ಇಂದಿನ ಕಾಲದಲ್ಲಿ ಹಣಕಾಸು ವ್ಯವಹಾರಗಳಿಗಾಗಿ ಬ್ಯಾಂಕಿಂಗ್ ವ್ಯವಸ್ಥೆ ತುಂಬಾನೆ ಅನುಕೂಲಕರವಾಗಿದೆ. ಅದರಲ್ಲೂ ಬ್ಯಾಂಕ್ ಗೆ ಹೋಗದೆ ಹಣದ ವ್ಯವಹಾರಗಳನ್ನು ನಡೆಸಲು ATM ಕಾರ್ಡ್‌ಗಳನ್ನು ಬಳಕೆ ಮಾಡಲಾಗುತ್ತದೆ. ಅನೇಕರಿಗೆ ATM ಕಾರ್ಡ್‌ಗಳ ಉಪಯೋಗಗಳ ಬಗ್ಗೆ ಮಾಹಿತಿ ಕಡಿಮೆ ಇರಬಹುದು. ATM ನಲ್ಲಿ ಕೇವಲ ಹಣ ವಿತ್ ಡ್ರಾ ಮಾತ್ರವಲ್ಲದೇ ಮತಷ್ಟು ಉಪಯೋಗಗಳಿವೆ. ಈ ಸುದ್ದಿಯ ಮೂಲಕ ಅವುಗಳನ್ನು (ATM Card Benefits) ತಿಳಿಯಬಹುದಾಗಿದೆ.
- ಹಣ ವಿತ್ ಡ್ರಾ ಮಾಡಲು: ಗ್ರಾಹಕರು ತಮ್ಮ ಬ್ಯಾಂಕ್ ಗಳಿಂದ ಪಡೆದ ATM ಮೂಲಕ ಹಣ ವಿತ್ ಡ್ರಾ ಮಾಡಬಹುದು. ಇದೇ ಕಾರಣಕ್ಕಾಗಿಯೇ ಬಹುತೇಕರು ATM ಪಡೆಯುತ್ತಾರೆ. ಡೆಬಿಟ್ ಕಾರ್ಡ್ ಗಳನ್ನು ಬಳಸುವಾಗ, ನಿಮ್ಮ PIN ನೆನಪಿನಲ್ಲಿಟ್ಟುಕೊಳ್ಳಬೇಕು. ಹಣ ವಿತ್ ಡ್ರಾ ಜೊತೆಗೆ ಡಿಪಾಸಿಟ್ ಸಹ ಮಾಡುವ ಸೌಲಭ್ಯ ಕೆಲವೊಂದು ATM ಕೇಂದ್ರಗಳಲ್ಲಿರುತ್ತದೆ.
- ಖಾತೆಯ ಬ್ಯಾಲೆನ್ಸ್ ಪರಿಶೀಲನೆ: ಇನ್ನೂ ಗ್ರಾಹಕರು ತಮ್ಮ ಖಾತೆಯಲ್ಲಿ ಎಷ್ಟು ಹಣವಿದೆ, ಜೊತೆಗೆ ಮಿನಿ ಸ್ಟೇಟ್ ಮೆಂಟ್ ತೆಗೆದುಕೊಳ್ಳು ATM ಬಳಸಬಹುದಾಗಿದೆ. ತಮ್ಮ ಖಾತೆಯಲ್ಲಿರುವ ಬ್ಯಾಲೆನ್ಸ್ ಚೆಕ್ ಮಾಡಲು ಬ್ಯಾಂಕ್ ಗೆ ತೆರಳುವ ಬದಲಿಗೆ ಹತ್ತಿರದ ATM ಕೇಂದ್ರ ಕ್ಕೆ ಹೋಗಿ ಕಳೆದ 10 ದಿನಗಳಲ್ಲಿ ನಡೆದ ವಹಿವಾಡುಗಳನ್ನು ನೋಡಬಹುದು. ಜೊತೆಗೆ ಮಿನಿ ಸ್ಟೇಟ್ ಮೆಂಟ್ ಸಹ ಪಡೆದುಕೊಳ್ಳಬಹುದು.
- ಮನಿ ಟ್ರಾನ್ಸಫರ್ : SBI ಪ್ರಕಾರ ಡೆಬಿಟ್ ಕಾರ್ಡ್ ಬಳಸಿ ಒಂದು SBI ಖಾತೆಯಿಂದ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡಬಹುದು. ದಿನಕ್ಕೆ 40 ಸಾವಿರದವರೆಗೆ ಹಣ ವರ್ಗಾವಣೆ ಮಾಡಬಹುದು. SBI ಇದಕ್ಕಾಗಿ ಯಾವುದೇ ಶುಲ್ಕ ವಿಧಿಸುವುದಿಲ್ಲ. ನಿಮಗೆ ನಿಮ್ಮ ATM ಕಾರ್ಡ್, PIN ಹಾಗೂ ಸ್ವೀಕರಿಸುವವರ ಖಾತೆಯ ವಿವರಗಳನ್ನು ನಮೂದಿಸಿ ಹಣ ವರ್ಗಾವಣೆ ಮಾಡಬಹುದಾಗಿದೆ. ATM ಬಳಸಿ ಖಾತೆಗಳ ನಡುವೆ ಹಣ ವರ್ಗಾಯಿಸಿ. ನೀವು ಒಂದು ATM ಕಾರ್ಡ್‌ಗೆ 16 ಖಾತೆಗಳನ್ನು ಲಿಂಕ್ ಮಾಡಬಹುದು. ಇದರ ನಂತರ, ನೀವು ATMಗೆ ಭೇಟಿ ನೀಡಿ ಚಿಂತೆಯಿಲ್ಲದೆ ಹಣವನ್ನು ವರ್ಗಾಯಿಸಬಹುದು.
- ವಿಮಾ ಕಂತು ಪಾವತಿ: ATM ಮೂಲಕ ವಿಮಾ ಕಂತುಗಳನ್ನು ಪಾವತಿಸಬಹುದಾಗಿದೆ. HDFC, LIC ಹಾಗೂ SBI ಲೈಫ್ ಇನ್ಸುರೆನ್ಸ್ ಗಳನ್ನು ಪಾವತಿ ಮಾಡಬಹುದಾಗಿದೆ. ಈ ಸೌಲಭ್ಯದಡಿ ನೀವು ನಿಮ್ಮ ವಿಮಾ ಕಂತುಗಳನ್ನು ಪಾವತಿಸಬಹುದಾಗಿದೆ. ಇದಕ್ಕಾಗಿ ನಿಮ್ಮ ವಿಮಾ ಪಾಲಿಸಿ ಸಂಖ್ಯೆ, ATM ಕಾರ್ಡ್ ಹಾಗೂ PIN ಬೇಕಾಗುತ್ತದೆ.
- ಚೆಕ್ ಬುಕ್ ವಿನಂತಿ: ಸಾಮಾನ್ಯವಾಗಿ ಬ್ಯಾಂಕ್ ಗ್ರಾಹಕರು ಚೆಕ್ ಬುಕ್ ಬಳಸುತ್ತಾರೆ. ಈ ಚೆಕ್ ಬುಕ್ ಮುಗಿದರೇ ಮತ್ತೆ ಬ್ಯಾಂಕ್ ಗೆ ಹೋಗಿ ಪಡೆಯಬೇಕಾಗಿಲ್ಲ. ATM ಕೇಂದ್ರಕ್ಕೆ ಭೇಟಿ ನೀಡಿ ಹೊಸ ಚೆಕ್ ಬುಕ್ ವಿನಂತಿ ಮಾಡಬಹುದಾಗಿದೆ. ಬಳಿಕ ಬ್ಯಾಂಕ್ ನಲ್ಲಿ ನೀವು ನೊಂದಾಯಿಸಿದ ವಿಳಾಸಕ್ಕೆ ATM ತಲುಪಿಸಲಾಗುತ್ತದೆ. ಒಂದು ವೇಳೆ ನಿಮ್ಮ ವಿಳಾಸ ಬದಲಾಗಿದ್ದರೇ, ATM ನಲ್ಲಿ ಚೆಕ್ ಬುಕ್ ವಿನಂತಿ ಮಾಡುವಾಗ ವಿಳಾಸ ನವೀಕರಿಸಬಹುದು.
- ಮೊಬೈಲ್ ಬ್ಯಾಂಕಿಂಗ್ ಆಕ್ಟಿವೇಷನ್ : ಇತ್ತೀಚಿನ ದಿನಗಳ ಬ್ಯಾಂಕ್ ಗ್ರಾಹಕರು ಆನ್ ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಪಡೆಯಲು ಬಯಸುತ್ತಾರೆ. ಜೊತೆಗೆ ಬ್ಯಾಂಕ್ ಗಳೂ ಸಹ ಖಾತೆ ತೆರೆದ ಬಳಿಕ ಮೊಬೈಲ್ ಹಾಗೂ ಇಂಟರ್ ನೆಟ್ ಬ್ಯಾಂಕಿಂಗ್ ಸಕ್ರಿಯಗೊಳಿಸುತ್ತದೆ. ಮೊಬೈಲ್ ಬ್ಯಾಂಕಿಂಗ್ ಸಕ್ರೀಯಗೊಳಿಸಲು ನೀವು ATM ಕೇಂದ್ರಕ್ಕೆ ಭೇಟಿ ನೀಡಿ ಸಕ್ರೀಯಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು.