Author: by Admin

Welcome to ISM Kannada News, if you want to contact us, then feel free to say anything about www.ismkannadanews.com

ಬಾಗೇಪಲ್ಲಿ: ಪತ್ರಿಕಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರ ಕುಟುಂಬಗಳಿಗೆ ಭದ್ರತೆ, ಉಚಿತ ಆರೋಗ್ಯ ಮತ್ತು ಶಿಕ್ಷಣ ಇತ್ಯಾಧಿ ಸೌಲಭ್ಯಗಳನ್ನು ಒದಗಿಸುವಂತೆ  ತಾಲೂಕು ಕಾರ್ಯಮಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಪಿ.ಮಂಜುನಾಥರೆಡ್ಡಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ಪಟ್ಟಣದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ  ಪತ್ರಕರ್ತರ  ಸಂಘದ ಸದಸ್ಯರಿಗೆ ಶೈಕ್ಷಣಿಕ ಮತ್ತು ಆರೋಗ್ಯಕ್ಕಾಗಿ ಆರ್ಥಿಕ ನೆರವು ಹಾಗೂ ಜೀವ ವಿಮೆ ಪಾಲಿಸಿ ಬಾಂಡ್ ವಿತರಿಸಿ ಮಾತನಾಡಿ, ಮಾಧ್ಯಮ ರಂಗವನ್ನು ನಾಲ್ಕನೇ ಅಂಗ ಎಂಬುದು ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ. ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುವ ಪತ್ರಕರ್ತರಿಗೆ ಹಾಗೂ ಪತ್ರಿಕೆ ವಿತರಿಕರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. Get the Best Price at IndiaMART for click this link : ಇಲ್ಲಿ ಕ್ಲಿಕ್ ಮಾಡಿ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪತ್ರಕರ್ತರಿಗೆ ಸೂಕ್ತ ಭದ್ರತೆ ಇಲ್ಲ,  ಪತ್ರಿಕಾ ಕ್ಷೇಮಾಭಿವೃದ್ದಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ತಂದಿದೆಯಾದರು ಅದು ಅನುಷ್ಠಾನಕ್ಕೆ ಬಂದಿಲ್ಲ, ನಮ್ಮನ್ನಾಳುವ ಯಾವುದೇ ಸರ್ಕಾರಗಳು ಪತ್ರಕರ್ತರ ಭದ್ರತೆ ಹಾಗೂ…

Read More

ಗುಡಿಬಂಡೆ: ತಾವು ನೀಡುವಂತಹ ಒಂದು ಯೂನಿಟ್ ರಕ್ತದಿಂದ ಪ್ರಾಣ ಕಳೆದುಕೊಳ್ಳುವ ಹಂತದಲ್ಲಿರುವ ಜೀವ ಉಳಿಸಬಹುದಾಗಿದ್ದು, ಆರೋಗ್ಯವಂತ ಯುವಜನತೆ ರಕ್ತದಾನಕ್ಕೆ ಮುಂದಾಗಬೇಕೆಂದು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪ್ರದೀಪ್ ತಿಳಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತೀಯ ರೆಡ್ ಕ್ರಾಸ್, ಸಾರ್ವಜನಿಕ ಆಸ್ಪತ್ರೆ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಉರ್ದು ಸಾಹಿತ್ಯ ಪರಿಷತ್, ಜಿಲ್ಲಾ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವೈದ್ಯರ ದಿನಾಚರಣೆ ಹಾಗೂ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ರಕ್ತದಾನವು ಮಹಾದಾನವಾಗಿದ್ದು ಅರ್ಹರು ರಕ್ತವನ್ನು ದಾನ ಮಾಡುವುದರ ಮೂಲಕ ಇನ್ನೊಂದು ಜೀವವನ್ನು ಉಳಿಸಲು ಮುಂದಾಗಬೇಕಾಗಿದೆ. ರಕ್ತವನ್ನು ರೋಗಿಗಳಿಗೆ ಮತ್ತು ಅಪಘಾತಕ್ಕೆ ಈಡಾದವರಿಗೆ ದಾನ ಮಾಡಲು ಮುಂದೆ ಬಂದಲ್ಲಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದಂತಾಗುತ್ತದೆ  ರಕ್ತದಾನವು ಮಹಾದಾನವಾಗಿದ್ದು ಅರ್ಹರು ರಕ್ತವನ್ನು ದಾನ ಮಾಡುವುದರ ಮೂಲಕ ಇನ್ನೊಂದು ಜೀವವನ್ನು ಉಳಿಸಲು ಮುಂದಾಗಬೇಕಾಗಿದೆ. ರಕ್ತವನ್ನು ರೋಗಿಗಳಿಗೆ ಮತ್ತು ಅಪಘಾತಕ್ಕೆ ಈಡಾದವರಿಗೆ ದಾನ…

Read More

ಗುಡಿಬಂಡೆ ತಾಲ್ಲೂಕಿನ ಸೋಮೇನಹಳ್ಳಿ ಹೋಬಳಿ ಪೆಮ್ಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪಿ.ಮಾರಪ್ಪರೆಡ್ಡಿ, ಹಾಗೂ ಉಪಾಧ್ಯಕ್ಷರಾಗಿ ಕೆ. ವೆಂಕಟರಮಣಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ತಾಲೂಕಿನ ತಿರುಮಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪೆಮ್ಮನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸೊಸೈಟಿಯ ನಿರ್ದೇಶಕರ ಆಯ್ಕೆಗಾಗಿ ಜೂ. 23 ರಂದು ನಡೆದಿದ್ದ ಚುನಾವಣೆಯಲ್ಲಿ12 ಜನ ನಿರ್ದೇಶಕರು ಚುನಾವಣೆಯ ಮೂಲಕ ಆಯ್ಕೆಯಾಗಿದ್ದು, ಜು.1 ರಂದು ನಿಗದಿಯಾಗಿದ್ದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪಿ. ಮಾರಪ್ಪರೆಡ್ಡಿ ಮಾತನಾಡಿ ಡೈರಿ ಅಭಿವೃದ್ಧಿಗೆ ಎಲ್ಲಾ ನಿರ್ದೇಶಕರ ಸಹಕಾರದಿಂದ ಮತ್ತಷ್ಟು ಅಭಿವೃದ್ಧಿ ಮಾಡುತ್ತೇನೆ , ಒಕ್ಕೂಟದಿಂದ ಬರುವ ಎಲ್ಲಾ ಸವಲತ್ತುಗಳನ್ನು ಸಂಘದ ಎಲ್ಲಾ ಹಾಲು ಉತ್ಪಾದಕರಿಗೆ ತಲುಪಿಸುವ ಕೆಲಸವನ್ನು ನಿರ್ದೇಶಕರೆಲ್ಲರೂ ಸೇರಿ ಮಾಡುತ್ತೇವೆಂದು ತಿಳಿಸಿದರು. ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ. ಹೈನುಗಾರರ ಶ್ರೇಯೋಭಿವೃಧ್ಧಿಗೆ ದುಡಿಯುತ್ತೇನೆ. ಮುಂದಿನ ಐದು ವರ್ಷ ಹೈನುಗಾರರಿಗೆ ತಲುಪಬೇಕಾದ ಸೌಲಭ್ಯಗಳನ್ನು…

Read More

ಬಹುತೇಕ ಗೃಹಿಣಿ ಸೇರಿದಂತೆ ಅನೇಕ ಮಹಿಳೆಯರಿಗೆ ಟಿ.ವಿ. ಸೀರಿಯಲ್ ಗಳೆಂದರೇ ತುಂಬಾನೆ ಇಷ್ಟ. ಕೆಲವರು ಧಾರವಾಹಿ ನೋಡುತ್ತಾ ಪ್ರಪಂಚವನ್ನೆ ಮರೆತಿರುತ್ತಾರೆ. ಅಷ್ಟೊಂದು ಇಷ್ಟಪಟ್ಟು ಸೀರಿಯಲ್ ಗಳನ್ನುನೋಡುತ್ತಾರೆ. ಆದರೆ ಬುಸ್ ಬುಸ್ ನಾಗಪ್ಪನಿಗೂ ಸೀರಿಯಲ್ ಗಳ ಮೇಲೆ ಮನಸ್ಸಾಗಿದೆಯಂತೆ. ಮನೆಯೊಂದಕ್ಕೆ ನುಗ್ಗಿದ ಹಾವು ಸುಮಾರು ಎರಡು ಗಂಟೆಯ ಕಾಲ ಅಲ್ಲಾಡದೇ ಸೀರಿಯಲ್ ನೋಡಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿದೆ. ಜೊತೆಗೆ ವಿವಿಧ ಕಾಮೆಂಟ್ ಗಳು ಹರಿದುಬರುತ್ತಿವೆ. watch video: https://www.instagram.com/p/C8t2LcbyXHM/ ಕೆಲ ಮಹಿಳೆಯರಿಗೆ ಸೀರಿಯಲ್ ಗಳೆಂದರೇ ಪಂಚಪ್ರಾಣ, ಸೀರಿಯಲ್ ಗಳಿಂದಲೇ ಕೆಲ ಕುಟುಂಬಗಳಲ್ಲಿ ಜಗಳಗಳು ಸಹ ನಡೆದಿವೆ. ಕೆಲ ಮಹಿಳೆಯರು ಧಾರವಾಹಿ ನೋಡಲು ಶುರು ಮಾಡಿದ್ರೆ ಪ್ರಳಯ ಆದರೈ ಸಹ ಗೊತ್ತಾಗೋದೆ ಇಲ್ಲ. ಅಷ್ಟೊಂದು ಇಷ್ಟವಾಗಿ ಸೀರಿಯಲ್ ಗಳನ್ನು ನೋಡುತ್ತಿರುತ್ತಾರೆ. ಮನೆಯೊಂದಕ್ಕೆ ನುಗ್ಗಿದ ಬುಸ್ ಬುಸ್ ನಾಗಪ್ಪ ಸತತ ಎರಡು ಗಂಟೆಗಳ ಕಾಲ ಅಲ್ಲಾಡದೇ ಸೀರಿಯಲ್ ವೀಕ್ಷಣೆ ಮಾಡಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೀರಿಯಲ್ ಅನ್ನು…

Read More

ಬಿಗ್ ಬಾಸ್ ಸೀಸನ್ 10 ರ ಸ್ಪರ್ಧಿ ನಟ ರಕ್ಷಕ್ ಬುಲೆಟ್ ಆಗಾಗ ಸುದ್ದಿಯಾಗುತ್ತಿರುವ ನಟ ಎಂದೇ ಹೇಳಬಹುದು. ಸಾಕಷ್ಟು ಬಾರಿ ಅವರು ಸತ್ಯಕ್ಕೆ ದೂರವಾದ ಮಾತನ್ನು ಹೇಳುವ ಮೂಲಕ ಚರ್ಚೆಗೆ ಗುರಿಯಾಗುತ್ತಾರೆ. ಅದರ ಜೊತೆಗೆ ಬಿಲ್ಡಪ್ ಹೆಚ್ಚಾಗಿಯೇ ತೋರಿಸುತ್ತಾರೆ. ಈ ಕಾರಣದಿಂದ ಅನೇಕ ಬಾರಿ ಅವರು ಟ್ರೋಲ್ ಸಹ ಆಗಿದ್ದಾರೆ. ಇದೀಗ ರಕ್ಷಕ್ ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದ ಹಾಸ್ಯ ನಟ ದಿವಂಗತ ಬುಲೆಟ್ ಪ್ರಕಾಶ್ ರವರ ಪುತ್ರ ರಕ್ಷಕ್ ಬುಲೆಟ್ ಕನ್ನಡದ ಬಿಗ್ ಬಾಸ್ ಸೀಸನ್ 10 ರ ಮೂಲಕ ಸುದ್ದಿಯಾದರು. ಈ ಸೀಸನ್ ಬಳಿಕ ರಕ್ಷಕ್ ಕ್ರೇಜ್ ಕೊಂಚ ಹೆಚ್ಚಾಯ್ತು ಎಂದೇ ಹೇಳಬಹುದು. ಇನ್ನೂ ರಕ್ಷಕ್ ಟ್ರೋಲ್ ಗಳ ಮೂಲಕವೇ ಹೆಚ್ಚು ಫೇಮಸ್ ಆದರು ಎಂದು ಹೇಳಬಹುದಾಗಿದೆ. ಅವರು ಕೊಡುವಂತಹ ಬಿಲ್ಡಪ್ ಕಾರಣದಿಂದ ಹೆಚ್ಚು ಟ್ರೋಲ್ ಆದರು ಎಂದೇ ಹೇಳಬಹುದು. ಆದರೆ…

Read More

ರಾಜ್ಯದಲ್ಲಿ ಇತ್ತೀಚಿಗೆ ಕೇಳಿಬಂದ ವಾಲ್ಮೀಕಿ ನಿಗಮದ ಕೋಟಿ ಹಗರಣ ಭಾರಿ ಸದ್ದು ಮಾಡುತ್ತಿದೆ. ಜೊತೆಗೆ ಮೈಸೂರು ಮುಡಾದಲ್ಲಿ ಸಹ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಸಿಎಂ ಹಾಗೂ ಡಿಸಿಎಂ ಹುದ್ದೆಗಳ ಬಗ್ಗೆ ರಾಜಕೀಯ ಚರ್ಚೆ ಸಹ ಜೋರಾಗಿದೆ. ವಾಲ್ಮೀಕಿ ಹಾಗೂ ಮೈಸೂರು ಮುಡಾದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣ ಮುಚ್ಚಿಹಾಕಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‍ ರಾಜಕೀಯ ನಾಟಕವಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದಾರೆ. ಕರ್ನಾಟಕ ವಾಲ್ಮೀಕಿ ನಿಗಮದ ಕೋಟ್ಯಂತರ ಹಗರಣ ಹಾಗೂ ಮೈಸೂರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಮೈಸೂರು ಮುಡಾದಲ್ಲಿ ಬೇಲಿಯೇ ಎದ್ದು ಹೊಲ ಮೇದಂತಾಗಿದೆ. ಸಿಎಂ ಮೂಗಿನಡಿ ಸಾವಿರಾರು ಕೋಟಿ ಬೆಲೆ ಬಾಳುವ ಮುಡಾ ಆಸ್ತಿ ಕಳ್ಳರ ಪಾಲಾಗಿದೆ. ಆದರೆ ಈ ಪ್ರಕರಣಗಳ ಹಾದಿಯನ್ನು ತಪ್ಪಿಸಲು ಹಾಗೂ ಜನರ ದಿಕ್ಕು ಬದಲಿಸಲು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‍ ರಾಜಕೀಯ ನಾಟಕವಾಡುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ದಿ ನಿಗಮದ ಹಣ ಎಲ್ಲೆಲ್ಲಿ ಹೋಗಿದೆ ಎಂಬ ಮಾಹಿತಿಯನ್ನು…

Read More

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‍ ಹಾಗೂ ಸಂಸದ ಡಾ.ಕೆ.ಸುಧಾಕರ್‍ ನಡುವೆ ಆಗಾಗ ವಾಕ್ಸಮರ ನಡೆಯುತ್ತಿರುತ್ತದೆ. ಇದೀಗ ನೀಟ್ ಪರೀಕ್ಷೆಯ ಬಗ್ಗೆ ಡಾ.ಸುಧಾಕರ್‍ ರವರಿಗೆ ಟಾಂಗ್ ಕೊಟ್ಟಿದ್ದಾರೆ. ನೀಟ್ ಪರೀಕ್ಷೆಯ ಬಗ್ಗೆ ಸಂಸದ ಡಾ.ಕೆ.ಸುಧಾಕರ್‍ ರವರಿಗೆ ಕನಿಷ್ಟ ಜ್ಞಾನವೂ ಇಲ್ಲ ಎಂದು ಗೇಲಿ ಮಾಡಿದ್ದಾರೆ. ನೀಟ್ ಪರೀಕ್ಷೆ ಕುರಿತಂತೆ ಡಾ.ಕೆ.ಸುಧಾಕರ್‍ ರವರ ಹೇಳಿಕೆಯನ್ನು ಶಾಸಕ ಪ್ರದೀಪ್ ಈಶ್ವರ್‍ ಟಾಂಗ್ ಕೊಟ್ಟಿದ್ದಾರೆ. ನೀಟ್ ಎಕ್ಸಾಮ್ ಅನ್ನೋದು ಸೆಂಟ್ರಲ್ ಏಜೆನ್ಸಿ ನಡೆಸುತ್ತದೆ. ಅದನ್ನು ಸಚಿವ ಎಂ.ಸಿ.ಸುಧಾಕರ್‍ ನಡೆಸೊಲ್ಲ ಎಂಬ ವಿಚಾರ ಸಂಸದರಿಗೆ ಗೊತ್ತಿರಬೇಕು. ನೀಟ್ ಪರೀಕ್ಷೆಯನ್ನು ಇಲಾಖೆ ಸರಿಯಾಗಿ ನಡೆಸುತ್ತಿಲ್ಲ ಎಂದು ಸಂಸದ ಡಾ.ಕೆ.ಸುಧಾಕರ್‍ ರವರು ಆರೋಪ ಮಾಡಿದ್ದರು. ಈ ಆರೋಪಕ್ಕೆ ಶಾಸಕ ಪ್ರದೀಪ್ ಈಶ್ವರ್‍ ರಿಯಾಕ್ಟ್ ಆಗಿದ್ದಾರೆ. ಅವರು ರಾಕಿಂಗ್ ಕೊಟ್ಟು ರಾಜ್ಯ ಸರ್ಕಾರಕ್ಕೆ ಕೊಟ್ಟರೆ ಸೀಟ್ ಅಲಾಟ್ಮೆಂಟ್ ಅಷ್ಟೆ ಎಂ.ಸಿ.ಸುಧಾಕರ್‍ ಗೆ ಬರೋದು. ಈ ಕನಿಷ್ಟ ಜ್ಞಾನ ಸಹ ಸಂಸದರಿಗಿಲ್ಲ. ಸೋಲು ಅನ್ನೋದು ಓದುವ ಅಭ್ಯಾಸ ಕಡಿಮೆ ಮಾಡುತ್ತದೆ. ಸಂಸದರು ಓದೋದು ನಿಲ್ಲಿಸಿ…

Read More

ಬಾಗೇಪಲ್ಲಿ:  ಸರ್ಕಾರಿ ನೌಕರರಿಗೆ ಸರ್ಕಾರದಿಂದ ಸಿಗಬೇಕಾದ ನ್ಯಾಯಯುತ ಸೌಲಭ್ಯಗಳನ್ನು ಹಾಗೂ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂಧಿಸಿ ಸಮಸ್ಯೆಗಳನ್ನು ಬಗೆಹರಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಮಹದೇವಯ್ಯ ಮಠಪತಿ ತಿಳಿಸಿದರು. ಪಟ್ಟಣದ ವಿಕಾಸ್  ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಅಖಿಲ ಕರ್ನಾಟಕ ಸರ್ಕಾರಿ ನೌಕರ ಒಕ್ಕೂಟದ ತಾಲೂಕು ಸಮಾವೇಶದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು  5 ವರ್ಷಗಳಿಗೆ ಒಮ್ಮೆ ರಚನೆಯಾಗುತ್ತಿದ್ದ  ವೇತನ ಆಯೋಗವು  ಸಕಾಲದಲ್ಲಿ ರಚನೆಯಾಗದಿದ್ದಾಗ, ಹಾರ್ನಳ್ಳಿ ರಾಮಸ್ವಾಮಿ ಆಓಗದ ಶಿಫಾರಸ್ಸಿನಂತೆ  ಸರ್ಕಾರದಲ್ಲಿ ಲಕ್ಷಾಂತಾರ ಹುದ್ದೆಗಳು ಕಡಿತವಾದಾಗ ರಾಷ್ಟ್ರಮಟ್ಟದ ಕರೆಗಳನ್ನು  ರಾಜ್ಯದಲ್ಲಿ ಅನುಷ್ಠಾನಗೊಳಿಸದೆ  ವಿಫಲವಾದಾಗ ಕೇಂದ್ರ ಸರ್ಕಾರಿ ನೌಕರರಿಗೆ ಸಿಗುತ್ತಿದ್ದ ಅನೇಕ ಸೌಲಭ್ಯಗಳಿಂದ ರಾಜ್ಯ ಸಕಾರಿ ನೌಕರರು ವಂಚಿತಾಗುತ್ತಿದ್ದರು ಇಂತಹ ಸಂದರ್ಭದಲ್ಲಿ ಸರ್ಕಾರಿ ನೌಕರರ  ಹಿತಕ್ಕಾಗಿ  ರಾಜ್ಯದ ಸರ್ಕಾರಿ ನೌಕರರ ಪ್ರತಿನಿಧಿಯಾಗಿ  ಉಗಮಗೊಂಡಿದ್ದೇ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಎಂದರು. ರಾಜ್ಯ ಘಟಕದ ಅಧ್ಯಕ್ಷರಾದ ಎಚ್.ಎಸ್. ಜಯಕುಮಾರ್ ಮಾತನಾಡಿ, ಪಿಂಚಣಿ ಸರ್ಕಾರಿ…

Read More

ರೇಣುಕಾಸ್ವಾಮಿ ಕೊಲೆ ಪ್ರಕರಣದ ನಿಮಿತ್ತ ಸ್ಟಾರ್‍ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳು ಜೈಲಿನಲ್ಲಿದ್ದಾರೆ. ಕನ್ನಡದ ನಟ ದರ್ಶನ್ ಕೊಲೆ ಪ್ರಕರಣದಡಿ ಜೈಲಿನಲ್ಲಿರುವುದು ಅವರ ಆಪ್ತರಿಗೆ ಬೇಸರದ ವಿಚಾರವಾಗಿದೆ. ಈಗಾಗಲೇ ಕೆಲ ನಟ-ನಟಿಯರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ ದರ್ಶನ್ ರನ್ನು ಭೇಟಿಯಾಗಿ ಬರುತ್ತಿದ್ದಾರೆ. ಇದೀಗ ಸ್ಯಾಂಡಲ್ ವುಡ್ ನ ಹಿರಿಯ ನಟ ಶಿವರಾಜ್ ಕುಮಾರ್‍ ಸಹ ದರ್ಶನ್ ಪ್ರಕರಣದ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಕನ್ನಡ ಸಿನಿರಂಗದ ಹಿರಿಯ ನಟ ಶಿವರಾಜ್ ಕುಮಾರ್‍ ಎಲ್ಲರ ಕಲಾವಿದರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ನಿರ್ಮಾಪಕರ ಸಂಘದ ಹೊಸ ಕಟ್ಟಡದ ಉದ್ಘಾಟನೆಯ ಕಾರ್ಯಕ್ರಮದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡುತ್ತಾ ದರ್ಶನ್ ಪ್ರಕರಣದ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ಇಂತಹ ಘಟನೆಗಳು ಆಗುತ್ತವೆ, ಏನು ಮಾಡೋಕೆ ಆಗೊಲ್ಲ. ಹಣೆಬರಹ ಅನ್ನೊಂದು ಒಂದು ಇರುತ್ತದೆ. ಆ ವಿಚಾರ ಬಂದಾಗ ನಾವು ಏನನ್ನೂ ಮಾಡೋಕೆ ಆಗೊಲ್ಲ. ಆದರೆ ಮಾತನಾಡೋಕೆ ಹೋದರೂ, ನಾವು ಮಾಡುತ್ತರಿಉವುದು ಸರಿಯಾಗಿದೆಯಾ ಎಂಬುದನ್ನು ಮೊದಲು ಯೋಚಿಸಬೇಕು.…

Read More

ಬಾರ್ಬಡೋಸ್​ನಲ್ಲಿ ನಡೆದ ರಣರೋಚಕ ಟಿ20 ವಿಶ್ವಕಪ್ ಫೈನಲ್ (T20 World Cup 2024) ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸಿ ಟೀಮ್ ಇಂಡಿಯಾ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ. ಈ ಮೂಲಕ 17 ವರ್ಷಗಳ ಬಳಿಕ ಭಾರತ ತಂಡವು 2ನೇ ಬಾರಿಗೆ ಟಿ20 ವಿಶ್ವಕಪ್​ ಅನ್ನು ಎತ್ತಿ ಹಿಡಿದಿದೆ. ಈ ಸಂಭ್ರಮವನ್ನು ಇಡೀ ಭಾರತ ಸಂಭ್ರಮಿಸುತ್ತಿದೆ. ಈ ಸಂತೋಷವನ್ನು ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ತನ್ನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಹಂಚಿಕೊಂಡಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಶನಿವಾರ ಬಾರ್ಬಡೋಸ್ ನಲ್ಲಿರುವ ಬ್ರಿಡ್ಜ್ ಟೌನ್ ನಲ್ಲಿರುವ ಕೆನ್ಸಿಂಗ್ವನ್ ಓವಲ್ ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ದ ಟೀಂ ಇಂಡಿಯಾ ಫೈನಲ್ ಮ್ಯಾಚ್ ಆಡಿತ್ತು. ಈ ಪಂದ್ಯ ರಣರೋಚಕವಾಗಿದ್ದು, ದಕ್ಷಿಣ ಆಫ್ರಿಕಾವನ್ನು ಟಿಂ ಇಂಡಿಯಾ ಸೋಲಿಸಿತು. ಗೆಲುವಿನ ಬಳಿಕ ವಿರಾಟ್ ಕೊಹ್ಲಿ ತಮ್ಮ ಆಟಗಾರರನ್ನು ಅಭಿನಂದಿಸುತ್ತಾ ಭಾವುಕರಾದರು. ನಂತರ ಮೈದಾನದಿಂದಲೇ ತಮ್ಮ ಪತ್ನಿ ಅನುಷ್ಕಾ ಶರ್ಮಾ…

Read More