ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ನಮ್ಮ ಕೆಲಸ ಮುಗಿಸಿ ಮನೆ ಸೇರಲು ಆತುರಪಡುತ್ತೇವೆ. ಆದರೆ ಆಂಧ್ರಪ್ರದೇಶದ ಈ ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್ ಮಾತ್ರ ಸಾರ್ವಜನಿಕ ಸೇವೆಗೆ ಸಮಯ, ಸಂದರ್ಭ ಯಾವುದೂ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೈಯಲ್ಲಿ ಪುಟ್ಟ (Woman Police) ಮಗುವನ್ನು ಹಿಡಿದು ಟ್ರಾಫಿಕ್ ಕ್ಲಿಯರ್ ಮಾಡಿದ ಇವರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಜನರ ಹೃದಯ ಗೆದ್ದಿದೆ.

Woman Police – ಯಾರು ಈ ‘ರಿಯಲ್ ಹೀರೋ’?
ಈ ಅದ್ಭುತ ಕಾರ್ಯ ಮಾಡಿ ಸುದ್ದಿಯಲ್ಲಿರುವವರು ಅಮೂದಲ ಜಯಶಾಂತಿ. ಇವರು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಂಗಂಪೇಟೆ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಅವರು ತೋರಿದ ಸಮಯಪ್ರಜ್ಞೆ ಈಗ ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗಿದೆ.
ಅಂದು ನಡೆದಿದ್ದೇನು?
ಕಳೆದ ಶನಿವಾರ ಸಂಕ್ರಾಂತಿ ಹಬ್ಬದ ಸಂಭ್ರಮವಿದ್ದಿದ್ದರಿಂದ ರಸ್ತೆಗಳೆಲ್ಲ ಜನಜಂಗುಳಿಯಿಂದ ಕೂಡಿದ್ದವು. ಜಯಶಾಂತಿ ಅವರು ತಮ್ಮ ಎರಡೂವರೆ ವರ್ಷದ ಪುಟ್ಟ ಮಗುವಿನೊಂದಿಗೆ ಕಾಕಿನಾಡಕ್ಕೆ ತೆರಳುತ್ತಿದ್ದರು. ಸಾಮಲ್‌ಕೋಟ ರೈಲ್ವೆ ನಿಲ್ದಾಣದ ಬಳಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಆ ಸಂದರ್ಭದಲ್ಲಿ ಅವರು ಗಮನಿಸಿದ ದೃಶ್ಯ ಹೃದಯ ಕಲಕುವಂತಿತ್ತು. ರೋಗಿಯೊಬ್ಬರನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್ ಟ್ರಾಫಿಕ್‌ನಲ್ಲಿ ಸಿಲುಕಿತ್ತು. (Woman Police) ಕ್ಷಣ ಕ್ಷಣವೂ ರೋಗಿಗೆ ಮುಖ್ಯವಾಗಿತ್ತು. ಇದನ್ನು ಕಂಡ ಜಯಶಾಂತಿ, ತಾನು ‘ಆಫ್ ಡ್ಯೂಟಿ’ಯಲ್ಲಿದ್ದೇನೆ ಎಂಬ ಸುಮ್ಮನಿರಲಿಲ್ಲ. ಕೂಡಲೇ ಕಾರ್ಯಪ್ರವೃತ್ತರಾದರು. Read this also : ನಿಮಗೆ ಸಲಾಂ ಮೇಡಂ! ಲೇಡಿ ಟ್ರಾಫಿಕ್ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ….!
ಮಗುವನ್ನು ಎತ್ತಿಕೊಂಡೇ ಟ್ರಾಫಿಕ್ ನಿರ್ವಹಣೆ!
ಮೊದಲು ತಮ್ಮ ಮಗುವನ್ನು ಜೊತೆಗಿದ್ದವರ ಕೈಗೆ ನೀಡಿ, ರಸ್ತೆಗೆ ಇಳಿದು ಟ್ರಾಫಿಕ್ ಸರಿಪಡಿಸಲು ಶುರು ಮಾಡಿದರು. ಸುಮಾರು 40 ನಿಮಿಷಗಳ ಕಾಲ ಅವರು ಈ ಕೆಲಸ ಮಾಡಿದರು. ಅಷ್ಟರಲ್ಲಿ ಮಗು ಎಚ್ಚರಗೊಂಡು ಅಳಲು ಪ್ರಾರಂಭಿಸಿತು. ಆಗ ಮಗುವನ್ನು ಮಡಿಲಿಗೆ ಎತ್ತಿಕೊಂಡೇ, ಒಂದು ಕೈಯಲ್ಲಿ ಮಗುವನ್ನು ಹಿಡಿದು ಮತ್ತೊಂದು ಕೈಯಲ್ಲಿ ಟ್ರಾಫಿಕ್ ನಿಯಂತ್ರಿಸುತ್ತಾ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಶ್ಲಾಘನೆ
ಜಯಶಾಂತಿ ಅವರ ಈ ನಿಸ್ವಾರ್ಥ ಸೇವೆಯನ್ನು (Woman Police) ಕಂಡು ಪೂರ್ವ ಗೋದಾವರಿ ಎಸ್‌ಪಿ ಡಿ. ನರಸಿಂಹ ಕಿಶೋರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲಾಖೆಗೆ ಮತ್ತು ಸಮಾಜಕ್ಕೆ ಹೆಮ್ಮೆ ತಂದ ಜಯಶಾಂತಿ ಅವರಿಗೆ ವಿಶೇಷ ಬಹುಮಾನವನ್ನೂ ಘೋಷಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click Here
ನೆಟ್ಟಿಗರ ಪ್ರತಿಕ್ರಿಯೆ
ಸಾಮಾಜಿಕ ಜಾಲತಾಣಗಳಲ್ಲಿ ಜನರು ಇವರನ್ನು ‘ರಿಯಲ್ ಲೈಫ್ ಸೂಪರ್ ವುಮನ್’ (Woman Police) ಎಂದು ಕರೆಯುತ್ತಿದ್ದಾರೆ. “ತಾಯ್ತನ ಮತ್ತು ವೃತ್ತಿಧರ್ಮ ಎರಡನ್ನೂ ಏಕಕಾಲದಲ್ಲಿ ನಿಭಾಯಿಸಿದ ರೀತಿ ಅದ್ಭುತ” ಎಂದು ಕಾಮೆಂಟ್‌ಗಳು ಹರಿದುಬರುತ್ತಿವೆ. ಒಟ್ಟಿನಲ್ಲಿ, ಸಮವಸ್ತ್ರ ಕೇವಲ ಉದ್ಯೋಗವಲ್ಲ, ಅದೊಂದು ಜವಾಬ್ದಾರಿ ಎಂಬುದನ್ನು ಜಯಶಾಂತಿ ಅವರು ಇಡೀ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ.
