Allu Arjun – ಪುಷ್ಪಾ-2 ಸಿನೆಮಾಗಿಂತ ಜೋರಾಗಿ ಸದ್ದು ಮಾಡುತ್ತಿರುವ ಸಂಧ್ಯಾ ಥಿಯೇಟರ್ ಕಾಲ್ತುಳಿತದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ ಹಾಗೂ ಪುಷ್ಪಾ-2 ಚಿತ್ರತಂಡದ ವತಿಯಿಂದ 2 ಕೋಟಿ ಪರಿಹಾರ ಘೋಷಣೆ ಮಾಡಿದ್ದಾರೆ. ಈ ಘಟನೆ ನಡೆದ ಸಮಯದಲ್ಲೇ ನಟ ಅಲ್ಲು ಅರ್ಜುನ್ ಮೃತ ಮಹಿಳೆಯ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಣೆ ಮಾಡಿದ್ದು, ಆಸ್ಪತ್ರೆಯಲ್ಲಿರುವ ಬಾಲಕನ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಅಲ್ಲು ಅರ್ಜುನ್ ತಿಳಿಸಿದ್ದರು. ಇದೀಗ ಅಲ್ಲು ಅರ್ಜುನ್ ಹಾಗೂ ಪುಷ್ಪಾ-2 ಚಿತ್ರತಂಡ 2 ಕೋಟಿ ರೂಪಾಯಿಗಳನ್ನು ನೀಡುತ್ತಿದ್ದಾರೆ.

ಡಿಸೆಂಬರ್ 04 ರಂದು ಅಲ್ಲು ಅರ್ಜುನ್ ತಮ್ಮ ಕುಟುಂಬದೊಂದಿಗೆ ಸಂಧ್ಯಾ ಚಿತ್ರಮಂದಿರಕ್ಕೆ ಪುಷ್ಪ 2 ಸಿನಿಮಾ ವೀಕ್ಷಿಸಲು ತೆರಳಿದ್ದರು. ಈ ವೇಳೆ ನಡೆದ ನೂಕಾಟದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅವರ ಪುತ್ರ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಲ್ಲು ಅರ್ಜುನ್ ಅನ್ನು ಬಂಧಿಸಿದ್ದರು. ನಂತರ ಜಾಮೀನು ಮೇಲೆ ಹೊರಬಂದರು. ಬಳಿಕ ಪೊಲೀಸರ ವಿಚಾರಣೆಗೂ ಹಾಜರಾಗಿದ್ದರು. ಇದೀಗ ಅಲ್ಲು ಅರ್ಜುನ್ ರವರ ತಂದೆ ಅಲ್ಲು ಅರವಿಂದ್ ಡಿ.25 ರಂದು ಈ ಪ್ರಕರಣದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನನ್ನು ಭೇಟಿಯಾಗಲು ತೆರಳಿದ್ದರು. ಈ ಸಮಯದಲ್ಲಿ ಅಲ್ಲು ಅರವಿಂದ್ ಮಾತನಾಡಿ ನಾನು ವೈದ್ಯರ ಬಳಿ ಮಾತನಾಡಿದ್ದೇನೆ. ಬಾಲಕನ ಆರೋಗ್ಯ ಸುಧಾರಿಸುತ್ತಿದೆ ಎಂದು ಹೇಳಿದರು. ಇದು ನನಗೆ ಖುಷಿಯ ವಿಚಾರವಾಗಿದೆ. ಆ ಬಾಲಕನಿಗೆ ಆತನ ಕುಟುಂಬಕ್ಕೆ 2 ಕೋಟಿ ರೂಪಾಯಿ ನೀಡುವ ನಿರ್ಧಾರ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಪೋಸ್ಟ್ ಇಲ್ಲಿದೆ ನೋಡಿ: Click Here
ಇನ್ನೂ ಅಲ್ಲು ಅರ್ಜುನ್ ರವರು ಒಂದು ಕೋಟಿ ರೂಪಾಯಿ, ಪುಷ್ಪಾ-2 ಸಿನೆಮಾದ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್ 50 ಲಕ್ಷ ಹಾಗೂ ಸಿನೆಮಾದ ನಿದೇರ್ಶಕ ಸುಕುಮಾರ್ 50 ಲಕ್ಷ ರೂಪಾಯಿ ಸೇರಿ ಒಟ್ಟು 2 ಕೋಟಿ ರೂಪಾಯಿ ಮೃತ ಮಹಿಳೆಯ ಕುಟುಂಬಕ್ಕೆ ನೀಡಲಿದ್ದಾರೆ. ಸಂದ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣ ಭಾರಿ ಸದ್ದು ಮಾಡಿತ್ತು. ಈ ಪ್ರಕರಣದ ಕಾರಣದಿಂದ ಅಲ್ಲು ಅರ್ಜುನ್ ಒಂದು ರಾತ್ರಿ ಜೈಲಿನಲ್ಲಿ ಕಳೆಯಬೇಕಾಯ್ತು. ಕಳೆದೆರಡು ದಿನಗಳ ಹಿಂದೆಯಷ್ಟೆ ಅಲ್ಲು ಅರ್ಜುನ್ ಮನೆಯ ಮೇಲೆ ದಾಳಿ ಸಹ ನಡೆಸಿದ್ದರು. ಜೊತೆಗೆ ಬಾಲಕನಿಗೆ 1 ಕೋಟಿ ಕೊಡುವಂತೆ ಒತ್ತಾಯ ಸಹ ಮಾಡಿದ್ದರು.