HomeStateAwareness Camp : ವ್ಯಸನಮುಕ್ತಿಯಿಂದ ನೆಮ್ಮದಿಯ ಬದುಕಿನೆಡೆಗೆ : ಧರ್ಮಸ್ಥಳ ಯೋಜನೆಯಿಂದ ವಿಶೇಷ ಅಭಿಯಾನಕ್ಕೆ ಚಾಲನೆ

Awareness Camp : ವ್ಯಸನಮುಕ್ತಿಯಿಂದ ನೆಮ್ಮದಿಯ ಬದುಕಿನೆಡೆಗೆ : ಧರ್ಮಸ್ಥಳ ಯೋಜನೆಯಿಂದ ವಿಶೇಷ ಅಭಿಯಾನಕ್ಕೆ ಚಾಲನೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKRDP) ಬಿ.ಸಿ ಟ್ರಸ್ಟ್ ಚಿಕ್ಕಬಳ್ಳಾಪುರ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ 2044ನೇ ಮದ್ಯವರ್ಜನ (Awareness Camp) ಶಿಬಿರವು ಬೀಚಗಾನಹಳ್ಳಿಯ ಸಾಂಸ್ಕೃತಿಕ ಭವನದಲ್ಲಿ ಅದ್ದೂರಿಯಾಗಿ ಉದ್ಘಾಟನೆಗೊಂಡಿತು. ಲಾಯಿಲದ ಮದ್ಯಮುಕ್ತಿ ಮತ್ತು ಸಂಶೋಧನಾ ಕೇಂದ್ರದ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಈ ಶಿಬಿರವನ್ನು ಆಯೋಜಿಸಲಾಗಿತ್ತು.

Awareness Camp – ಮನಃಪರಿವರ್ತನೆಯೇ ಶಿಬಿರದ ಮೂಲ ಉದ್ದೇಶ

ಕಾರ್ಯಕ್ರಮದ ಆರಂಭದಲ್ಲಿ ಯೋಜನಾಧಿಕಾರಿ ವಿನಾಯಕ ಪೈ ಸರ್ವರನ್ನೂ ಸ್ವಾಗತಿಸಿದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಪೂಜ್ಯರ ಮದ್ಯವರ್ಜನ ಶಿಬಿರವು ಕಡಿಮೆ ಖರ್ಚು ಮತ್ತು ಸಮಯದಲ್ಲಿ ವ್ಯಕ್ತಿಯ ಅಂತರಂಗವನ್ನು ಭೇದಿಸಿ ಮನಃಪರಿವರ್ತನೆ ಮಾಡುವ ವಿಶಿಷ್ಟ ಪ್ರಕ್ರಿಯೆಯಾಗಿದೆ ಎಂದು ತಿಳಿಸಿದರು. ಜನಜಾಗೃತಿ ವೇದಿಕೆಯ ಮೂಲಕ ನಡೆಯುತ್ತಿರುವ ಸಾಮಾಜಿಕ ಆಂದೋಲನ ಹಾಗೂ ಶಿಬಿರದ ದೈನಂದಿನ ಚಟುವಟಿಕೆಗಳ ಕುರಿತು ಅವರು ಸಮಗ್ರ ಮಾಹಿತಿ ನೀಡಿದರು.

Awareness Camp organized in Beechaganahalli Cultural Hall promoting alcohol de-addiction and social reform

ವೀರೇಂದ್ರ ಹೆಗ್ಗಡೆಯವರಿಗೆ ಭಾರತರತ್ನ ಗೌರವ ಸಲ್ಲಲಿ

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಮಾಜಿ ಕೆ.ಡಿ.ಪಿ ಸದಸ್ಯ ಬಿ. ವಿ ಕೃಷ್ಣೇಗೌಡರು, ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ವೀರೇಂದ್ರ ಹೆಗ್ಗಡೆಯವರಿಗೆ ದೇಶದ ಅತ್ಯುನ್ನತ ಗೌರವವಾದ ಭಾರತರತ್ನ ದೊರೆಯಬೇಕು ಎಂದು ಒತ್ತಾಯಿಸಿದರು. ಸರ್ಕಾರವು ಆದಾಯಕ್ಕಾಗಿ ಮದ್ಯದಂಗಡಿಗಳ ಪರವಾನಗಿ ನೀಡುತ್ತಿದ್ದರೆ, (Awareness Camp) ಹೆಗ್ಗಡೆಯವರು ಕುಡಿತದಿಂದ ಹೈರಾಣಾದ ಕುಟುಂಬಗಳ ಕಣ್ಣೀರು ವರೆಸಿ, ಒಡೆಯುವ ಹಂತದಲ್ಲಿರುವ ಕುಟುಂಬಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಶಿಬಿರಾರ್ಥಿಗಳು ಈ ಸುವರ್ಣ ಅವಕಾಶವನ್ನು ಬಳಸಿಕೊಂಡು ಮದ್ಯಮುಕ್ತರಾಗಿ ಹೊಸ ಜೀವನ ಆರಂಭಿಸಬೇಕು ಎಂದು ಅವರು ಕರೆ ನೀಡಿದರು.

ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಶಿಬಿರ ಪೂರಕ

ಗುಡಿಬಂಡೆ ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗಮಣಿ ಮಾತನಾಡಿ, ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವ ಸಲುವಾಗಿ ಇಂತಹ ಶಿಬಿರಗಳನ್ನು ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು. ಜಿಲ್ಲಾ ನಿರ್ದೇಶಕ ಪ್ರಶಾಂತ್ ಸಿ. ಎಸ್ ಮಾತನಾಡಿ, ಪೂಜ್ಯ ಖಾವಂದರ ಆಶಯದಂತೆ ರಾಜ್ಯಾದ್ಯಂತ ಈಗಾಗಲೇ 1,35,000ಕ್ಕೂ ಹೆಚ್ಚು ಮಂದಿ ಮದ್ಯಪಾನದಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇದು (Awareness Camp) ಯೋಜನೆಯ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ತಿಳಿಸುತ್ತಾ ಜನಜಾಗೃತಿ ಕಾರ್ಯಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು.

ಗಣ್ಯರ ಉಪಸ್ಥಿತಿ ಮತ್ತು ನಿರ್ವಹಣೆ

ಕಾರ್ಯಕ್ರಮದ (Awareness Camp) ಅಧ್ಯಕ್ಷೆತೆಯನ್ನು ಶಿಬಿರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಿ. ಎಸ್ ಕಿರಣ್ ಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ಮಂಜುನಾಥ್, ಕೆ.ನರೇಂದ್ರ ಕೆ, ಡಿ. ಎಲ್ ಪರಿಮಳ, ಸುಷ್ಮಾ ಶ್ರೀನಿವಾಸ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾರಾಯಣಸ್ವಾಮಿ ಉಪಸ್ಥಿತರಿದ್ದು ಶುಭ ಹಾರೈಸಿದರು. Read this also : ಸಾಮಾನ್ಯ ಜನರಿಗೆ ‘ಶ್ರೀರಾಮರಕ್ಷೆ’.. ತಿಂಗಳಿಗೆ ಕೇವಲ ₹36 ಪಾವತಿಸಿ ₹2 ಲಕ್ಷ ಲೈಫ್ ಇನ್ಶೂರೆನ್ಸ್ ಪಡೆಯಿರಿ!

ಶಿಬಿರಾಧಿಕಾರಿ ದಿನೇಶ್ ಮರಾಠಿ, ಆರೋಗ್ಯ ಸಹಾಯಕ ವೆಂಕಟೇಶ್ ಹಾಗೂ ಮೇಲ್ವಿಚಾರಕ ದರ್ಶನ್ ಎಂ. ಎಸ್ ಸಹಕರಿಸಿದರು. ಸೋಮೇನಹಳ್ಳಿ ವಲಯದ ಮೇಲ್ವಿಚಾರಕಿ ಮಂಜುಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಪ್ರಗತಿಬಂಧು ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular