Mobile Hack – ಖ್ಯಾತ ನಟ ಉಪೇಂದ್ರ ಮತ್ತು ಅವರ ಪತ್ನಿ ಪ್ರಿಯಾಂಕಾ ಅವರಿಗೆ ಸೈಬರ್ ಕ್ರಿಮಿನಲ್‌ಗಳು ಶಾಕ್ ನೀಡಿದ್ದಾರೆ. ಮೊಬೈಲ್ ಫೋನ್‌ಗಳನ್ನು ಹ್ಯಾಕ್ ಮಾಡಿ, ಪರಿಚಿತರಿಗೆ ತುರ್ತು ಪರಿಸ್ಥಿತಿ ಎಂದು ಹೇಳಿ ವಾಟ್ಸಾಪ್ ಮೂಲಕ ಹಣ ಕೇಳಿದ್ದಾರೆ. ಈ ಘಟನೆಯಲ್ಲಿ ಉಪೇಂದ್ರ ಅವರ ಮಗ ಆಯುಷ್ ಸೇರಿದಂತೆ ಹಲವರು ಹಣ ಕಳೆದುಕೊಂಡಿದ್ದಾರೆ. ಈ ಕೃತ್ಯದ ಬಗ್ಗೆ ಉಪೇಂದ್ರ ಅವರು ಸ್ವತಃ ವಿವರಣೆ ನೀಡಿದ್ದಾರೆ.

Mobile Hack – ಒಂದು ಕರೆ, ಲಕ್ಷಾಂತರ ವಂಚನೆ!
ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ಒಂದು ಕರೆ ಬಂದಿದೆ. ‘ನಿಮ್ಮ ಪಾರ್ಸೆಲ್ ವಿತರಣೆಗೆ ವಿಳಾಸ ದೃಢೀಕರಿಸಲು, ಒಂದು ನಿರ್ದಿಷ್ಟ ಸಂಖ್ಯೆಗೆ ಕರೆ ಮಾಡಿ’ ಎಂದು ಆ ಕರೆಯಲ್ಲಿ ವಂಚಕರು ತಿಳಿಸಿದ್ದಾರೆ. ಈ ಸಂಖ್ಯೆಯಲ್ಲಿ ನಕ್ಷತ್ರ ಚಿಹ್ನೆ ಮತ್ತು ಹ್ಯಾಶ್ ಚಿಹ್ನೆಗಳು ಇದ್ದವು. ಪ್ರಿಯಾಂಕಾ ಅವರ ಮೊಬೈಲ್‌ನಿಂದ ಇದು ಸಾಧ್ಯವಾಗದಿದ್ದಾಗ, ಉಪೇಂದ್ರ ಮತ್ತು ಅವರ ಮ್ಯಾನೇಜರ್ ಮಾದೇವ ಅವರ ಫೋನ್‌ಗಳಿಂದ ಕರೆ ಮಾಡಿದ್ದಾರೆ. ಈ ಒಂದೇ ಒಂದು ಕರೆ ಮೂವರ ಮೊಬೈಲ್‌ಗಳನ್ನು ಹ್ಯಾಕ್ ಮಾಡಿದೆ.
Mobile Hack – ಆಪ್ತರನ್ನೇ ಟಾರ್ಗೆಟ್ ಮಾಡಿದ ಸೈಬರ್ ಕಳ್ಳರು
ಫೋನ್ ಹ್ಯಾಕ್ ಆದ ನಂತರ, ವಂಚಕರು ಉಪೇಂದ್ರ, ಪ್ರಿಯಾಂಕಾ ಮತ್ತು ಮ್ಯಾನೇಜರ್ ಫೋನ್‌ಗಳಿಂದ ಅವರ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ತುರ್ತಾಗಿ ಹಣದ ಅಗತ್ಯವಿದೆ ಎಂದು ಸಂದೇಶ ಕಳುಹಿಸಿದ್ದಾರೆ. ‘ಅರ್ಜೆಂಟ್ 55 ಸಾವಿರ ರೂಪಾಯಿ ಕಳಿಸಿ’ ಎಂದು ವಾಟ್ಸಾಪ್ ಮೂಲಕ ಕೇಳಿದ್ದಾರೆ. ಇದು ನಿಜವೆಂದು ಭಾವಿಸಿದ ಉಪೇಂದ್ರ ಅವರ ಮಗ ಆಯುಷ್ ಸೇರಿದಂತೆ ಹಲವರು ಹಣ ವರ್ಗಾಯಿಸಿದ್ದಾರೆ. ಉಪೇಂದ್ರ ಅವರ ಮಗ ಆಯುಷ್ ಕೂಡ 55 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಉಪೇಂದ್ರ, “ನನ್ನ ಮಗನಿಗೂ ಇದೇ ರೀತಿ ಆಗಿ, ದುಡ್ಡು ಹಾಕಿದ್ದಾನೆ. ನಮ್ಮ ಸ್ನೇಹಿತರ ಸೇರಿ ಲಕ್ಷಾಂತರ ರೂಪಾಯಿ ಹೋಗಿದೆ” ಎಂದಿದ್ದಾರೆ.
ಪ್ರಿಯಾಂಕಾ ಉಪೇಂದ್ರ ರವರ ವಿಡಿಯೋ ಇಲ್ಲಿದೆ ನೋಡಿ
Mobile Hack – ಸೈಬರ್ ವಂಚನೆಗಳಿಂದ ರಕ್ಷಿಸಿಕೊಳ್ಳುವುದು ಹೇಗೆ?
ಈ ಘಟನೆ ನಮ್ಮೆಲ್ಲರಿಗೂ ಒಂದು ಎಚ್ಚರಿಕೆ. ಇಂತಹ ಸೈಬರ್ ವಂಚನೆಗಳಿಂದ ರಕ್ಷಿಸಿಕೊಳ್ಳಲು ಈ ಕೆಳಗಿನ ಕ್ರಮಗಳನ್ನು ಅನುಸರಿಸುವುದು ಉತ್ತಮ. Read this also : ನಿಮ್ಮ ಮೊಬೈಲ್ ಹ್ಯಾಕ್ ಆಗಿದೆಯೇ? ಗುರುತಿಸುವುದು ಹೇಗೆ? ಸರಳ ಟ್ರಿಕ್ಸ್…!

- ಅಪರಿಚಿತ ಫೋನ್ ಕರೆಗಳಿಂದ ಬಂದ ಯಾವುದೇ ಕೋಡ್ ಅಥವಾ ಸಂಖ್ಯೆಗಳಿಗೆ ಡಯಲ್ ಮಾಡಬೇಡಿ.
- ಬ್ಯಾಂಕ್ ವಿವರಗಳು, ಓಟಿಪಿ ಅಥವಾ ಇತರ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ಫೋನ್‌ನಲ್ಲಿ ಯಾರಿಗೂ ಹಂಚಿಕೊಳ್ಳಬೇಡಿ.
- ಯಾವುದೇ ತುರ್ತು ಸಂದೇಶ ಬಂದರೂ, ನೇರವಾಗಿ ಆ ವ್ಯಕ್ತಿಯನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ.
ಉಪೇಂದ್ರ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋ ಹಂಚಿಕೊಂಡು, ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯ ಬಗ್ಗೆ ಸೈಬರ್ ಪೊಲೀಸ್ ತನಿಖೆ ಆರಂಭಿಸಿದ್ದು, ವಂಚಕರ ಪತ್ತೆಗಾಗಿ ಪ್ರಯತ್ನಿಸುತ್ತಿದ್ದಾರೆ.
