Exit Poll – ಕರ್ನಾಟಕದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆದಿದ್ದು, ಇದು ಆಡಳಿತ ರೂಡ ಕಾಂಗ್ರೇಸ್ ಪಕ್ಷಕ್ಕೂ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಗೂ ಪ್ರತಿಷ್ಠೆಯಾಗಿದೆ ಎನ್ನಬಹುದಾಗಿದೆ. ಈಗಾಗಲೇ ಈ ಮೂರು ಕ್ಷೇತ್ರಗಳಲ್ಲಿ ಮತದಾನ ಸಹ ಮುಗಿದಿದ್ದು, ಇದೇ ನ.23 ರಂದು ಫಲಿತಾಂಶ ಪ್ರಕಟವಾಗಲಿದೆ. (Exit Poll) ಈ ಮೂರು ಕ್ಷೇತ್ರಗಳ ಫಲಿತಾಂಶದ ಮೇಲೆ ಭಾರಿ ಕುತೂಹಲ ಸಹ ಸೃಷ್ಟಿಯಾಗಿದ್ದು, ಎಲ್ಲರ ಚಿತ್ತ ನ.23 ರಂದು ಪ್ರಕಟವಾಗಲಿರುವ ಫಲಿತಾಂಶದತ್ತ ನೆಟ್ಟಿದೆ ಎನ್ನಲಾಗಿದೆ. ಇದಕ್ಕೂ ಮೊದಲು (Exit Poll) ಚುನಾವೋತ್ತರ ಸಮೀಕ್ಷೆ ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಭವಿಷ್ಯ ನುಡಿದಿದೆ.
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ನವೆಂಬರ್ 23ರಂದು ಪ್ರಕಟವಾಗಲಿರುವ ಫಲಿತಾಂಶದತ್ತ ಕಡೆಗೆ ಎಲ್ಲರ ಗಮನವಿದೆ. (Exit Poll) ಇದಕ್ಕೂ ಮೊದಲು ಚನ್ನಪಟ್ಟಣ ಹಾಗೂ ಶಿಗ್ಗಾಂವಿಯಲ್ಲಿ ಬಿಜೆಪಿ ಗೆದ್ದರೆ, ಸಂಡೂರಿನಲ್ಲಿ ಮತ್ತೆ ಕಾಂಗ್ರೆಸ್ ಗೆಲುವು ಸಾಧಿಸಬಹುದು ಎನ್ನುವ ಚರ್ಚೆಗಳು ನಡೆದಿವೆ. ಇದೀಗ ಪಿಮಾರ್ಕ್ ಎಂಬ ಸಂಸ್ಥೆ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯಂತೆ ಎನ್.ಡಿ.ಎ ಕೂಟ 2 ಹಾಗೂ ಕಾಂಗ್ರೇಸ್ 1 ಸ್ಥಾನ ಗೆಲ್ಲಲಿದೆ ಎಂದು (Exit Poll) ಹೇಳಲಾಗುತ್ತಿದೆ. ಚನ್ನಪಟ್ಟಣ ಹಾಗೂ ಶಿಗ್ಗಾಂವಿಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಾಲಾಗಲಿದೆಯಂತೆ. ಸಂಡೂರು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೇಸ್ ಪಕ್ಷ ಗೆಲ್ಲಲಿದೆ ಎಂದು ತಿಳಿಸಿದೆ.
ಇನ್ನೂ ಕಾಂಗ್ರೇಸ್ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆಯನ್ನು (Exit Poll) ಇಟ್ಟುಕೊಂಡಿದ್ದರೇ, ಅದೇ ರೀತಿ ಬಿಜೆಪಿ-ಜೆಡಿಎಸ್ ಮೈತ್ರಿ ಸಹ ಮೂರು ಕ್ಷೇತ್ರಗಳಲ್ಲಿ ಗೆಲ್ಲೋದು ಪಕ್ಕಾ ಎಂದು ಹೇಳುತ್ತಿದೆ. ಮೈತ್ರಿ ಕೂಟದ ಪ್ರಕಾರ ಚನ್ನಪಟ್ಟಣ ಹಾಗೂ ಶಿಗ್ಗಾಂವಿ ಗೆಲುವು ಪಕ್ಕಾ, ಸಂಡೂರಿನಲ್ಲಿ ಈ ಬಾರಿ ಜನರು ಬದಲಾವಣೆ (Exit Poll) ಬಯಸಿ ಎನ್.ಡಿ.ಎ ಗೆ ಮತ ಚಲಾಯಿಸಿದ್ದಾರೆ ಎಂಬ ವಿಶ್ವಾಸ ಬಿಜೆಪಿಯವರಲ್ಲಿದೆ ಎನ್ನಲಾಗಿದೆ. ಬೈ ಎಲೆಕ್ಷನ್ ಗೂ ಮೊದಲು ಚನ್ನಪಟ್ಟಣದಲ್ಲಿ ಜೆಡಿಎಸ್, ಶಿಗ್ಗಾಂವಿಯಲ್ಲಿ ಬಿಜೆಪಿ ಹಾಗೂ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷ ಗೆಲುವು ಸಾಧಿಸಿತ್ತು. ಇದೀಗ ನಡೆದ ಉಪಚುನಾವಣೆಯಲ್ಲಿ ಮೂರು ಪಕ್ಷಗಳೂ ತಲಾ ಒಂದೊಂದು ಕ್ಷೇತ್ರದಲ್ಲಿ ಗೆಲ್ಲಲಿದೆ ಎಂದು ಗುಪ್ತಚರ ವಿಭಾಗ ಅಂದಾಜು ಮಾಡಿದೆ ಎನ್ನಲಾಗಿದೆ. (Exit Poll) ಚನ್ನಪಟ್ಟಣದಲ್ಲಿ ಜೆಡಿಎಸ್, ಶಿಗ್ಗಾಂವಿಯಲ್ಲಿ ಬಿಜೆಪಿ ಹಾಗೂ ಸಂಡೂರಿನಲ್ಲಿ ಕಾಂಗ್ರೇಸ್ ಜಯಗಳಿಸಲಿದೆ ಎಂದು ಗುಪ್ತಚರ ವಿಭಾಗದ ವರದಿಯಲ್ಲಿ ಹೇಳಿದೆ ಎಂದು ತಿಳಿದುಬಂದಿದೆ. ಭಾರಿ ಜಿದ್ದಾಜಿದ್ದಿನಿಂದ ನಡೆದ ಈ ಉಪಚುನಾವಣೆಯಲ್ಲಿ ಯಾರು ಗೆಲ್ಲಲಿದ್ದಾರೆ, ಮತದಾರರು ಯಾರ ಮೇಲೆ ಒಲವು ತೋರಿಸಿದ್ದಾರೆ ಎಂಬುದನ್ನು ತಿಳಿಯೋಕೆ ನ.23 ರವರೆಗೂ ಕಾಯಬೇಕಿದೆ.