Author: by Admin
ಚಿಕ್ಕಬಳ್ಳಾಪುರ ಜಿಲ್ಲೆಯ ಪೆರೇಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ರೋಗಿಯೊಬ್ಬರು ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಕ್ಷೇತ್ರ ಶಾಸಕ ಪ್ರದೀಪ್ ಈಶ್ವರ್ ಹಾಗೂ ಮಾಜಿ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ರವರ ಸ್ವ ಗ್ರಾಮದಲ್ಲಿ ನಡೆದಿದೆ. ಪೆರೇಸಂದ್ರ ಗ್ರಾಮದ ಗರ್ಭಿಣಿ ಮಹಿಳೆ ಹೆರಿಗೆಗೆ ಎಂದು ಪೆರೇಸಂದ್ರ 24×7 ಸರ್ಕಾರಿ ಆಸ್ಪತ್ರೆಗೆ ಬುಧವಾರ ಬೆಳಿಗ್ಗೆ 7 ಗಂಟೆಗೆ ದಾಖಲಾಗಿದ್ದಾರೆ. ಇಲ್ಲಿನ ಆಸ್ಪತ್ರೆಯ ಸಿಬ್ಬಂದಿ ನಾರ್ಮಲ್ ಆಗುತ್ತದೆ ಎಂದು ಮಧ್ಯಾಹ್ನ 12 ರ ವರೆಗೆ ಆಸ್ಪತ್ರೆಯಲ್ಲಿ ಇರಿಸಿಕೊಂಡು ಇದ್ದಾರೆ. ಪರಿಸ್ಥಿತಿ ಚಿಂತನಾ ಜನಕ ವಾದಾಗ ಸಿರಿಯಸ್ ಇದೆ ಬೇಗ ಚಿಕ್ಕಬಳ್ಳಾಪುರ ಕ್ಕೆ ರೆಫರ್ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಹೋದಾಗ ಅಲ್ಲಿನ ವೈದ್ಯರು ಪರೀಕ್ಷೆ ಮಾಡಿದ ನಂತರ ಮಗು ಹೊಟ್ಟೆಯಲ್ಲಿ ಸಾವು ಆಗಿದೆ ಎಂದು ತಿಳಿಸಿದ್ದಾರೆ. ನಂತರ ಮಗುವನ್ನು ಸಿಸರಿನ್ ಮಾಡಿ ಮಗು ಹೊರ ತೆಗೆದು ಮಗುವನ್ನು ಬೇಗ ಮಣ್ಣು ಮಾಡಿಬಿಡಿ ಎಂದು ಪೋಷಕರಿಗೆ ತಿಳಿಸಿದ್ದಾರೆ ಅದರಂತೆ ಅವರು ಹೆಣ್ಣು ಮಗುವನ್ನು ರಾತ್ರಿ ಮಣ್ಣು ಮಾಡಿದ್ದಾರೆ. ಮಾಜಿ…
ಬಾಗೇಪಲ್ಲಿ: ಯಾವುದೇ ಕ್ಷೇತ್ರದಲ್ಲಿರುವ ಪ್ರತಿಭೆಗೆ ವಿಷೇಶವಾದಂತಹ ಪ್ರಾಮುಖ್ಯತೆ ನೀಡುವುದು ಪ್ತತಿಯೊಬ್ಬ ಕರ್ತವ್ಯವಾಗಿದೆ. ಪ್ರತಿಭೆಯನ್ನು ಗುರ್ತಿಸಿ, ಪ್ರೋತ್ಸಾಹಿಸಿ ಬೆಳೆಸಿದಾಗ ಮಾತ್ರ ಯಾವುದೇ ದೇಶ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತೆ ಎಂದು ಯಂಗ್ ಇಂಡಿಯಾ ಶಾಲೆಯ ಮುಖ್ಯಸ್ಥರಾದ ಪ್ರೊ.ಡಿ.ಶಿವಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಯಂಗ್ ಇಂಡಿಯಾ ಶಾಲೆಯ ಆವರಣದಲ್ಲಿ ನಡೆದ ಅಭಿನಂಧನೆ ಸಭೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ 6 ನೇ ರ್ಯಾಂಕ್ ಪಡೆದ ಲಕ್ಷ್ಮೀಲಿಶಾ ಮತ್ತು 7ನೇ ಪಡೆದ ಮನೋಜ್ ಕುಮಾರ್ ಅತ್ಯುತ್ತಮ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿಗಳನ್ನು ಅಭಿನಂಧಿಸಿ ಮಾತನಾಡಿದ ಅವರು ಪ್ರತಿಭೆಗೆ ವಿಷೇಶವಾದಂತಹ ಮಹತ್ವವನ್ನು ನೀಡುವುದು ಪ್ರತಿಯೊಬ್ಬ ಕರ್ತವ್ಯವಾಗಿದೆ. ಪ್ರತಿಭೆಯನ್ನು ಗುರ್ತಿಸಿ,ಪ್ರೋತ್ಸಹಿಸಿ ಬೆಳೆಸಿದ ಯಾವುದೇ ಒಂದು ದೇಶ ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ದಿಯಲ್ಲಿ ಮುಂಜೂಣಿಯಲ್ಲಿರುತ್ತೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ತಮ್ಮದೇ ಆದ ವಿಷೇಶ ಜ್ಞಾನ ಇರುತ್ತೆ ಆದರೆ ಸಾಧಿಸಬೇಕು ಎನ್ನುವ ಛಲ, ಶ್ರಮವಹಿಸಿದಾಗ ಮಾತ್ರ ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾದ್ಯವಾಗುತ್ತೆ ಎಲ್ಲದೆ ಸಾಧನೆಗೆ ಜಾತಿ, ಧರ್ಮ,ಬಡತನ ಇತ್ಯಾಧಿ ಅಡ್ಡಿಯಲ್ಲ…
ಇತ್ತೀಚಿಗೆ ಸೋಷಿಯಲ್ ಮಿಡಿಯಾ ತುಂಬಾನೆ ಫಾಸ್ಟ್ ಇದೆ ಎಂದು ಹೇಳಲಾಗುತ್ತದೆ. ಪ್ರಪಂಚದ ಮೂಲೆ ಮೂಲೆಯಲ್ಲಿ ನಡೆಯುವಂತ ಘಟನೆಗಳು ನಾವು ಇಲ್ಲಿಂದಲೇ ನೋಡಬಹುದಾಗಿದೆ. ಅದರಲ್ಲೂ ಕೆಲವರಂತೂ ಪಾಪ್ಯುಲರ್ ಆಗುವ ನಿಟ್ಟಿನಲ್ಲೋ ಅಥವಾ ದುರಃಕಾರದ ಪರಮಾವಾಧಿಯೋ ತಿಳಿಯದು ಸಾರ್ವಜನಿಕ ಸ್ಥಳಗಳಲ್ಲಿ ಮಾಡಬಾರದ ಕೆಲಸಗಳನ್ನು ಮಾಡಿ ಸುದ್ದಿಯಾಗುತ್ತಿರುತ್ತಾರೆ. ಅದೇ ಮಾದರಿಯಲ್ಲಿ ಬೈಕ್ ನಲ್ಲಿ ಹೋಗುತ್ತಿರುವ ಪ್ರೇಮಿಗಳು ಪರಸ್ಪರ್ ಚುಂಬಿಸಿಕೊಂಡು ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದು ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಕೊನೆಗೆ ಈ ಜೋಡಿ ಕ್ಷಮೆ ಕೇಳಿದ್ದಾರೆ. ಅಂದಹಾಗೆ ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ ಎನ್ನಲಾಗಿದೆ. ಪ್ರೇಮಿಗಳಿಬ್ಬರು ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ಪ್ರದರ್ಶನ ಮಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ರಸ್ತೆಯಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿರುವ ಈ ಜೋಡಿ ಪರಸ್ಪರ ಕಿಸ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಆ ಜೋಡಿಯನ್ನು ಬಂಧಿಸಿದ್ದಾರೆ. ಬಳಿಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕ್ಷಮೆ ಕೇಳಿಸಿದ್ದಾರೆ. ಆದರೆ ಜೋಡಿ…
ಬೆಂಗಳೂರಿನ ಪ್ರಸಿದ್ದ ಬನಶಂಕರಿ ದೇವಾಲಯ ತುಂಬಾನೆ ಪ್ರಾಮುಖ್ಯತೆ ಪಡೆದುಕೊಂಡಿದೆ. ಇದೀಗ ಈ ದೇವಸ್ಥಾನದ ಹುಂಡಿಯಲ್ಲಿ ಯುವತಿಯೊಬ್ಬಳು ತನ್ನ ಬೇಡಿಕೆಯನ್ನು ಪತ್ರದಲ್ಲಿ ಬರೆದು ಹಾಕಿದ್ದಾಳೆ. ಈ ಪತ್ರದಲ್ಲಿ ತಾನು ಮದುವೆಯಾಗುವ ಹುಡುಗ ಹೇಗಿರಬೇಕೆಂದು ಬರೆದಿದ್ದಾಳೆ. ನಾನು ಬಯಸಿದ ಹುಡುಗ ಗಂಡನಾಗಿ ಬರುವಂತೆ ಆಶಿರ್ವಾದ ಮಾಡುವಂತೆ ದೇವರಲ್ಲಿ ಬೇಡಿಕೆಯಿಟ್ಟು ಪತ್ರವನ್ನು ಹುಂಡಿಯಲ್ಲಿ ಹಾಕಿದ್ದಾಳೆ. ಬೆಂಗಳೂರಿನ ಬನಶಂಕರಿ ದೇವಾಸ್ತಾನದ ಹುಂಡಿಯಲ್ಲಿ ಯುವತಿ ತಾನು ಮದುವೆಯಾಗುವ ಹುಡುಗ ಹೇಗಿರಬೇಕು. ಜೊತೆಗೆ ತಾನು ಈ ಹಿಂದೆ ಪ್ರೀತಿ ಮಾಡುತ್ತಿದ್ದ ಹುಡುಗನ ಬಗ್ಗೆ ಸಹ ಬರೆದಿದ್ದಾಳೆ. ಇನ್ನೂ ಆ ಯುವತಿ ಪತ್ರದಲ್ಲಿ ಏನು ಬರೆದಿದ್ದಾಳೆ ಎಂಬುದನ್ನು ನೀವು ಓದಿ.. ”ಇವರಿಗೆ, ಶ್ರೀ ಬನಶಂಕರಿ ಅಮ್ಮ ಬೆಂಗಳೂರು, ಅಮ್ಮ ನಾನು ತಪ್ಪು ಮಾಡಿದಿನಿ. ಹಿಂದೆ ಪತ್ರ ಬರೆದಾಗ ನಾನು ಗೋಪಿನಾಥ ಅಂಬು ಬಿಟ್ಟರೆ ಬೇರೆ ಯಾರನ್ನೂ ಮದುವೆ ಆಗಬಾರದು ಅಂತ ಬರೆದಿದ್ದೆ. ಆದರೆ ಈಗ ಅವನು ನನಗೆ ಬೇಡ. ಆದಷ್ಟು ಬೇಗ ಮುಂದಿನ ವರ್ಷ 2024ರಲ್ಲಿ ನನ್ನ ಮದುವೆ ಒಳ್ಳೆಯ ಹೆಸರು,…
ರಾಜ್ಯ ಕಾಂಗ್ರೇಸ್ ಸರ್ಕಾರ ಬೆಂಗಳೂರು ಅಭಿವೃದ್ದಿಗೆ ಒಂದು ನಯಾಪೈಸೆ ಸಹ ಅನುದಾನ ಬಿಡುಗಡೆ ಮಾಡಿಲ್ಲ. ಬ್ರಾಂಡ್ ಬೆಂಗಳೂರು ಇದೆಯೇ? ಅದು ಸತ್ತು ಹೊಗಿದೆಯಾ ಎಂದು ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ದ ಗುಡುಗಿದ್ದಾರೆ. ಈ ಸಂಬಂಧ ಇದೇ ತಿಂಗಳ 28 ರಂದು ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿ ವತಿಯಿಂದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಆರ್.ಅಶೋಕ್ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಗರದ ಅಭಿವೃದ್ದಿಗೆ ಕಾಂಗ್ರೇಸ್ ಸರ್ಕಾರ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಸಿಎಂ ಹೋಗೋದು ಪೊಟೋಗೆ ಶೋ ಕೊಡೋದು ಬಿಟ್ಟರೇ ಬೇರೆ ಏನು ಕೆಲಸ ಆಗಿಲ್ಲ. ಈಗಾಗಲೇ ಕಮಿಷನರ್ ಅವರು ಮಳೆಗೆ ಸಂಬಂಧಿಸಿದ ಎಲ್ಲಾ ಮಾಡಿದ್ದಾಗಿ ಒಂದು ತಿಂಗಳ ಹಿಂದೆಯೇ ಹೇಳಿಕೆ ನೀಡಿದ್ದರು. ಪಾಲಿಕೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದರೇ ಸಿಎಂ ಸ್ಥಳಕ್ಕೆ ಭೇಟಿ ನೀಡುವ ಪ್ರಮೇಯ ಏಕೆ ಬಂತು. ಯಡಿಯೂರಪ್ಪ ರವರು ಒಂದು ವರ್ಷದಲ್ಲಿ ಏಳು ಸಾವಿರ…
ಲೋಕಸಭಾ ಚುನಾವಣೆ 2024 ರ ಫಲಿತಾಂಶ ಜೂ.4 ರಂದು ಪ್ರಕಟವಾಗಲಿದೆ. ಈಗಾಗಲೇ ಚುನಾವಣಾ ಪೂರ್ವ ಹಾಗೂ ಚುನಾವಣಾ ನಂತರದ ಸರ್ವೆಗಳಲ್ಲಿ ಬಿಜೆಪಿ ಪಕ್ಷ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಹೇಳಲಾಗಿದೆ. ಆದರೆ ಬಿಜೆಪಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂದು ವಿರೋಧ ಪಕ್ಷಗಳ ನಾಯಕರ ಮಾತಾಗಿದೆ. ಇದೀಗ ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಜೂ.4 ರಂದು ನೀರು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂಬ ಸಂದೇಶವೊಂದನ್ನು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಜಕೀಯ ಚಾಣಾಕ್ಷ ಎಂದೇ ಕರೆಯಲಾಗುವ ಪ್ರಶಾಂತ್ ಕಿಶೋರ್ ಚುನಾವಣೆಯಲ್ಲಿ ಯಾವ ಪಕ್ಷಗಳು ಎಷ್ಟು ಸ್ಥಾನ ಗಳಿಸಲಿವೆ, ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವಿಚಾರಗಳ ಬಗ್ಗೆ ಮಾಹಿತಿ ನೀಡುತ್ತಿರುತ್ತಾರೆ. ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ಪ್ರಶಾಂತ್ ಕಿಶೋರ್ ಕೆಲವೊಂದು ವಿಚಾರಗಳ ಬಗ್ಗೆ ಮಾತನಾಡಿದ್ದರು. ಇದಾದ ಬಳಿಕ ಅವರು ಟ್ವೀಟ್ ಮಾಡಿದ್ದು, ಅದು ರಾಜಕೀಯವಾಗಿ ಚರ್ಚೆಗೆ ಕಾರಣವಾಗಿದೆ. ಸಂದರ್ಶನದಲ್ಲಿ ಕಳೆದ 2022ರಲ್ಲಿ ಹಿಮಾಚಲ್ ಪ್ರದೇಶದಲ್ಲಿ ತಾವು ನೀಡಿದ್ದ ಸರ್ವೆ ಅದಲು ಬದಲಾಯ್ತು…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಾಹನ ದಟ್ಟಣೆ ಯಾವ ರೀತಿ ಇರುತ್ತದೆ ಎಂಬುದು ತಿಳಿದೇ ಇದೆ. ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ವಾಹನ ಸವಾರರು ಟ್ರಾಫಿಕ್ ನಿಯಮಗಳನ್ನು ಉಲ್ಲಘನೆ ಮಾಡುತ್ತಿರುತ್ತಾರೆ. ಸಾರಿಗೆ ಇಲಾಖೆ ಸಹ ಟ್ರಾಫಿಕ್ ನಿಯಮಗಳನ್ನು ಜಾರಿ ಮಾಡಿದರೂ ಕಡಿವಾಣ ಹಾಕಲು ಕಷ್ಟವಾಗುತ್ತಿದೆ. ಇದೀಗ ವಾಹನ ಸವಾರರ ನಿರ್ಲಕ್ಷ್ಯವನ್ನು ಬಂಡವಾಳವನ್ನಾಗಿ ಮಾಡಿಕೊಂಡ ಕೆಲ ಖದೀಮರು ಟ್ರಾಫಿಕ್ ಪೊಲೀಸರ ಹೆಸರಿನಲ್ಲಿ ದಂಡ ವಸೂಲಿ ಮಾಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ್ದ ಜಾಲವನ್ನು ಸೈಬರ್ ಕ್ರೈಂ ಪೊಲೀಸರು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ತಾವು ಟ್ರಾಫಿಕ್ ಪೊಲೀಸರೆಂದು ಹೇಳಿಕೊಂಡು ನೀವು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದೀರಾ ಎಂದು ವಸೂಲಿಗೆ ಇಳಿದಿದ್ದಾರೆ. ಉದ್ಯೋಗ ಹುಡುಕುತ್ತಾ ಬೆಂಗಳೂರಿಗೆ ಬಂದ ಹೊರ ರಾಜ್ಯದ ತಂಡ ಸುಲಭವಾಗಿ ಹಣ ಸಂಪಾದನೆ ಮಾಡುವ ಪ್ಲಾನ್ ಮಾಡಿದ್ದಾರೆ. ಅದಕ್ಕಾಗಿ ನಕಲಿ ಟ್ರಾಫಿಕ್ ಪೊಲೀಸರಾಗಿ ಅವತಾರ ತಾಳಿದ್ದಾರೆ. ಈ ಖದೀಮರು ಟ್ರಾಫಿಕ್ ಉಲ್ಲಂಘನೆ ಮಾಡಿದ ವಾಹನ ಸವಾರರಿಗೆ ನಕಲಿ ರಸೀದಿಯನ್ನು…
ಕಳೆದೆರಡು ದಿನಗಳ ಹಿಂದೆಯಷ್ಟೆ ಕಲ್ಕತ್ತಾ ಹೈಕೋರ್ಟ್ 2010 ರ ಬಳಿಕ ಪಶ್ಚಿಮ ಬಂಗಾಳದಲ್ಲಿ ನೀಡಲಾದ ಎಲ್ಲಾ OBC ಪ್ರಮಾಣ ಪತ್ರಗಳನ್ನು ರದ್ದುಗೊಳಿಸಿ ಆದೇಶ ನೀಡಿತ್ತು. ಇದಾದ ಬಳಿಕ ಪಶ್ಚಿಮ ಬಂಗಾಳದ ಆಡಳಿತರೂಡ ಟಿಎಂಸಿ (TMC) ಪಕ್ಷದ ವಿರುದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ನಾನು ಬದುಕಿರುವವರೆಗೂ ದಲಿತರು ಹಾಗೂ ಬುಡಕಟ್ಟು ಜನಾಂಗದವರ ಮೀಸಲಾತಿಯನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಹರ್ಯಾಣದ ಭಿವಾನಿಯಲ್ಲಿ ಚುನಾವಣಾ ನಿಮಿತ್ತ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಟಿಎಂಸಿ ಪಕ್ಷ ರಾಜ್ಯದಲ್ಲಿ ರಾತ್ರೋರಾತ್ರಿ ಮುಸ್ಲೀಮರಿಗೆ ಹಾಗೂ ನುಸುಳುಕೋರರಿಗೆ ಒಬಿಸಿ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ. ಆದರೆ 2010ರ ಬಳಿಕ ಮುಸ್ಲೀಂರಿಗೆ ನೀಡಿದ ಎಲ್ಲಾ ಒಬಿಸಿ ಪ್ರಮಾಣ ಪತ್ರಗಳನ್ನು ಹೈಕೋರ್ಟ್ ಅಸಿಂದುಗೊಳಿಸಿದೆ. ಕಾಂಗ್ರೆಸ್, ಟಿಎಂಸಿ ಹಾಗೂ ಇಂಡಿಯಾ ಮೈತ್ರಿಕೂಟದ ಇತರೆ ಪಕ್ಷಗಳು ಅವರ ಮತಬ್ಯಾಂಕ್ ಅನ್ನು ಬೆಂಬಲಿಸುತ್ತಿವೆ. ಇಂದು ಮೋದಿ ಬದುಕಿರುವವರೆಗೂ ದಲಿತರು ಹಾಗೂ ಬುಡಕಟ್ಟು ಜನಾಂಗದ ಹಕ್ಕುಗಳನ್ನು ಮೀಸಲಾತಿಯನ್ನು ಕಸಿದುಕೊಳ್ಳು ಯಾರಿಂದಲೂ ಸಾಧ್ಯವಿಲ್ಲ. ನಿಮಗೆ ಭರವಸೆ ನೀಡಲು…
ಶಿಡ್ಲಘಟ್ಟ : ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವುದರಿಂದ ಅಪಾಯಕಾರಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ರೋಗ ಹರಡುವುದನ್ನು ತಡೆಯಬಹುದೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ತಿಳಿಸಿದರು. ನಗರದಲ್ಲಿ ನಗರಸಭೆಯ ಪೌರ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗೆ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ರೋಗ ತಡೆ ಕುರಿತು ಹಮ್ಮಿಕೊಂಡಿದ್ದ ಮುಂಜಾಗ್ರತ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು ಸಾಮಾನ್ಯವಾಗಿ ಮಳೆ ನೀರು ನಿಲ್ಲುವ ಕಡೆ ಸೊಳ್ಳೆಗಳ ಕಾಟ ಹೆಚ್ಚಿರುತ್ತದೆ. ಇದನ್ನು ತಡೆಯಬೇಕೆಂದರು. ಡೆಂಗ್ಯೂ ನಿಯಂತ್ರಿಸಬೇಕಾದರೆ ಮೊದಲು ನಾವು ಸೊಳ್ಳೆಗಳ ಉತ್ಪತ್ತಿಗೆ ಕಡಿವಾಣ ಹಾಕಬೇಕು. ಅಲ್ಲದೇ ಸೊಳ್ಳೆಗಳ ಕಾಟದಿಂದ ತಪ್ಪಿಸಿಕೊಳ್ಳಲು ಕಾಲಕಾಲಕ್ಕೆ ಫಾಗಿಂಗ್ ಮಾಡಬೇಕು, ರಾತ್ರಿ ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆ ಅಳವಡಿಸಿಕೊಳ್ಳಬೇಕೆಂದ ಅವರು, ಮುಖ್ಯವಾಗಿ ಸೊಳ್ಳೆಗಳ ಬೆಳವಣಿಗೆಯನ್ನು ಕಡಿಮೆ ಮಾಡುವ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಸೋಂಕನ್ನು ತಡೆಗಟ್ಟಲು ಪೌರ ಕಾರ್ಮಿಕರು ಶ್ರಮಿಸಬೇಕು ಎಂದರು. ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್ ಮಾತನಾಡಿ ಮನೆಯ ಬಳಿ ಚರಂಡಿ ಗಳಲ್ಲಿ ನೀರು ನಿಲ್ಲದಂತೆ ಸರಾಗವಾಗಿ ಹರಿದು ಹೋಗುವಂತೆ ಸ್ವಚ್ಚತೆ ಮಾಡುವ ಜೊತೆಗೆ…
ಕರ್ನಾಟಕದ ಮೈಸೂರಿನಲ್ಲಿ ಜನಸ್ಪಂದನ ಹಾಗೂ ಮಾನವ ಮಂಟಪದ ವತಿಯಿಂದ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೊಂದಣಿ ವೇದಿಕೆ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಕಾಲೇಜು ಸಮಯದಲ್ಲಿನ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದಾರೆ. ನನಗೂ ಅಂತರ್ಜಾತಿ ವಿವಾಹವಾಗುವ ಆಸೆಯಿತ್ತು ಎಂದು ಹೇಳಿದ್ದಾರೆ. ಕಾನೂನು ಪದವಿ ಓದುವಾಗ ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆಯಾಗಬೇಕು ಅಂದುಕೊಂಡಿದ್ದಾಗಿ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಮೈಸೂರಿನ ಜನಸ್ಪಂದನ ಹಾಗೂ ಮಾನವ ಮಂಟಪದ ವತಿಯಿಂದ ಆಯೋಜಿಸಿದ್ದ ಅಂತರ್ಜಾರಿ ವಿವಾಹಿತರ ನೊಂದಣಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ತಮ್ಮ ವಿದ್ಯಾರ್ಥಿ ಜೀವನದಲ್ಲಿನ ಪ್ರೇಮಾಂಕುರದ ಬಗ್ಗೆ ತಿಳಿಸಿದ್ದಾರೆ. ನಾನು ಕಾನೂನು ಓದುತ್ತಿರುವಾಗ ಅಂತರ್ಜಾತಿ ವಿವಾಹವಾಗುವ ಆಸೆಯಿತ್ತು. ಬೇರೆ ಜಾತಿಯ ಸ್ನೇಹಿತೆಯೊಬ್ಬರನ್ನು ಮದುವೆಯಾಗಬೇಕು ಎಂದುಕೊಂಡಿದ್ದೆ. ಆದರೆ ಹುಡುಗಿಯೂ ಒಪ್ಪಲಿಲ್ಲ, ಮನೆಯವರೂ ಒಪ್ಪಲಿಲ್ಲ ಆದ್ದರಿಂದ ನಮ್ಮ ಜನಾಂಗದ ಹುಡುಗಿಯನ್ನೇ ಮದುವೆಯಾಗಬೇಕಾಯ್ತು ಎಂದು ಕಾಲೇಜು ಜೀವನದ ಬಗ್ಗೆ ಮಾತನಾಡಿದ್ದಾರೆ. ಆ ಮೂಲಕ ಪರೋಕ್ಷವಾಗಿ ತಾವು ಕಾಲೇಜಿನ ದಿನಗಳಲ್ಲಿ ಹುಡುಗಿಯೊಬ್ಬಳನ್ನು ಇಷ್ಟಪಟ್ಟಿರುವುದನ್ನು ತಿಳಿಸಿದ್ದಾರೆ. ಬಳಿಕ ಅಂತರ್ಜಾತಿ…