ಕೇಂದ್ರ ರೇಷ್ಮೆ ಮಂಡಳಿ (Central Silk Board – CSB) 2026ರಲ್ಲಿ 82 ರೇಷ್ಮೆ ಸಹಾಯಕ (Sericulture Assistant) ಹುದ್ದೆಗಳನ್ನು ಭರ್ತಿ ಮಾಡಲು (Apply Now) ಅಧಿಸೂಚನೆ ಹೊರಡಿಸಿದೆ. ಇದು ಕಾಂಟ್ರಾಕ್ಟ್ ಆಧಾರದ ಮೇಲಿನ ನೇಮಕಾತಿ ಆಗಿದ್ದು, ಅಖಿಲ ಭಾರತದ ವಿವಿಧ ಕೇಂದ್ರಗಳಲ್ಲಿ ಕೆಲಸ ಮಾಡುವ ಅವಕಾಶವಿದೆ. ಇನ್ನೊಂದು ವಿಶೇಷತೆ ಏನೆಂದರೆ – ಅರ್ಜಿ ಶುಲ್ಕ ಯಾವುದೂ ಇಲ್ಲ! ಹೌದು, ಯಾವುದೇ ಫೀಸ್ ಇಲ್ಲದೆ ನೀವು ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ.

Apply Now – ಹುದ್ದೆಯ ವಿವರಗಳು
- ಸಂಸ್ಥೆ: ಕೇಂದ್ರ ರೇಷ್ಮೆ ಮಂಡಳಿ (Central Silk Board – CSB)
- ಹುದ್ದೆ ಹೆಸರು: ರೇಷ್ಮೆ ಸಹಾಯಕ (Sericulture Assistant)
- ಒಟ್ಟು ಖಾಲಿ ಹುದ್ದೆಗಳು: 82
- ಉದ್ಯೋಗ ಸ್ಥಳ: ಅಖಿಲ ಭಾರತದ ವಿವಿಧ ಕೇಂದ್ರಗಳು
- ನೇಮಕಾತಿ ಪ್ರಕಾರ: ಕಾಂಟ್ರಾಕ್ಟ್ ಆಧಾರಿತ (ಒಂದು ವರ್ಷದ ಅವಧಿ)
ಶೈಕ್ಷಣಿಕ ಅರ್ಹತೆ
ಈ ಹುದ್ದೆಗೆ ಅರ್ಜಿ ಸಲ್ಲಿಸಲು ನೀವು ಡಿಪ್ಲೊಮಾ, ಪದವಿ (Degree), BE/B.Tech ಅಥವಾ ಪಿಜಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ರೇಷ್ಮೆ ಅಥವಾ ಸಂಬಂಧಿತ ಕ್ಷೇತ್ರದಲ್ಲಿ (Apply Now) ಅಧ್ಯಯನ ಮಾಡಿದವರಿಗೆ ಆದ್ಯತೆ ಇರಬಹುದು (ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಿ).
ವಯಸ್ಸಿನ ಮಿತಿ:
ಅರ್ಜಿ ಸಲ್ಲಿಸುವ ಸಮಯದಲ್ಲಿ ಅಭ್ಯರ್ಥಿಯ ಗರಿಷ್ಠ ವಯಸ್ಸು 35 ವರ್ಷ ಮೀರಿರಬಾರದು. ವಯಸ್ಸಿನ ಸಡಿಲಿಕೆಯು ಸರ್ಕಾರಿ ನಿಯಮಗಳ ಪ್ರಕಾರ SC/ST/OBC/PWD ಅಭ್ಯರ್ಥಿಗಳಿಗೆ ಲಭ್ಯವಿದೆ. Read this also : ಬೆಂಗಳೂರಿನಲ್ಲಿ ಬಂಪರ್ ಉದ್ಯೋಗಾವಕಾಶ! 78 ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಆಯ್ಕೆ ವಿಧಾನ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ (Apply Now) ಮತ್ತು ಸಂದರ್ಶನ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ. ವೇತನ ಎಷ್ಟು? : ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹21,000 ವೇತನ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ? (ಸರಳ ಹಂತಗಳು)
- CSB ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: https://csb.gov.in/
- ಅಧಿಸೂಚನೆ ಪೂರ್ತಿಯಾಗಿ ಓದಿ (Advt. No. CSB/Estt./02/2026).
- ಅರ್ಜಿ ಲಿಂಕ್ ಮೂಲಕ (Apply Now) ಆನ್ಲೈನ್ ಅರ್ಜಿ ಭರ್ತಿ ಮಾಡಿ: https://csb-hiring.in
- ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
- ಅಗತ್ಯ ದಾಖಲೆಗಳು (ಐಡಿ ಪ್ರೂಫ್, ಶೈಕ್ಷಣಿಕ ಪ್ರಮಾಣಪತ್ರಗಳು, ರೆಸ್ಯೂಮ್, ಫೋಟೋ) ಸ್ಕ್ಯಾನ್ ಮಾಡಿ ಸಿದ್ಧವಾಗಿರಿಸಿ.
- ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿ.
- ಅರ್ಜಿ ಸಲ್ಲಿಸಿದ ನಂತರ ಬರುವ ಅರ್ಜಿ ಸಂಖ್ಯೆ (Application Number) ಅನ್ನು ಪ್ರಿಂಟ್ ತೆಗೆದುಕೊಳ್ಳಿ ಅಥವಾ ಸೇವ್ ಮಾಡಿ – ಭವಿಷ್ಯದಲ್ಲಿ ಉಪಯೋಗಕ್ಕೆ ಬರುತ್ತದೆ.
ಗಮನಿಸಿ: ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ PDF ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ ಪೂರ್ತಿ ಓದುವುದು ತುಂಬಾ ಮುಖ್ಯ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ: 12 ಮಾರ್ಚ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13 ಏಪ್ರಿಲ್ 2026
ಕೊನೆಯ ದಿನದವರೆಗೂ (Apply Now) ಕಾಯದೆ ಈಗಲೇ ಅರ್ಜಿ ಸಲ್ಲಿಸಿ. ಇದು ಕೇಂದ್ರ ಸರ್ಕಾರದ ಅಡಿಯಲ್ಲಿ ರೇಷ್ಮೆ ಕ್ಷೇತ್ರದಲ್ಲಿ ಕೆಲಸ ಮಾಡುವ ಉತ್ತಮ ಅವಕಾಶವಾಗಿದೆ.
ಪ್ರಮುಖ ಲಿಂಕ್ಗಳು:
| ಅಪ್ಲೇ ಆನ್ಲೈನ್ | Click Here |
| ಅಧಿಕೃತ ವೆಬ್ಸೈಟ್ | Click Here |

