ಕೋಟ್ಯಂತರ ಹಿಂದೂಗಳ ಬಹುದಿನಗಳ ಕನಸಾಗಿದ್ದ ಅಯೋಧ್ಯೆ ರಾಮ ಮಂದಿರ ನಿರ್ಮಾಣಗೊಂಡಿದ್ದು, ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಈ ದೇಗುಲಕ್ಕೆ ಭೇಟಿ ನೀಡಿ ರಾಮಲಲ್ಲಾ ದರ್ಶನ ಪಡೆಯುತ್ತಿದ್ದಾರೆ. ದೇವಾಲಯದ ಆದಾಯ ಸಹ ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ರಾಮ ಜನ್ಮಭೂಮಿ ಟ್ರಸ್ಟ್ ವಿಐಪಿ-ಸಾಮಾನ್ಯ ಭಕ್ತರು ಇಬ್ಬರೂ ಒಂದೇ ಎಂದು ಹೇಳಿದೆ. ಸಾಮಾನ್ಯ ಪ್ರಜೆಯ ಮಾತನ್ನು ಸಹ ಶ್ರೀರಾಮ ಗೌರವದಿಂದ ಕಾಣುತ್ತಿದ್ದರು ಎನ್ನಲಾಗಿದ್ದು, ಅವರ ಆದರ್ಶವನ್ನು ರಾಮ ಮಂದಿರದಲ್ಲೂ ಪಾಲನೆ ಮಾಡಲು ಟ್ರಸ್ಟ್ ಮುಂದಾಗಿದೆ ಎಂದು ಹೇಳಲಾಗಿದೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ತುಂಬಾ ಸುಂದರವಾಗಿ ನಿರ್ಮಾಣಗೊಂಡಿದೆ. ದೇಶ ಮಾತ್ರವಲ್ಲದೇ ವಿದೇಶದಿಂದಲೂ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಕೆಲವು ದಿನಗಳಿಂದ ಅಯೋಧ್ಯೆ ರಾಮಮಂದಿರದಲ್ಲಿ ತಾರತಮ್ಯದ ಆರೋಪ ಕೇಳಿಬರುತ್ತಿತ್ತು. ಇದೀಗ ಭಕ್ತರ ಅಸಮಾಧಾನ ತಣಿಸಲು ಅಯೋಧ್ಯೆ ಶ್ರೀರಾಮಜನ್ಮಭೂಮಿ ಟ್ರಸ್ಟ್ ಮೂರು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಅದರಂತೆ ರಾಮಮಂದಿರಕ್ಕೆ ಭೇಟಿ ನೀಡುವ ಗಣ್ಯರು, ಸೆಲೆಬ್ರೆಟಿಗಳಿಗೆ ತಿಲಕ ಇಡುವಂತಹ ಕೆಲಸವನ್ನು ಅರ್ಚಕರು ಮಾಡುವಂತಿಲ್ಲ, ಬಾಲರಾಮನ ಚರಣಾಮೃತವನ್ನು ಯಾರಿಗೂ ನೀಡಬಾರದು ಹಾಗೂ ಮಂದಿರದ ಅರ್ಚರಿಕೆ ಯಾರೂ ಹಣ ನೀಡಬಾರದು ಎಂದು ಮಹತ್ತರ ನಿರ್ಧಾರವನ್ನು ಟ್ರಸ್ಟ್ ಮಾಡಿದೆ ಎಂದು ತಿಳಿದುಬಂದಿದೆ. ಅಷ್ಟೇಅಲ್ಲದೇ ದೇಗುಲಕ್ಕೆ ಬರುವ ಭಕ್ತರು ದೇಣಿಗೆ ರೂಪದಲ್ಲಿ ದೇವಾಲಯದ ಆಡಳಿತ ಮಂಡಳಿಗೆ ಹಣ ನೀಡಬಹುದು. ಈ ಮೂಲಕ ರಾಮಮಂದಿರಕ್ಕೆ ಬರುವ ಭಕ್ತರೆಲ್ಲಾ ಸಮಾನರು ಎಂಬ ಸಂದೇಶವನ್ನು ಟ್ರಸ್ಟ್ ಸಾರಿದೆ.
ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಅಯೋಧ್ಯೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತ್ತು. ಈ ಆಧ್ಯಾತ್ಮಿಕ ಸಮಾರಂಭದಲ್ಲಿ ವಾರಾಣಸಿಯ ಹಿರಿಯ ಆರ್ಚಕರಾಗಿದ್ದ ದೀಕ್ಷಿತ್ ಭಾಗಿಯಾಗಿದ್ದರು. ದೀಕ್ಷಿತ್ ಅವರು ಮಹಾರಾಷ್ಟ್ರದ ಸೋಲಾಪುರ್ ಜಿಲ್ಲೆಯ ಮೂಲದವರಾಗಿದ್ದು, ಅನೇಕ ಪೀಳಿಗೆಯಿಂದ ವಾರಾಣಸಿಯಲ್ಲಿ ನೆಲೆಸಿದ್ದರು. ದೀಕ್ಷಿತ್ ಅವರ ನಿಧನಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ಅವರು ಕಾಶಿಯ ದೊಡ್ಡ ಜ್ಞಾನಿಗಳಾಗಿದ್ದಾರೆ. ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಮುಖ್ಯ ಅರ್ಚಕರಾಗಿದ್ದವರು. ಅವರ ನಿಧನವು ಆಧ್ಯಾತ್ಮಿಕ ಮತ್ತು ಸಾಹಿತ್ಯಕ ಕ್ಷೇತ್ರಕ್ಕೆ ನಷ್ಟ ಉಂಟು ಮಾಡಿದೆ. ಭಾರತದ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆಗೆ ಅವರು ಸಲ್ಲಿಸಿರುವ ಸೇವೆಯಿಂದಾಗಿ ಅವರು ಚಿರಸ್ಮರಣೆಯಾಗಿರಲಿದ್ದಾರೆ ಎಂದು ಪೋಸ್ಟ್ ಮಾಡಿದ್ದರು.