Saturday, August 2, 2025
HomeStateProtest : ಚಿತ್ರಾವತಿ ಅಣೆಕಟ್ಟು ನಿರ್ಮಾಣ ಆಗಲು ಮೂಲಕ ಕಾರಣ ಜಿ.ವಿ.ಶ್ರೀರಾಮರೆಡ್ಡಿ : ಜಯರಾಮರೆಡ್ಡಿ

Protest : ಚಿತ್ರಾವತಿ ಅಣೆಕಟ್ಟು ನಿರ್ಮಾಣ ಆಗಲು ಮೂಲಕ ಕಾರಣ ಜಿ.ವಿ.ಶ್ರೀರಾಮರೆಡ್ಡಿ : ಜಯರಾಮರೆಡ್ಡಿ

Protest – ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ (ಭಾಗ್ಯನಗರ) ಕ್ಷೇತ್ರದ ಮಾಜಿ ಶಾಸಕರಾದ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ರವರ ಮುಂದಾಲೋಚನೆ ಹಾಗೂ ಅವಿರಥ ಹೋರಾಟದಿಂದ ಬಾಗೇಪಲ್ಲಿಯಲ್ಲಿ ಚಿತ್ರಾವತಿ ಅಣೆಕಟ್ಟು ನಿರ್ಮಾಣವಾಗಿದೆ. ಈ ಡ್ಯಾಂಗೆ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ರವರ ಹೆಸರನ್ನಿಡುವುದು ಸೂಕ್ತವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಬಿ.ಜಯರಾಮರೆಡ್ಡಿ ತಿಳಿಸಿದ್ದಾರೆ.

Farmers will protest in Bagepalli demanding Chitravathi Dam be named after GV Sriram Reddy, original planner and leader behind the project

Protest – ಚಿತ್ರಾವತಿ ಡ್ಯಾಂ ನಿರ್ಮಾಣದ ಹಿಂದಿನ ಕಥೆ ಮತ್ತು ಹೋರಾಟ

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಿಪಿಎಂ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಗಡಿ ಭಾಗವಾಗಿರುವ ಬಾಗೇಪಲ್ಲಿ, ಗುಡಿಬಂಡೆಯ ಜನರಿಗೆ ನೀರಿಗೆ ಸಮಸ್ಯೆಯಾಗಬಾರದೆಂದು ಮುಂದಾಲೋಚನೆ ಮಾಡಿ, ಸುಮಾರು 1998 ರ ಸಮಯದಲ್ಲಿ ಶ್ರೀರಾಮರೆಡ್ಡಿಯವರೇ ಚಿತ್ರಾವತಿ ನದಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದರು. ಈ ಡ್ಯಾಂ ನಿರ್ಮಾಣದ ಸಮಯದಲ್ಲಿ ಪಕ್ಕದ ಆಂಧ್ರದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು, ಜೊತೆಗೆ ದೊಡ್ಡ ಹೋರಾಟಕ್ಕೆ ಬಾಗೇಪಲ್ಲಿಗೆ ಬಂದಿದ್ದರು. ಆದರೆ ಅಂದು ಜಿ.ವಿ.ಶ್ರೀರಾಮರೆಡ್ಡಿಯವರೇ ಮುಂದೆ ನಿಂತು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದರು. ಘಟಾನುಘಟಿಗಳಾದ ಆಂಧ್ರ ರಾಜಕೀಯ ನಾಯಕರುನ್ನು ಹಿಮ್ಮೆಟ್ಟಿಸಿದರು. ಚಿತ್ರಾವತಿ ಡ್ಯಾಂ ನಿರ್ಮಾಣದ ಹಿಂದೆ ದೊಡ್ಡ ಹೋರಾಟಗಳೇ ಇದೆ.

ಆದರೆ ಕೆಲವು ದಿನಗಳ ಹಿಂದೆಯಷ್ಟೆ ಸಚಿವ ಸುಧಾಕರ್‍ ರವರು ಚಿತ್ರಾವತಿ ಡ್ಯಾಂಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ರವರ ಹೆಸರು ನಾಮಕರಣ ಮಾಡಲು ಮುಂದಾಗಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಚಿತ್ರಾವತಿ ಡ್ಯಾಂ ನಿರ್ಮಾಣಕ್ಕೆ ಕಾರಣಕರ್ತರಾದ ಶ್ರೀರಾಮರೆಡ್ಡಿಯವರು ಹೆಸರು ಮಾಡಲು ಬಯಸಿದವರಲ್ಲ. ಇದೀಗ ಅವರು ನಿಧನರಾಗಿದ್ದಾರೆ. ಅವರು ಹೆಸರು ಕ್ಷೇತ್ರದಲ್ಲಿ ಅಳಿಸಿ ಹಾಕಲು ಕೆಲ ರಾಜಕೀಯ ನಾಯಕರು ಮುಂದಾಗಿರುವುದು ಡ್ಯಾಂ ನ ನಾಮಕರಣದ ಮೂಲ ಉದ್ದೇಶ ಎಂದರು.

Protest – ಜಲ ಜೀವನ್ ಮಿಷನ್ ಮತ್ತು ರಾಜಕೀಯ ತಂತ್ರಗಾರಿಕೆ

ಬಳಿಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್‍ ಬಣದ ಜಿಲ್ಲಾಧ್ಯಕ್ಷ ಹೆಚ್.ಪಿ.ರಾಮನಾಥ್ ಮಾತನಾಡಿ, ರಾಜ್ಯ ಕಾಂಗ್ರೇಸ್ ಸರ್ಕಾರ ಈ ಭಾಗಕ್ಕೆ ಜಲ ಜೀವನ್ ಮಿಷನ್ ಯೋಜನೆಯಡಿ ನೀರು ನೀಡಲು ಯೋಜನೆ ರೂಪಿಸಿ ಅನುದಾನ ನೀಡಿದೆ. ಆದರೆ ಈ ಯೋಜನೆಗೆ ಕೇಂದ್ರ ಶೇ.50, ರಾಜ್ಯ ಸರ್ಕಾರ ಶೇ.40ರಷ್ಟು ಹಾಗೂ ಸ್ಥಳೀಯ ಆಡಳಿತಗಳು ಶೇ.10 ರಷ್ಟು ಅನುದಾನ ನೀಡಬೇಕು. ಸದ್ಯ ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿದೆ. ಈಗಾಗಲೇ ವಿವಿಧ ಸಾರಿಗೆ ಸಂಸ್ಥೆಗಳಿಗೆ ಸಾವಿರಾರು ಕೋಟಿಗಳು ಬಾಕಿ ನೀಡಬೇಕಿದೆ.

Farmers will protest in Bagepalli demanding Chitravathi Dam be named after GV Sriram Reddy, original planner and leader behind the project

Protest – ಕಾಂಗ್ರೇಸ್ ನವರಿಗೆ ಜಿ.ವಿ.ಶ್ರೀರಾಮರೆಡ್ಡಿಯವರನ್ನು ಕಂಡರೆ ಭಯ

ಈ ನಡುವೆ ಶೇ.40 ರಷ್ಟು ಅನುದಾನ ಜಲ ಜೀವನ್ ಮಿಷನ್ ಯೋಜನೆಗೆ ಯಾವ ರೀತಿ ನೀಡುತ್ತಾರೆ. ಅನುದಾನ ನೀಡಲು ಆಗದೇ ಸ್ಥಳೀಯ ಕಾಂಗ್ರೇಸ್ ನಾಯಕರನ್ನು ಬಳಸಿಕೊಂಡು ಚಿತ್ರಾವತಿ ಡ್ಯಾಂ ಗೆ ಹೆಸರು ಬದಲಾವಣೆಯ ಪ್ರಸ್ತಾಪ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೇಸ್ ನವರಿಗೆ ಜಿ.ವಿ.ಶ್ರೀರಾಮರೆಡ್ಡಿ ಹೆಸರು ಕಂಡರೇ ಸಾಕು ಭಯ ಹುಟ್ಟುತ್ತೆ. ಅವರ ಮರಣದ ಬಳಿಕ ಕಾಂಗ್ರೇಸ್ ನಾಯಕರೆಲ್ಲಾ ಅಭಿವೃದ್ದಿಯ ಹರಿಕಾರ ಎಂದು ಬಣ್ಣಿಸಿದ್ದರು. ಆದರೂ ಸಹ ಇದೀಗ ಅವರ ಹೆಸರನ್ನು ಅಳಿಸಿಹಾಕಲು ಈ ರೀತಿಯ ಕೆಲಸಗಳಿಗೆ ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.

Read this also : ಸಾಲ ಪಡೆದವರು ಮೃತಪಟ್ಟರೆ ಇಎಂಐ ಯಾರು ಕಟ್ಟಬೇಕು? ಈ ಮಾಹಿತಿ ನಿಮಗಾಗಿ!

Protest – ಆಗಸ್ಟ್ 2ರಂದು ಬಾಗೇಪಲ್ಲಿಯಲ್ಲಿ ಪ್ರತಿಭಟನೆ

ಇದೇ ಸಮಯದಲ್ಲಿ ದಲಿತ ಮುಖಂಡ ರಾಜು ಹಾಗೂ ಡಿವೈಎಫ್ ಐ ಮುಖಂಡ ಶ್ರೀನಿವಾಸ್ ಮಾತನಾಡಿ, ಬಾಗೇಪಲ್ಲಿಯ ಚಿತ್ರಾವತಿ ಡ್ಯಾಂ ಹೆಸರು ಹಾಗೆಯೇ ಉಳಿಯಲಿ ಒಂದು ವೇಳೆ ಹೆಸರು ಬದಲಿಸಬೇಕಾದರೇ ಅದಕ್ಕೆ ಜಿ.ವಿ.ಶ್ರೀರಾಮರೆಡ್ಡಿ ರವರ ಹೆಸರನ್ನು ಇಡಬೇಕು. ಈ ಸಂಬಂಧ ಬಾಗೇಪಲ್ಲಿಯ ಪುರಸಭೆಯ ಮುಂಭಾಗ ಆ.2 ರಂದು ಸಿಪಿಎಂ ಸೇರಿದಂತೆ ಹಲವು ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಹೋರಾಟಕ್ಕೆ ಎಲ್ಲರೂ ಮುಂದಾಗಬೇಕೆಂದರು. ಈ ವೇಳೆ ಸಿಪಿಎಂ ಪಕ್ಷದ ತಾಲೂಕು ಕಾರ್ಯದರ್ಶಿ ವೆಂಟಕರಾಜು, ತಾಲೂಕು ಸಮಿತಿ ಸದಸ್ಯರಾದ ರಮಣ, ದೇವರಾಜು, ಲಕ್ಷ್ಮೀನಾರಾಯಣ, ಆದಿನಾರಾಯಣ ಸೇರಿದಂತೆ ಹಲವರು ಇದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular