Tuesday, November 5, 2024

Accident News: ಹಿಂಬದಿಯಿಂದ ಬೈಕ್ ಗೆ ಡಿಕ್ಕಿ ಹೊಡೆದ ಲಾರಿ, ತುಂಬು ಗರ್ಭಿಣಿ ಹಾಗೂ ನವಜಾತ ಶಿಶು ಸಾವು…!

Accident News- ಹಿಂಬದಿಯಿಂದ ಬೈಕ್ ಗೆ ಲಾರಿಯೊಂದು ಡಿಕ್ಕಿ ಹೊಡೆದ (Accident News) ಪರಿಣಾಮ ಪತಿ ಎದುರಲ್ಲೇ 7 ತಿಂಗಳ ಗರ್ಭಿಣಿ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಎಡೆಹಳ್ಳಿ ಗ್ರಾಮದ ಬಳಿ ನಡೆದಿದೆ. ಈ ಅಪಘಾತದಲ್ಲಿ (Accident News) ಗರ್ಭಿಣಿ ಮಹಿಳೆ ಹಾಗೂ ನವಜಾತ ಶಿಶು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಗರ್ಭಿಣಿ ಮಹಿಳೆಯ ಹೊಟ್ಟೆಯಿಂದ ಮಗು ಹೊರಬಂದ ವಿಲವಿಲ ಒಡ್ಡಾ ಮೃತಪಟ್ಟಿದ ಹೃದಯವಿದ್ರಾವಕ ಘಟನೆ ನಡೆದಿದೆ.

pregnant woman dies road accident 2

ಮೃತ ದುರ್ದೈವಿಯನ್ನು ಸಿಂಚನ (30) ಎಂದು ಗುರ್ತಿಸಲಾಗಿದೆ. ತುಂಬು ಗರ್ಭಿಣಿಯಾಗಿದ್ದ ಸಿಂಚನ ಹೆರಿಗೆ ಸುಸೂತ್ರವಾಗಿ ಆಗಲಿ ಎಂಬ ಉದ್ದೇಶದಿಂದ ದೇವರಿಗೆ ಪೂಜೆ ಸಲ್ಲಿಸಿ ವಾಪಸ್ ಮನೆಗೆ ಬರುತ್ತಿದ್ದಾಗ ಹಿಂಬದಿಯಿಂದ ಬಂದ ಟಿಪ್ಪರ್‍ ಈ ದಂಪತಿಯಿದ್ದ (Accident News)  ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ ಹಿಂಬದಿಯಲ್ಲಿದ್ದ ಗರ್ಭಿಣಿ ಸಿಂಚನ ಬೈಕ್ ನಿಂದ(Accident News)  ಕೆಳಗೆ ಬಿದ್ದಿದ್ದಾರೆ. ಟಿಪ್ಪರ್ ​ಸಿಂಚನಾ ಮೇಲೆ ಹರಿದ ಪರಿಣಾಮ ಹೊಟ್ಟೆಯಲ್ಲಿದ್ದ 8 ತಿಂಗಳ ಮಗು ತಾಯಿಯ ಹೊಟ್ಟೆ ಸೀಳಿ ಹೊರಗೆ ಬಂದಿದೆ. ತಂದೆಯ ಕಣ್ಣೆದುರಲ್ಲೇ ನಡು ರಸ್ತೆಯಲ್ಲಿ ಮಗು ವಿಲ ವಿಲ ಒದ್ದಾಡಿ (Accident News)  ಮೃತಪಟ್ಟಿದೆ. ದೇವರ ಕೃಪೆಯಿಂದ ಸಿಂಚನಾ ಪತಿ ಮಂಜುನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ತನ್ನ ಕಣ್ಣ ಮುಂದೆಯೇ ಪ್ರೀತಿಯ ಪತ್ನಿ ಹಾಗೂ ಇನ್ನೂ ಲೋಕವನ್ನು ಕಾಣದ ಮಗು ಮೃತಪಟ್ಟಿರುವುದು ನೋಡಿ ರಸ್ತೆಯಲ್ಲೇ ಗೋಳಾಡಿದ್ದಾರೆ.

pregnant woman dies road accident

ಇನ್ನೂ ಮೃತ ಸಿಂಚನಾ ಈ ತಿಂಗಳಲ್ಲೇ 9 ತಿಂಗಳು ತುಂಬುತ್ತಿತ್ತು. ಈ ಕಾರಣದಿಂದಲೇ ಹೆರಿಗೆ ಸುಲಭವಾಗಿ ಆಗಲಿ ಎಂದು ದಂಪತಿ ದಾಬಸ್ ಪೇಟೆಯಲ್ಲಿರುವ ಶಿವಗಂಗೆಯ ಗಣಪತಿ ದೇವಾಲಯಕ್ಕೆ ಹೋಗಿ ಅಲ್ಲಿ ಪೂಜೆ ಸಲ್ಲಿಸಿ ಬಳಿಕ ತಮ್ಮ ಸ್ವಂತ ಊರಿಗೆ ವಾಪಾಸ್ಸಾಗುತ್ತಿದ್ದಾಗ ಈ ಘಟನೆ (Accident News) ನಡೆದಿದೆ. ಕೆಲವೊಂದು ಮೂಲಗಳ ಪ್ರಕಾರ ಲಾರಿ ಚಾಲಕನ ಅತಿಯಾದ ವೇಗವೇ ಈ ಅಪಘಾತಕ್ಕೆ (Accident News) ಕಾರಣ ಎಂದು ಹೇಳಲಾಗುತ್ತಿದೆ. ಇನ್ನೂ ತುಂಬು ಗರ್ಭಿಣಿ ಹಾಗೂ ನವಜಾತ ಶಿಶುವನ್ನು ಕಳೆದುಕೊಂಡ ಗಂಡ ಹಾಗೂ ಅವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!