ್ಟದೆ ಇರದು.

Crime – ಏನಾಯ್ತು? ಜೂಜಿನ ದೆವ್ವ ಹಿಡಿದ ಪತಿ
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮೀರತ್‌ನ ಖಿವಾಯ್ ಗ್ರಾಮದ ಡ್ಯಾನಿಶ್ ಎಂಬಾತನನ್ನು ಈ ಸಂತ್ರಸ್ತ ಮಹಿಳೆ ವಿವಾಹವಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆಯ ಸಂಕಟ ಶುರುವಾಯಿತು. ಪತಿ ಮತ್ತು ಆತನ ಕುಟುಂಬದವರು, ಅಂದರೆ ಅತ್ತೆ-ಮಾವಂದಿರು ಹೆಚ್ಚುವರಿ ವರದಕ್ಷಿಣೆ ತರುವಂತೆ ನಿರಂತರವಾಗಿ ಹಿಂಸೆ ನೀಡಲು ಶುರು ಮಾಡಿದರು.
ಪತಿ ಡ್ಯಾನಿಶ್ ಸಂಪೂರ್ಣವಾಗಿ ಮದ್ಯ ಮತ್ತು ಜೂಜಿಗೆ ದಾಸನಾಗಿದ್ದ. ಪ್ರತಿದಿನ ಕುಡಿದು ಬಂದು ಆಕೆಗೆ ಹೊಡೆಯುತ್ತಿದ್ದ. ಇದಿಷ್ಟೇ ಅಲ್ಲದೆ, ಒಂದು ಹೆಜ್ಜೆ ಮುಂದೆ ಹೋಗಿ, ಆತ ತನ್ನ ಹೆಂಡತಿಯನ್ನೇ ಜೂಜಿನ “ಪಣ”ವಾಗಿ ಇಟ್ಟ! ಜೂಜಿನಲ್ಲಿ ಸೋತ ನಂತರ, ಇತರರೊಂದಿಗೆ “ಹಾಸಿಗೆ ಹಂಚಿಕೊಳ್ಳುವಂತೆ” ಆಕೆಗೆ ಒತ್ತಾಯ ಮಾಡಿದ್ದಾನೆ.
Crime – ಅತ್ಯಾಚಾರಕ್ಕೆ ಬಲಿಯಾದ ಅಮಾಯಕ ಜೀವ
ಸಂತ್ರಸ್ತ ಮಹಿಳೆ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಜೂಜಿನಲ್ಲಿ ಸೋತ ಮೇಲೆ ಉಮೇಶ್ ಗುಪ್ತಾ, ಮೋನು, ಅನ್ಶುಲ್ ಸೇರಿದಂತೆ 8 ಮಂದಿ ಪುರುಷರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿಸಿದ್ದಾರೆ. ಆದರೆ, ಇಲ್ಲಿನ ಮತ್ತೊಂದು ಆಘಾತಕಾರಿ ವಿಚಾರವೆಂದರೆ, ಈ ದೌರ್ಜನ್ಯದಲ್ಲಿ ಕೇವಲ ಹೊರಗಿನವರು ಮಾತ್ರವಲ್ಲ, ಸ್ವತಃ ಆಕೆಯ ಮೈದುನ (ಪತಿಯ ತಮ್ಮ) ಮತ್ತು ಆಕೆಯ ನಾದಿನಿ ಪತಿ ಸಹ ಭಾಗಿಯಾಗಿದ್ದರಂತೆ! ಅಷ್ಟೇ ಅಲ್ಲ, ಆಕೆಯ ಮಾವ ಯಾಮಿನ್ ಸಹ ವರದಕ್ಷಿಣೆ ತರದಿದ್ದರೆ, ‘ನಮ್ಮ ಮಾತು ಕೇಳಬೇಕು, ನಮ್ಮನ್ನು ಸಂತೋಷಪಡಿಸಬೇಕು’ ಎಂದು ಬೆದರಿಕೆ ಹಾಕಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆಕೆ ನೋವಿನಿಂದ ಹೇಳಿಕೊಂಡಿದ್ದಾರೆ. Read this also : ಮದುವೆಗೆ ಕೆಲವೇ ಗಂಟೆಗಳಿರುವಾಗ ಭಯಾನಕ ದುರಂತ: ಸೀರೆ ಜಗಳಕ್ಕೆ ನಿಶ್ಚಿತ ವಧುವನ್ನೇ ಕೊಂದ ವರ!

Crime – ಸಂತ್ರಸ್ಥ ಮಹಿಳೆಯ ಹೇಳಿಕೆ:
“ಮದುವೆ ನಂತರ ವರದಕ್ಷಿಣೆಗಾಗಿ ಹಿಂಸಿಸಿದರು. ನಾನು ಗರ್ಭಿಣಿ ಎಂದು ಹೇಳಿದಾಗ, ಬಲವಂತವಾಗಿ ಗರ್ಭಪಾತ ಮಾಡಿಸಿದರು. ನನ್ನ ಕಾಲಿನ ಮೇಲೆ ಆಸಿಡ್ ಸುರಿದು, ಕೊನೆಗೆ ನನ್ನನ್ನು ಕೊಲ್ಲಲು ನದಿಗೆ ತಳ್ಳಿದರು! ಆದರೆ, ಕೆಲವು ಸ್ಥಳೀಯರು ನನ್ನನ್ನು ರಕ್ಷಿಸಿದರು. ಈಗಲೂ ದೂರು ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ.” ಇನ್ನೂ ಮಹಿಳೆಯ ಈ ದೂರಿನ ಆಧಾರದ ಮೇಲೆ ಬಾಗ್‌ಪತ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದೌರ್ಜನ್ಯಕ್ಕೊಳಗಾದ ಮಹಿಳೆಗೆ ನ್ಯಾಯ ಸಿಗಬೇಕಿದೆ.
