ಟ್ಯಾವೆಲ್ ಬ್ಯಾಗ್ ನಲ್ಲಿ ಕಾನೂನು ಬಾಹಿರವಾಗಿ ಮಾಡುತ್ತಿರುವ ಇಬ್ಬರ ಆರೋಪಿಗಳನ್ನು ಗಾಂಜಾ ಸಮೇತ ಬಂಧನ ಮಾಡಿರುವ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪೊಲೀಸರು ಗಾಂಜಾ ಸಾಗಾಟ ಮಾಡುತ್ತಿರುವ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳ ವಿರುದ್ದ ಕಾನೂನು ರೀತ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ ಭಾನುವಾರ ಮದ್ಯಾಹ್ನ 12 ಗಂಟೆ ಸಮಯದಲ್ಲಿ ಬಾಗೇಪಲ್ಲಿ ಪೊಲೀಸರು ಪಟ್ಟಣದ ಸಮೀಪದ ರಾಷ್ಟ್ರೀಯ ಹೆದ್ದಾರಿ 44 ಟೋಲ್ ಫ್ಲಾಜಾ ಬಳಿ ರಾತ್ರಿ ಗಸ್ತಿನಲ್ಲಿದ್ದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಆರ್.ಟಿ.ಓ ಕಚೇರಿ ಕಡೆಯಿಂದ ಟ್ರಾವೆಲ್ ಬ್ಯಾಗ್ ಹಿಡಿದುಕೊಂಡು ಟೋಲ್ ಫ್ಲಾಜಾ ಕಡೆಗೆ ನಡೆದುಕೊಂಡು ಬರುತ್ತಿದ್ದ ಇಬ್ಬರು ಅಸಾಮಿಗಳು ಪೊಲೀಸರನ್ನು ಕಂಡು ಪರಾರಿಯಾಗಲು ಪ್ರಯತ್ನ ಮಾಡಿದ್ದರು. ಅನುಮಾನಗೊಂಡ ಪೊಲೀಸರು ಆರೋಪಿಗಳನ್ನು ಹಿಂಬಾಲಿಸಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಟ್ರಾವೆಲ್ ಬ್ಯಾಗ್ ನಲ್ಲಿ ಸುಮಾರು 20 ಕೆಜಿ 250 ಗ್ರಾಂ ನಷ್ಟು ಗಾಂಜಾ ಪತ್ತೆಯಾಗಿದೆ.

ಸಾಂಧರ್ಬಿಕ ಚಿತ್ರ
ಇನ್ನೂ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಚಿಕ್ಕಬಳ್ಳಾಪುರ ಪಟ್ಟಣದ ಕಂದವಾರ ಪೇಟೆಯ ವೇಣುಗೋಪಾಲ್ ಬಿನ್ ಕೆ.ಸಿ.ತುಳಸಿರಾಮ್ (25), 15ನೇ ವಾರ್ಡಿನ ಅಕ್ಷಯ್ ಕುಮಾರ್ ಬಿನ್ ವೆಂಕಟೇಶ್ (27) ಎಂದು ಗುರ್ತಿಸಲಾಗಿದೆ. ಈ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಚಿಕ್ಕಬಳ್ಳಾಪುರದ ಅಜ್ಮತ್ ಎಂಬಾತ ಆಂದ್ರಪ್ರದೇಶದ ವಿಶಾಕಪಟ್ಟಣಂ ನಿಂದ ಮಾಲ್ ತೆಗೆದುಕೊಂಡು ಬರುವಂತೆ ತಿಳಿಸಿದ್ದರಂತೆ. ಅದರಂತೆ ನಾವು ತೆಗೆದುಕೊಂಡು ಹೋಗುತ್ತಿರುವುದಾಗಿ ವಿಚಾರಣೆಯ ಸಮಯದಲ್ಲಿ ಆರೋಪಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.