ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಇರುವ ಪ್ರತಿಯೊಬ್ಬರ ಕೈಯಲ್ಲೂ ವಾಟ್ಸಾಪ್ ಇದ್ದೇ ಇರುತ್ತದೆ. ನಮ್ಮ ದಿನನಿತ್ಯದ ಸಂವಹನಕ್ಕೆ ಇದು ಅತ್ಯಗತ್ಯವಾಗಿ ಬಿಟ್ಟಿದೆ. ಆದರೆ, ವಾಟ್ಸಾಪ್ ಬಳಸುವಾಗ ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ನಮ್ಮ ಅಕೌಂಟ್ ಬ್ಯಾನ್ (WhatsApp Ban) ಆಗುವಂತೆ ಮಾಡಬಹುದು ಎಂಬುದು ನಿಮಗೆ ಗೊತ್ತೇ?

ಹೌದು, ವಾಟ್ಸಾಪ್ ಇತ್ತೀಚೆಗೆ ತನ್ನ ಸುರಕ್ಷತಾ ನಿಯಮಗಳನ್ನು ಕಠಿಣಗೊಳಿಸಿದೆ. ಸ್ಕ್ಯಾಮ್, ನಕಲಿ ಆ್ಯಪ್‌ಗಳು ಮತ್ತು ದುರ್ಬಳಕೆಯನ್ನು ತಡೆಯಲು ಕಂಪನಿ ಪ್ರತಿ ತಿಂಗಳು ಲಕ್ಷಾಂತರ ಖಾತೆಗಳನ್ನು ಬ್ಯಾನ್ ಮಾಡುತ್ತಿದೆ. ನಿಮ್ಮ ಅಕೌಂಟ್ ಸೇಫ್ ಆಗಿರಬೇಕೆಂದರೆ ಈ ಕೆಳಗಿನ 4 ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ.
WhatsApp Ban – ಅ ನಾಲ್ಕು ತಪ್ಪುಗಳು ಯಾವುವು
ಅಪರಿಚಿತರಿಗೆ ಮೆಸೇಜ್ ಕಳುಹಿಸುವುದು (Spamming)
ನೀವು ತೀರಾ ಅಪರಿಚಿತರಿಗೆ ಅಂದರೆ, ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದವರಿಗೆ ಅಥವಾ ನಿಮ್ಮ ನಂಬರ್ ಸೇವ್ ಮಾಡಿಕೊಳ್ಳದವರಿಗೆ ಅತಿಯಾಗಿ ಮೆಸೇಜ್ ಕಳುಹಿಸುತ್ತಿದ್ದೀರಾ? ಹಾಗಿದ್ದರೆ ಎಚ್ಚರ! ಒಂದೇ ಸಂದೇಶವನ್ನು ಪದೇ ಪದೇ ಫಾರ್ವರ್ಡ್ ಮಾಡುವುದು ಅಥವಾ ಅಪರಿಚಿತರಿಗೆ ಸಗಟಾಗಿ (Bulk) ಮೆಸೇಜ್ ಕಳುಹಿಸುವುದನ್ನು ವಾಟ್ಸಾಪ್ ‘ಸ್ಪ್ಯಾಮ್’ (WhatsApp Ban) ಎಂದು ಪರಿಗಣಿಸುತ್ತದೆ. ಇದು ಮುಂದುವರಿದರೆ ವಾಟ್ಸಾಪ್ ಸಿಸ್ಟಮ್ ತಾನಾಗಿಯೇ ನಿಮ್ಮ ಖಾತೆಯನ್ನು ನಿರ್ಬಂಧಿಸಬಹುದು.
ಬೆದರಿಕೆ ಅಥವಾ ನಿಂದನೆ (Abusive Content)
ವಾಟ್ಸಾಪ್‌ನಲ್ಲಿ ಯಾರನ್ನಾದರೂ ನಿಂದಿಸುವುದು, ಕೆಟ್ಟ ಪದಗಳನ್ನು ಬಳಸುವುದು, ಬೆದರಿಕೆ ಹಾಕುವುದು ಅಥವಾ ಬ್ಲಾಕ್‌ಮೇಲ್ ಮಾಡುವುದು ಕಂಪನಿಯ ನಿಯಮಗಳಿಗೆ ವಿರುದ್ಧವಾಗಿದೆ. ನೀವು ಕಳುಹಿಸಿದ ಸಂದೇಶದ ಬಗ್ಗೆ ಯಾರಾದರೂ ‘ರಿಪೋರ್ಟ್’ (Report) ಮಾಡಿದರೆ ಮತ್ತು ಅದು ಸಾಬೀತಾದರೆ, ನಿಮ್ಮ ಅಕೌಂಟ್ ಶಾಶ್ವತವಾಗಿ ಡಿಲೀಟ್ ಆಗುವ ಸಾಧ್ಯತೆ ಇರುತ್ತದೆ.

ನಕಲಿ ವಾಟ್ಸಾಪ್ ಬಳಕೆ (Fake Apps)
ಅಧಿಕೃತ ವಾಟ್ಸಾಪ್ ಬಿಟ್ಟು, ಹೆಚ್ಚು ಫೀಚರ್‌ಗಳ ಆಸೆಗೆ ಬಿದ್ದು ‘ಜಿಬಿ ವಾಟ್ಸಾಪ್’ (GB WhatsApp) ಅಥವಾ ‘ವಾಟ್ಸಾಪ್ ಪ್ಲಸ್’ (WhatsApp Plus) ನಂತಹ ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ಬಳಸುತ್ತಿದ್ದೀರಾ? ಇದು ಅತ್ಯಂತ ಅಪಾಯಕಾರಿ. ಇವು ನಿಮ್ಮ ಫೋನ್‌ನಲ್ಲಿ ವೈರಸ್ ಅಥವಾ ಮಾಲ್‌ವೇರ್ ತುಂಬುವ ಸಾಧ್ಯತೆ ಇರುತ್ತದೆ. ಜೊತೆಗೆ ಇದು ವಾಟ್ಸಾಪ್ ನಿಯಮಗಳ ಸ್ಪಷ್ಟ ಉಲ್ಲಂಘನೆ. ಇಂತಹ ಆ್ಯಪ್ ಬಳಸುವವರ ಖಾತೆಯನ್ನು ಮುಲಾಜಿಲ್ಲದೆ ಬ್ಯಾನ್ (WhatsApp Ban) ಮಾಡಲಾಗುತ್ತದೆ. Read this also : ಪರಿಚಯವಾದ 4 ಗಂಟೆಯಲ್ಲೇ ಮದುವೆ, 18 ದಿನದಲ್ಲಿ ದಿವಾಳಿ! ಡೇಟಿಂಗ್ ಆ್ಯಪ್ ಪ್ರಿಯರೇ ಎಚ್ಚರ, ಇಲ್ಲಿದೆ ಶಾಕಿಂಗ್ ಸ್ಟೋರಿ
ಎಚ್ಚರಿಕೆ ನೀಡಿದರೂ ತಪ್ಪು ತಿದ್ದಿಕೊಳ್ಳದಿರುವುದು
ಕೆಲವೊಮ್ಮೆ ಸಣ್ಣ ತಪ್ಪುಗಳಿಗೆ ವಾಟ್ಸಾಪ್ ನಿಮ್ಮನ್ನು ಕೆಲವೇ ಗಂಟೆಗಳ ಅಥವಾ ದಿನಗಳ ಕಾಲ ‘ತಾತ್ಕಾಲಿಕವಾಗಿ’ (Temporary Ban) ಬ್ಯಾನ್ ಮಾಡುತ್ತದೆ. ಇದು ನಿಮಗೆ ನೀಡುವ ಎಚ್ಚರಿಕೆಯ ಗಂಟೆ. ಇದರ ನಂತರವೂ ನೀವು ಅದೇ ತಪ್ಪುಗಳನ್ನು (ಉದಾಹರಣೆಗೆ: ಬಲ್ಕ್ ಮೆಸೇಜ್ ಕಳುಹಿಸುವುದು) ಮುಂದುವರಿಸಿದರೆ, ಕಂಪನಿ ನಿಮ್ಮನ್ನು ಶಾಶ್ವತವಾಗಿ ನಿಷೇಧಿಸುತ್ತದೆ.

ಅಕೌಂಟ್ ಬ್ಯಾನ್ ಆದರೆ ಏನಾಗುತ್ತದೆ?
ಒಮ್ಮೆ ನಿಮ್ಮ ನಂಬರ್ ಬ್ಯಾನ್ ಆದರೆ, ನೀವು ಆ ನಂಬರ್‌ನಲ್ಲಿ ಮತ್ತೆ ವಾಟ್ಸಾಪ್ ತೆರೆಯಲು ಸಾಧ್ಯವಿಲ್ಲ. ನಿಮ್ಮ ಹಳೆಯ ಚಾಟ್, ಫೋಟೋಗಳು, ವಿಡಿಯೋಗಳು ಮತ್ತು ಗ್ರೂಪ್‌ಗಳು ಎಲ್ಲವೂ ಡಿಲೀಟ್ ಆಗುತ್ತವೆ. ನೀವು ಮತ್ತೆ ವಾಟ್ಸಾಪ್ ಬಳಸಬೇಕೆಂದರೆ ಹೊಸ ಸಿಮ್ ಕಾರ್ಡ್ ತೆಗೆದುಕೊಳ್ಳಲೇಬೇಕಾಗುತ್ತದೆ.
