Video – ಆಂಧ್ರಪ್ರದೇಶ ದಲ್ಲಿ ಪ್ರಯಾಣಿಕರ ಸೀಟಿಗಾಗಿ ಬಸ್‌ನಲ್ಲಿ ಗಲಾಟೆ ನಡೆದ ವಿಡಿಯೊ ವೈರಲ್ ಆಗಿದೆ. ಮಹಿಳೆಯೊಬ್ಬರು ತನ್ನ ಶಾಲಿನಿಂದ ಸೀಟು ರಿಸರ್ವ್ ಮಾಡಿದ್ದರು, ಆದರೆ ಅಲ್ಲಿ ಬೇರೆ ವ್ಯಕ್ತಿ ಕೂತಿದ್ದರು. ಇದು ಸೀರಿಯಸ್ ಸಮಸ್ಯೆಯಾಗಿ ಪರಿಣಮಿಸಿ ಬಸ್‌ನಲ್ಲೇ ಗಲಾಟೆಯಾಯಿತು. ವೈರಲ್ ಆದ ವಿಡಿಯೊವನ್ನು ನೋಡಿ ನೆಟಿಜನ್‌ಗಳು ಆಶ್ಚರ್ಯ ಪಟ್ಟಿದ್ದಾರೆ.
Video – ಏನಿದು ಘಟನೆ?
ಬಸ್ ಪ್ರಯಾಣದಲ್ಲಿ ಸೀಟಿಗಾಗಿ ಗಲಾಟೆ ಆಗೋದು ಸಹಜ, ಆದರೆ ಇಲ್ಲಿ ಏನಾಯಿತೆಂದರೆ ಮಹಿಳೆಯೊಬ್ಬರು ರಿಸರ್ವ್ ಮಾಡಿದ್ದ ಸೀಟ್‌ನಲ್ಲಿ ಪುರುಷರೊಬ್ಬರು ಕೂತಿದ್ದರು. ರಿಸರ್ವ್ ಮಾಡಿದ್ದೆಂದರೆ ಬಸ್‌ನಲ್ಲಿ ತಮ್ಮ ಶಾಲ್ ಹಾಕಿ ಸೀಟು ಗುರುತು ಮಾಡಿ ಹೋಗಿರುತ್ತಾರೆ. ಅವರು ಅಲ್ಲಿಂದ ವಾಪಸ್ ಬಂದಾಗ, ಅವರ ಸೀಟು ಒಬ್ಬರು ಆಕ್ರಮಿಸಿಕೊಂಡಿದ್ದಾರೆ. Read this also : ದೆಹಲಿ ಮೆಟ್ರೋದಲ್ಲಿ ಸೀಟ್ ಜಗಳ: ಜುಟ್ಟು ಹಿಡಿದುಕೊಂಡು ಕಿತ್ತಾಡಿದ ಮಹಿಳೆಯರು, ವೈರಲ್ ಆದ ವಿಡಿಯೋ….!
ತಮ್ಮ ಸೀಟಿನಲ್ಲಿ ಬೇರೆ ವ್ಯಕ್ತಿ ಕುಳಿತಿರುವುದು ನೋಡಿ ಮಹಿಳೆ ಆ ವ್ಯಕ್ತಿಯ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ‘ನನ್ನ ಸೀಟಿನಲ್ಲಿ ಯಾಕೆ ಕೂತಿದ್ದಿ, ನೀನು ಯಾರು? ನಿನಗೆ ನಾಚಿಕೆಯಿಲ್ಲವೇ?’ ಎಂದು ಕಿರುಚಿದ್ದಾರೆ. ಈ ಘಟನೆಯ ವಿಡಿಯೊ ಆ ಬಸ್‌ನಲ್ಲಿದ್ದ ಇನ್ನೊಬ್ಬರು ಪ್ರಯಾಣಿಕರು ಸೆರೆ ಹಿಡಿದಿದ್ದಾರೆ.
Video – ವ್ಯಕ್ತಿಗೆ ಚಪ್ಪಲಿಯಿಂದ ಹೊಡೆದ ಮಹಿಳೆ
ವಿಡಿಯೊದಲ್ಲಿ ಕಂಡುಬರುವಂತೆ, ಮಹಿಳೆ ಪುರುಷನಿಗೆ ನಿಂದಿಸುತ್ತಾ, ಪದೇ ಪದೇ ಹೊಡೆಯುತ್ತಿರುವುದನ್ನು ಕಾಣಬಹುದು. ಸುತ್ತಲಿನ ಸಹ ಪ್ರಯಾಣಿಕರು ಗಲಾಟೆಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೂ ಕೋಪಗೊಂಡ ಮಹಿಳೆ ಶಾಂತವಾಗಲು ತಯಾರಾಗಿಲ್ಲ. ಕೊನೆಗೆ ಪುರುಷ ಸಹ ತನ್ನ ಚಪ್ಪಲಿ ತೆಗೆದು ತಿರುಗಿ ಹೊಡೆದಿದ್ದಾರೆ. ಇದು ಇಬ್ಬರ ನಡುವೆ ಚಪ್ಪಲಿ ಫೈಟ್‌ಗೆ ಕಾರಣವಾಯಿತು. ನಂತರ ಆ ಪುರುಷ ಆ ಸೀಟಿನಿಂದ ಎದ್ದು ಹೋದರೂ ಕೂಡ ಇಬ್ಬರು ಬೈದಾಡಿಕೊಳ್ಳುವುದನ್ನು ನಿಲ್ಲಿಸಲಿಲ್ಲ.
ವೈರಲ್ ವಿಡಿಯೋ ಲಿಂಕ್: Click Here
Video – ನೆಟಿಜನ್‌ಗಳ ಪ್ರತಿಕ್ರಿಯೆ
ಈ ವಿಡಿಯೊ ವೈರಲ್ ಆದ ಬಳಿಕ ನೆಟಿಜನ್‌ಗಳು ಅನೇಕ ಪ್ರತಿಕ್ರಿಯೆ ನೀಡಿದ್ದಾರೆ. “APSRTC ಬಸ್‌ನಲ್ಲಿ ಶಾಲ್ ಹಾಕಿದರೆ ಅದು ರಿಸರ್ವೇಶನ್ ಆಗಿಬಿಡುತ್ತದಾ? ಆ ಪುರುಷರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವ ಹಕ್ಕಿದೆ. ಅದಲ್ಲದೆ, ಇದು ಮಹಿಳೆಯರ ಸೀಟ್ ಕೂಡ ಅಲ್ಲ ಎಂದು ಅನಿಸುತ್ತಿದೆ. ಏನೇ ಆಗಲಿ, ಕೆಟ್ಟದಾಗಿ ಬೈಯುವುದು ಮತ್ತು ಹೊಡೆಯುವುದು ಸರಿಯಲ್ಲ. APSRTC ಈ ಮಹಿಳೆಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು” ಎಂದು ಒಬ್ಬರು X ಖಾತೆಯಲ್ಲಿ ಬರೆದಿದ್ದಾರೆ.
ಒಟ್ಟಾರೆಯಾಗಿ, ಈ ಘಟನೆ ಸೀಟಿನ ರಿಸರ್ವೇಶನ್ ವಿಚಾರದಲ್ಲಿ ನಡೆದಿದೆ. ಇದು ಸಾರ್ವಜನಿಕ ಸಾರಿಗೆಗಳಲ್ಲಿ ಸಹಜವಾಗಿ ಆಗುವ ಗಲಾಟೆಯೇ ಆದರೂ, ಚಪ್ಪಲಿ ಫೈಟ್ ಆದದ್ದು ಅಚ್ಚರಿ ಮೂಡಿಸಿದೆ. ಕೆಲ ಸಮಯದ ಹಿಂದೆ ಇದೇ ರೀತಿ ಆಂಧ್ರಪ್ರದೇಶದ ಮತ್ತೊಂದು ಬಸ್‌ನಲ್ಲಿ ಮಹಿಳೆಯರು ಸೀಟಿಗಾಗಿ ಪರಸ್ಪರ ಜಗಳವಾಡಿದ ವಿಡಿಯೊ ಕೂಡ ವೈರಲ್ ಆಗಿತ್ತು.