Ambedkar Jayanti – ಮಹಾನ್ ಪುರುಷ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಜ್ಞಾನ ಅಕ್ಷಯ ಪಾತ್ರೆಯಿದ್ದಂತೆ, ಅವರ ಆದರ್ಶಗಳನ್ನು ನಾವೆಲ್ಲರೂ ಪಾಲನೆ ಮಾಡಿದಾಗ ಮಾತ್ರ ಅವರಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಪಟ್ಟಣ ಪಂಚಾಯತಿ ಹಾಗೂ ಸಮಾಜಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಹಾನ್ ಮಾನವತಾವಾದಿ ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ ರವರ 134ನೇ ಜಯಂತಿ ಅಂಗವಾಗಿ ಕಾರ್ಯಕ್ರಮ ಉದ್ಘಾಟಿಸಿ, ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ರವರ ಭಾವಚಿತ್ರ ಗಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

Ambedkar Jayanti – ಅಂಬೇಡ್ಕರ್ ರವರ ಆದರ್ಶ ಪಾಲನೆ ಮಾಡಬೇಕು
ನಮ್ಮ ದೇಶಕ್ಕೆ ಸಂವಿಧಾನ ಬರೆದುಕೊಟ್ಟಂತಹ ಅಂಬೇಡ್ಕರ್ ರವರ ಜಯಂತಿಯನ್ನು ಆಚರಣೆ ಮಾಡುವುದು ನಮ್ಮೆಲ್ಲರ ಸುದೈವ ಎಂದೇ ಭಾವಿಸುತ್ತೇನೆ. ಅವರಲ್ಲಿರುವ ಜ್ಞಾನ ಅಕ್ಷಯಪಾತ್ರೆಯಿದ್ದಂತೆ, ಅವರಲ್ಲಿನ ಜ್ಞಾನದ ಬಗ್ಗೆ ಎಷ್ಟು ತಿಳಿದುಕೊಂಡರು ಸಾಲೊಲ್ಲ. ಅವರ ಜಯಂತಿಯನ್ನು ಆಚರಿಸುವುದರ ಜೊತೆಗೆ ಅವರ ಆಶಯಗಳು, ದೂರ ದೃಷ್ಟಿಯನ್ನು ನಾವೆಲ್ಲರೂ ಪಾಲನೆ ಮಾಡಿದಾಗ ಮಾತ್ರ ಅವರಿಗೆ ನಿಜವಾದ ಗೌರವ ಕೊಟ್ಟಂತಾಗುತ್ತದೆ. ಅವರ ಮೂಲ ಉದ್ದೇಶ ಎಲ್ಲರಿಗೂ ಶಿಕ್ಷಣ ಕೊಡುಬೇಕೆಂಬುದು. ಅವರ ಮೂಲ ಆಶಯವೇ ಶಿಕ್ಷಣವಾಗಿತ್ತು. ಆದ್ದರಿಂದ ತಮ್ಮ ಮಕ್ಕಳಿಗೆ ತಾವುಗಳು ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ಸರ್ಕಾರ ಸಹ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಇಂದು ವಿದ್ಯಾರ್ಥಿಗಳಿಗಾಗಿ ಗುಡಿಬಂಡೆಯಲ್ಲಿ ಒಂದು ಕೋಟಿ ವೆಚ್ಚದ ವಸತಿ ನಿಲಯ ಹಾಗೂ 2 ಕೋಟಿ ವೆಚ್ಚದ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಗಿದೆ. ಈ ವರ್ಷದಿಂದ ತಾಲೂಕಿನಲ್ಲಿ ಮೂರು ಶಾಲೆಗಳಲ್ಲಿ ಇಂಗ್ಲಿಷ್ ಶಿಕ್ಷಣ ಕೊಡಲು ಆಯ್ಕೆ ಮಾಡಿಕೊಂಡು ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಉಚಿತ ಇಂಗ್ಲಿಷ್ ಶಿಕ್ಷಣ ಕಲ್ಪಿಸಿ ಕೊಡಲಾಗುತ್ತಿದೆ ಎಂದರು.

Ambedkar Jayanti – ಅಂಬೇಡ್ಕರ್ ರವರ ಕುರಿತು ಮುಖ್ಯಭಾಷಣಕಾರರ ಮಾತುಗಳು
ಬಳಿಕ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಉಪನ್ಯಾಸಕಿ ಸೌಮ್ಯ ಕೋಟುರು ರಾಮಯಣವನ್ನು ಬರೆಯೋಕೆ ಬೇಡನಾದಂತಹ ವಾಲ್ಮೀಕಿ ಬರೇಕಾಯ್ತು, ಬೆಸ್ತನಾದಂತಹ ವ್ಯಾಸ ಮಹಾಭಾರತ ಬರೆದರು. ಇಡೀ ದೇಶಕ್ಕೆ ಒಂದು ಸಂವಿಧಾನ ಬೇಕಾಗಿತ್ತು, ಅದನ್ನು ಬರೇಯಲು ಬಾಬಾ ಸಾಹೇಬ್ ಅಂಬೇಡ್ಕರ್ ಬರಬೇಕಾಯಿತು. ಸಾಮಾನ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಓದಿಸಲು ಕೂಲಿ ಮಾಡೋದನ್ನು ನಾವು ನೋಡಿರುತ್ತೇವೆ. ಆದರೆ ಬಾಬಾ ಸಾಹೇಬ್ ರವರ ಪತ್ನಿ ರಮಬಾಯಿ ರವರು ಕೂಲಿ ಮಾಡಿ ಅಂಬೇಡ್ಕರ್ ರವರನ್ನು ಓದಿಸಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಒಂದು ವೇಳೆ ಬದುಕಿದ್ದರೇ ಇಷ್ಟೊಂದು ಆಡಂಭರದ ಆಚರಣೆಯನ್ನು ಇಷ್ಟಪಡುತ್ತಿರಲಿಲ್ಲ. ವಿಶ್ವದ ಅನೇಕ ದೇಶಗಳಲ್ಲಿ ಅಂಬೇಡ್ಕರ್ ರವರ ಜಯಂತಿ ದಿನದಂದು ವಿಶ್ವ ಜ್ಞಾನ ದಿನ, ವಿಶ್ವ ಸಮಾನತೆಯ ದಿನ ಎಂದೆಲ್ಲಾ ಆಚರಣೆ ಮಾಡುತ್ತಾರೆ ಎಂದರೇ ಅದು ಬಾಬಾ ಸಾಹೇಬ್ ರವರ ಸಾಧನೆಯಾಗಿದೆ. ತಳಸಮುದಾಯದಿಂದ ಬಂದ ಡಾ. ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿ. ಆರ್. ಅಂಬೇಡ್ಕರ್. ಪ್ರಪಂಚದ ಎಲ್ಲಾ ಸಂವಿಧಾನ ಗ್ರಂಥಗಳನ್ನು ಓದಿ ಸಂವಿಧಾನ ರಚನೆ ಮಾಡಿದರು. ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಡೆದಂತಹ ದಾರಿಯಲ್ಲಿ ನಾವೆಲ್ಲ ನಡೆಯಬೇಕು. ಆದರೆ ಕೆಲವರು ಮಾತ್ರ ಸಂವಿಧಾನ ಬದಲಿಸುತ್ತೇವೆ, ಸಂವಿಧಾನವನ್ನು ಅಂಬೇಡ್ಕರ್ ರವರು ನಿಜವಾಗಿ ಬರೆದರೇ ಎಂಬೆಲ್ಲಾ ಚರ್ಚೆಗಳನ್ನು ಹುಟ್ಟುಹಾಕುತ್ತಿದ್ದಾರೆ. ಇದು ಸರಿಯಾದುದು ಅಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
Ambedkar Jayanti – ಅದ್ದೂರಿಯಾಗಿ ಮೆರವಣಿಗೆ
ಕಾರ್ಯಕ್ರಮದ ಅಂಗವಾಗಿ 10ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಮೂರು ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಅಂಬೇಡ್ಕರ್ ರವರ ಕುರಿತು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ನಗದು ನೀಡಿ ಸನ್ಮಾನಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಪಟ್ಟಣದ ಮುಖ್ಯ ಬೀದಿಯಲ್ಲಿ ಅಂಬೇಡ್ಕರರ ಭಾವಚಿತ್ರಗಳನ್ನು ಇಟ್ಟು ಪಲ್ಲಕಿಗಳೊಂದಿಗೆ ಮೆರವಣಿಗೆ ಮಾಡಲಾಯಿತು.
Read this also : Bagepalli : ಶಿಕ್ಷಣದಿಂದಲೇ ಸಮುದಾಯಗಳ ಅಭಿವೃದ್ಧಿ ಸಾಧ್ಯ ಎಂದ ಶಾಸಕ ಸುಬ್ಬಾರೆಡ್ಡಿ…!
Ambedkar Jayanti – ಕಾರ್ಯಕ್ರಮದಲ್ಲಿ ಭಾಗಿಯಾದವರು
ಈ ವೇಳೆ ತಹಶೀಲ್ದಾರ್ ಸಿಗ್ಬತ್ ವುಲ್ಲಾ, ತಾಪಂ ಇಒ ನಾಗಮಣಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಕೆ. ವಿ.ನಾರಾಯಣ ಸ್ವಾಮಿ, ಗುಡಿಬಂಡೆ ಪೊಲೀಸ್ ಠಾಣೆಯ ಸಿಪಿಐ ನಯಾಜ್ ಬೇಗ್, ಪಪಂ ಸಿಒ ಸಬಾ ಶಿರಿನ್, ಕ್ಷೇತ್ರ ಶಿಕ್ಷಣಾಧಿಕಾರಿ ಅಧ್ಯಕ್ಷ ಎ. ವಿಕಾಸ್, ಉಪಾಧ್ಯಕ್ಷ ಗಂಗರಾಜು, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಕಸಾಪ ಮಂಜುನಾಥ್ ಸೇರಿದಂತೆ ದಲಿತ ಮುಖಂಡರು ಹಾಜರಿದ್ದರು.