Friday, November 22, 2024

Computer Education: ಇಂದಿನ ಕಾಲದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಅತ್ಯಗತ್ಯ: ಶಾಸಕ ಸುಬ್ಬಾರೆಡ್ಡಿ

Computer Education – ಇಂದಿನ ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಕಂಪ್ಯೂಟರ್‍ ಜ್ಞಾನ ಅತ್ಯಗತ್ಯವಾಗಿದ್ದು, ಮಕ್ಕಳು ಬಾಲ್ಯದಿಂದಲೇ ಕಂಪ್ಯೂಟರ್‍ ಶಿಕ್ಷಣವನ್ನು (Computer Education) ಪಡೆದುಕೊಳ್ಳಬೇಕೆಂದು ಶಾಸಕ ಸುಬ್ಬಾರೆಡ್ಡಿ ಸಲಹೆ ನೀಡಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಚಿಕ್ಕಬಳ್ಳಾಪುರದ ಸಮಾನ ಮನಸ್ಕರ ಸಂರಕ್ಷಣಾ ವೇದಿಕೆ, ಬೆಂಗಳೂರಿನ ಸೋನೋ ವಿಷನ್ ಎಟೋಸ್ ಟೆಕ್ನಿಕಲ್ ಸರ್ವೀಸ್ ಪ್ರೈ. ಲಿಮಿಟೆಡ್ ರವರುಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಶಾಲೆಗಳಿಗೆ ಉಚಿತ ಕಂಪ್ಯೂಟರ್‍ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

Computer Distribution to govt schools 1

ಇಂದಿನ ಕಾಲದಲ್ಲಿ ಫಸ್ಟ್ ಕ್ಲಾಸ್ ಡಿಗ್ರಿಗಳನ್ನು ಪಡೆದುಕೊಂಡವರಿಗೂ ಕಂಪ್ಯೂಟರ್‍ ಶಿಕ್ಷಣ (Computer Education)  ಇಲ್ಲದೇ ಇದ್ದರೇ ಉದ್ಯೋಗ ಸಿಗುವುದಿಲ್ಲ. ಕಂಪ್ಯೂಟರ್‍ ಶಿಕ್ಷಣ ಇಲ್ಲದವನು ಅವಿದ್ಯಾವಂತ ಎಂತಲೇ ಕರೆಯುತ್ತಾರೆ. ಈ ನಿಟ್ಟಿನಲ್ಲಿ ಅನೇಕ ದಾನಿಗಳು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್‍ ಗಳನ್ನು (Computer Education) ದಾನ ನೀಡುತ್ತಿದ್ದಾರೆ. ವಿದ್ಯಾರ್ಥಿಗಳಾದ ತಾವುಗಳು ಈ ಕಂಪ್ಯೂಟರ್‍ ಗಳನ್ನು ಬಳಸಿಕೊಂಡು ಜ್ಞಾನ ಬೆಳೆಸಿಕೊಳ್ಳಬೇಕು. ಕಂಪ್ಯೂಟರ್‍ ಕೊಟ್ಟಿದ್ದಾರೆ ಗೇಂ ಗಳನ್ನು ಆಡೋಣ ಎನ್ನದೇ ಉಪಯೋಗವಾಗುವಂತಹ ಶಿಕ್ಷಣ ಪಡೆಯಬೇಕು. (Computer Education)  ಅದೇ ರೀತಿ ಕಂಪ್ಯೂಟರ್‍ ಮೂಲಕ ಶಿಕ್ಷಣ ನೀಡಲು ಶಿಕ್ಷಕರಿಗೂ ತರಬೇತಿ ನೀಡಬೇಕು ಎಂದರು.

ಇನ್ನೂ ತಾಲೂಕಿನ ಎಲ್ಲಾ ಶಾಲೆಗಳಿಗೆ ಎಷ್ಟು ಕಂಪ್ಯೂಟರ್‍ ಗಳ (Computer Education)  ಅವಶ್ಯಕತೆಯಿದೆ ಎಂಬ ಮಾಹಿತಿಯನ್ನು ನನಗೆ ನೀಡಿ. ಕಂಪನಿಗಳು, ಸಂಘ ಸಂಸ್ಥೆಗಳೂ ಸೇರಿದಂತೆ ನಾನು ಸಹ ವೈಯುಕ್ತಿಕವಾಗಿ ಕಂಪ್ಯೂಟರ್‍ ಗಳನ್ನು ಒದಗಿಸುವ ಕೆಲಸ ಮಾಡುತ್ತೇನೆ. ಈಗಾಗಲೇ (Computer Education)  ಎಲ್ಲಾ ಶಾಲೆಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆಗೆ ಅನುದಾನ ನೀಡಿದ್ದು, ಶೀಘ್ರದಲ್ಲೇ ಈ ಕೆಲಸ ಸಹ ನಡೆಯಲಿದೆ. ನನ್ನ ಕ್ಷೇತ್ರದಲ್ಲಿ ಎಲ್ಲಾ ಮಕ್ಕಳು ವಿದ್ಯಾವಂತರಾಗಿ ಒಳ್ಳೆಯ ಸ್ಥಾನ ಗಳಿಸಬೇಕು ಎಂದರು.

ಬಳಿಕ ಸೋನೋ ವಿಷನ್ ಎಟೋಸ್ ಟೆಕ್ನಿಕಲ್ ಸರ್ವೀಸ್ ಪ್ರೈ. ಲಿಮಿಟೆಡ್ ನ ಮ್ಯಾನೇಜರ್‍ ಯೂಸಪ್ ಬಾಸಿತ್ ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಕಂಪ್ಯೂಟರ್‍ ಶಿಕ್ಷಣ (Computer Education)  ಸಿಗುವುದು ತುಂಬಾನೆ ಕಷ್ಟಕರವಾಗಿದೆ. ಆದ್ದರಿಂದ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ನಮ್ಮ ಕಂಪನಿ ವತಿಯಿಂದ ಈಗ ಕಂಪ್ಯೂಟರ್‍ ಗಳನ್ನು (Computer Education)  ವಿತರಣೆ ಮಾಡಿದ್ದೇವೆ. ಮತ್ತಷ್ಟು ಕಂಪ್ಯೂಟರ್‍ ಗಳು ಸರ್ಕಾರಿ ಶಾಲೆಗಳಿಗೆ ವಿತರಣೆ ಮಾಡಲಾಗುತ್ತದೆ ಎಂದರು.

Computer Distribution to govt schools 2

ಬಳಿಕ ಬಿಇಒ ಕೃಷ್ಣಪ್ಪ, ಪರಿಸರ ವೇದಿಕೆಯ ಗುಂಪು ಮರದ ಆನಂದ್ ಮಕ್ಕಳಿಗೆ (Computer Education) ಕಂಪ್ಯೂಟರ್‍ ಶಿಕ್ಷಣದ ಮಹತ್ವದ ಬಗ್ಗೆ ತಿಳಿಸಿದರು. ಈ ಸಮಯದಲ್ಲಿ ಪ.ಪಂ ಅಧ್ಯಕ್ಷ ವಿಕಾಸ್, ಉಪಾಧ್ಯಕ್ಷ ಗಂಗರಾಜು, ಸರ್ಕಲ್ ಇನ್ಸ್ ಪೆಕ್ಟರ್‍ ನಯಾಜ್ ಬೇಗ್, ಸರ್ಕಾರಿ ನೌಕರರ ಸಂಘದ ಕೆ.ವಿ.ನಾರಾಯಣಸ್ವಾಮಿ, ಕೃಷ್ಣಪ್ಪ, ಸಮಾಜ ಸೇವಕರಾದ ಹೋಟೆಲ್ ರಾಮಣ್ಣ, ಕೆ.ಎಸ್.ನಾರಾಯಣಸ್ವಾಮಿ, ಗೌತಮಬುದ್ದ ಫೌಂಡೇಷನ್ ನ ಗಂಗರಾಜು, ಟಿ.ಹೆಚ್.ಒ ಡಾ.ನರಸಿಂಹಮೂರ್ತಿ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಮುಖಂಡರುಗಳು ಹಾಜರಿದ್ದರು.

by Admin
by Adminhttp://ismkannadanews.com
Welcome to ISM News, if you want to contact us, then feel free to say anything about www.ismkannadanews.com. We'll appreciate your feedback.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles

error: Content is protected !!