ವಿಮಾನ ನಿಲ್ದಾಣಗಳಲ್ಲಿ ಚಿನ್ನದ ಕಳ್ಳಸಾಗಾಣೆ ಮಾಡಲು ಹೋಗಿ ಅನೇಕರು ಸಿಕ್ಕಿಹಾಕಿಕೊಂಡಿರುವ ಘಟನೆಗಳು ನಡೆದಿದೆ. ಇದೀಗ Air India Express (ಏರ್ ಇಂಡಿಯಾ ಎಕ್ಸ್ ಪ್ರೆಸ್)ನ ಸಿಬ್ಬಂದಿ ತನ್ನ ಗುಪ್ತಾಂಗದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಕಳ್ಳಸಾಗಾಣೆ ಮಾಡಲು ಯತ್ನಿಸಿದ್ದು, ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂಧನ ಮಾಡಲಾಗಿದೆ. ಆರೋಪಿ Air India Express ನ ಕ್ಯಾಬಿನ್ ಕ್ಯ್ರೂ ನಲ್ಲಿ ಕೆಲಸ ಮಾಡುತ್ತಿದ್ದಳು ಎನ್ನಲಾಗಿದೆ.
ಗುಪ್ತಾಂಗದಲ್ಲಿ ಚಿನ್ನವನ್ನು ಕಳ್ಳಸಾಗಾಣೆ ಮಾಡಿ ಸಿಕ್ಕಿಬಿದ್ದ ಆರೋಪಿಯನ್ನು ಕೋಲ್ಕತ್ತಾ ಮೂಲದ ಸುರಭಿ ಕಥುನ್ ಎಂದು ಗುರ್ತಿಸಲಾಗಿದೆ. ಆರೋಪಿಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದ ವಿಚಾರ ಹೊರಬಂದಿದೆ. ಸುಮಾರು 960 ಗ್ರಾಂ ಬಂಗಾರವನ್ನು ವಶಪಡಿಸಿಕೊಂಡಿರುವುದಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ ದೃಡಪಡಿಸಿದೆ. ಸುರಭಿ ಮಸ್ಕತ್ ನಿಂದ ಕಣ್ಣೂರಿಗೆ ಹೊರಟಿದ್ದ ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಳು. ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟುಕೊಂಡು ಸಾಗಾಣೆ ಮಾಡುತ್ತಿದ್ದಳು. ಗುಪ್ತಾಂಗದಲ್ಲಿ ಚಿನ್ನದ ಕಳ್ಳಸಾಗಾಣೆ ಮಾಡುತ್ತಿದ್ದ ವಿಮಾನಯಾನದ ಸಿಬ್ಬಂದಿಯ ಬಂಧನ ಭಾರತದಲ್ಲಿ ಮೊದಲ ಪ್ರಕರಣವಾಗಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಈ ಪ್ರಕರಣದ ಬಗ್ಗೆ ತನಿಖೆ ಆರಂಭವಾಗಿದೆ. ಸದ್ಯ ಸಂಗ್ರಹವಾಗಿರುವ ಸಾಕ್ಷಿಗಳ ಆಧಾರ ಮೇರೆಗೆ ಸುರಭಿ ಈ ಹಿಂದೆ ಸಹ ಅನೇಕ ಬಾರಿ ಗೋಲ್ಡ್ ಸ್ಮಗ್ಲಿಂಗ್ ಮಾಡಿದ್ದಾಳೆ. ಸ್ಮಗ್ಲಿಂಗ್ ಗ್ಯಾಂಗ್ ನಲ್ಲಿ ಕೇರಳದ ಮೂಲದ ವ್ಯಕ್ತುಗಳು ಭಾಗಿಯಾಗಿರುವ ಬಗ್ಗೆ ಸಹ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ. ವಿಚಾರಣೆ ಹಾಗೂ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಳಿಸದ ಬಳಿಕ ಆಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಆಕೆಯನ್ನು 14 ದಿನಗಳವರೆಗೆ ಕಣ್ಣೂರಿನ ಮಹಿಳಾ ಕಾರಾಗೃಹಕ್ಕೆ ರಿಮ್ಯಾಂಡ್ ಗಾಗಿ ನೀಡಲಾಗಿದೆ ಎಂದು ಹೇಳಲಾಗಿದೆ.