ಅನೇಕರು ಮೊಬೈಲ್ ಅನ್ನು ಚಾರ್ಜಿಂಗ್ ಗೆ ಹಾಕಿ ಬಳಕೆ ಮಾಡುತ್ತಿರುವಾಗ ಪೋನ್ ಬ್ಲಾಸ್ಟ್ ಆಗಿದೆ ಎಂಬ ಸುದ್ದಿ ಕೇಳುತ್ತಲೇ ಇರುತ್ತೇವೆ. ಕೆಲವೊಮ್ಮೆ ಈ ಬ್ಲಾಸ್ಟ್ ಜೋರಾಗಿ ಸಂಭಂವಿಸಿ ಪ್ರಾಣಗಳನ್ನು ಸಹ ಕಳೆದುಕೊಂಡ ಬಗ್ಗೆ ಕೇಳಿರುತ್ತೇವೆ. ಚಾರ್ಜಿಂಗ್ ಹಾಕುವ ಸಮಯದಲ್ಲೂ ಈ ರೀತಿಯ ಘಟನೆಗಳು ಹೆಚ್ಚಾಗಿ ಸಂಭವಿಸುತ್ತಿರುತ್ತವೆ. ಆದರೆ ಚಾರ್ಜಿಂಗ್ ಹಾಕಿದಾಗ ಮೊಬೈಲ್ ಗಳು ಬ್ಲಾಸ್ಟ್ ಆಗಲು ಕಾರಣವಾದರೂ ಏನು, ಈ ಸಮಸ್ಯೆಯಿಂದ ಹೊರಬರಬೇಕಾದರೇ ಯಾವ ರೀತಿಯ ಕ್ರಮಗಳನ್ನು ಅನುಸರಿಬೇಕು ಎಂಬುದನ್ನು ಸಂಗ್ರಹಿಸಿದ ಮಾಹಿತಿಯನ್ನು ಈ ಸುದ್ದಿಯ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ.
ಸಾಮಾನ್ಯವಾಗಿ ಮೊಬೈಲ್ ಪೋನ್ ಗಳು ಬ್ಲಾಸ್ಟ್ ಆಗಲು ಓವರ್ ಚಾರ್ಜಿಂಗ್ ಪ್ರಮುಖ ಸಮಸ್ಯೆ (Tech News) ಎಂದು ಹೇಳಬಹುದಾಗಿದೆ. ಬಹುತೇಕ ಚಾರ್ಜರ್ ಗಳು ಮೊಬೈಲ್ ಬ್ಯಾಟರಿ ಪುಲ್ ಆದ ಕೂಡಲೇ ಚಾರ್ಜರ್ ನಲ್ಲಿರುವ ಸರ್ಕ್ಯೂಟ್ ತನ್ನಿಂದ ತಾನೆ ಆಫ್ ಆಗುತ್ತದೆ. ಆದರೆ ಸರ್ಕ್ಯೂಟ್ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಬ್ಯಾಟರಿ ಓವರ್ ಚಾರ್ಜ್ ಆಗುವುದು ಆರಂಭವಾಗುತ್ತದೆ. ಇದರಿಂದಾಗಿ ಬ್ಯಾಟರಿಯಲ್ಲಿ ಹೆಚ್ಚಾಗಿ ಶಾಖ ಉತ್ಪತ್ತಿಯಾಗುತ್ತದೆ. ಹೆಚ್ಚು ಸಮಯ ಇದು ಮುಂದುವರೆದರೇ ಬ್ಯಾಟಲಿ ಬ್ಲಾಸ್ಟ್ ಆಗಲು ಕಾರಣವಾಗುತ್ತದೆ. ಜೊತೆಗೆ ಪೋನ್ ಬ್ಲಾಸ್ಟ್ ಆಗಲು ಬ್ಯಾಟರಿಯ ಗುಣಮಟ್ಟದ ಕೊರತೆ ಸಹ ಒಂದು ಕಾರಣ ಎಂದು ತಜ್ಞರು ಹೇಳುತ್ತಾರೆ.
ಕಳಪೆ ಗುಣಮಟ್ಟದ ಬ್ಯಾಟರಿಗಳು ಕೊಂಚವೂ ಸುರಕ್ಷಿತವಲ್ಲ ಎಂದು ಹೇಳಲಾಗುತ್ತದೆ. ಬ್ಯಾಟರಿಗಳನ್ನು ಕಳಪೆ ಸಾಮಾಗ್ರಿಗಳಿಂದ ತಯಾರಿಸಿದರೇ ಬ್ಯಾಟರಿ ಬಿಸಿಯಾದ ಕೂಡಲೇ ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇನ್ನೂ ಚಾರ್ಜಿಂಗ್ ಹಾಕುವಾಗ ಮೊಬೈಲ್ ಎಲ್ಲಿ ಇಡಲಾಗುತ್ತದೆ ಎಂಬ ಅಂಶವೂ ಬ್ಯಾಟರಿ ಬ್ಲಾಸ್ಟ್ ಆಗಲು ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ. ಮೊಬೈಲ್ ಚಾರ್ಜ್ ಹಾಕುವಾಗ ತಲೆ ದಿಂಬಿನ ಕೆಳಗೆ, ಟಿವಿ, ಫ್ರಿಡ್ಜ್ ಗಳ ಮೇಲೆ ಇಡುವ ಕಾರಣ ಮೊಬೈಲ್ ನ ಶಾಖ ಜಾಸ್ತಿಯಾಗುತ್ತದೆ. ಈ ಕಾರಣದಿಂದಲೂ ಮೊಬೈಲ್ ಸಿಡಿಯುವ ಸಾಧ್ಯತೆಯಿರುತ್ತದೆ.
ಆದ್ದರಿಂದ ಮೊಬೈಲ್ ಬಳಕೆದಾರರು ಗುಣಮಟ್ಟದ ಚಾರ್ಜರ್ ಗಳನ್ನು ಬಳಕೆ ಮಾಡುವುದರಿಂದ ಬ್ಯಾಟರಿಗಳು ಬ್ಲಾಸ್ಟ್ ಆಗುವುದನ್ನು ತಪ್ಪಿಸಬಹುದಾಗಿದೆ. ಕ್ವಾಲಿಟಿ ಇಲ್ಲದಂತಹ ಚಾರ್ಜರ್ ಗಳನ್ನು ಬಳಕೆ ಮಾಡುವುದರಿಂದ ಬ್ಯಾಟರಿಗಳಿಗೆ ಹೆಚ್ಚು ವಿದ್ಯುತ್ ಪ್ರವಹಿಸುತ್ತದೆ. ಇದರಿಂದ ಬ್ಯಾಟರಿಯ ಶಾಖ ಹೆಚ್ಚಾಗಿ ಮೊಬೈಲ್ ಬ್ಲಾಸ್ಟ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ತಂತ್ರಜ್ಞರು ಹೇಳುತ್ತಾರೆ.