Sunday, August 31, 2025
HomeStateLokayukta: ಜನರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಸೂಕ್ತ ಮಾರ್ಗದರ್ಶನ ನೀಡಿ: ಆಂಟೋನಿ ಜಾನ್

Lokayukta: ಜನರೊಂದಿಗೆ ಸೌಜನ್ಯದಿಂದ ವರ್ತಿಸಿ, ಅವರ ಸೂಕ್ತ ಮಾರ್ಗದರ್ಶನ ನೀಡಿ: ಆಂಟೋನಿ ಜಾನ್

ವಿವಿಧ ಕೆಲಸಗಳ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಬರುವಂತಹ ಜನಸಾಮಾನ್ಯರೊಂದಿಗೆ ಸೌಜನ್ಯದಿಂದ ವರ್ತಿಸಿ, ಮಾಹಿತಿ ತಿಳಿಯದೇ ಇರುವಂತಹವರಿಗೆ ಸೂಕ್ತ ಮಾರ್ಗದರ್ಶನ ನೀಡಿ ಜನರ ಸೇವೆ ಮಾಡಬೇಕೆಂದು (Lokayukta) ಲೋಕಾಯುಕ್ತ ಎಸ್.ಪಿ. ಆಂಟೋನಿ ಜಾನ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುಡಿಬಂಡೆ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಪೊಲೀಸರ ವತಿಯಿಂದ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ (Lokayukta) ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು.

Lokayukta Meeting in Gudibande 1

ಕಚೇರಿಗಳಿಗೆ ತಮ್ಮ ಕೆಲಸಗಳಿಗಾಗಿ ಬರುವಂತಹವರು ಬಹುತೇಕರು ಬಡವರೇ ಆಗಿರುತ್ತಾರೆ. (Lokayukta) ಶ್ರೀಮಂತರು ಏಜೆಂಟ್ ಗಳ ಮೂಲಕ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ ಬಡವರು ಅವರೇ ಖುದ್ದು ಕಚೇರಿಗಳಿಗೆ ಬರುತ್ತಾರೆ. ಆದರೆ ಅವರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳಬೇಕು. ಕಚೇರಿಯಲ್ಲಿನ ಅಧಿಕಾರಿಗಳು ಇತರೆ (Lokayukta)  ಕೆಲಸಗಳ ನಿಮಿತ್ತ ಹೋದಾಗ ಕಚೇರಿಯಲ್ಲಿದ್ದ ಸಿಬ್ಬಂದಿ ಜನ ಸಾಮಾನ್ಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಸಿಬ್ಬಂದಿಗೆ ತಿಳಿಸಬೇಕು. ಸರ್ಕಾರಿ ಸೇವೆ ಎಂದರೇ ಜನರ ಸೇವೆ, ಜನರು ಕಟ್ಟುವ ತೆರಿಗೆಯಿಂದ ನಮಗೆ ವೇತನ ನೀಡುತ್ತಾರೆ. (Lokayukta) ಅದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಜೊತೆಗೆ ಮಾನವೀಯತೆಯನ್ನು ಸಹ ತೋರಬೇಕು. ಕೆಲಸದ ಒತ್ತಡ, ಸಿಬ್ಬಂದಿಯ ಕೊರತೆ, ಹೆಚ್ಚುವರಿ ಕೆಲಸವಿದ್ದರೂ ಸಹ ಅಧಿಕಾರಿಗಳು ತಾಳ್ಮೆಯನ್ನು ಕಳೆದುಕೊಳ್ಳದೇ ಜನರ ಕೆಲಸ ಮಾಡಿಕೊಳ್ಳಬೇಕು ಎಂದರು.

ಇನ್ನೂ ಸಭೆಯಲ್ಲಿ ಹೆಚ್ಚಾಗಿ ಕಂದಾಯ ಇಲಾಖೆ, (Lokayukta)  ತಾಲೂಕು ಪಂಚಾಯತಿ ಗೆ ಸಂಬಂಧಿಸಿದಂತಹ ದೂರುಗಳು ಸಲ್ಲಿಕೆಯಾದವು. ಈ ದೂರುಗಳನ್ನು ಸ್ವೀಕರಿಸಿದ (Lokayukta)  ಲೋಕಾಯುಕ್ತ ಎಸ್.ಪಿ. ಆಂಟೋನಿ ಸ್ಥಳದಲ್ಲಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಸರಿಯಾಗಿ ಆಡಳಿತ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಮುಂದಿನ ಸಭೆಯಲ್ಲಿ ಎಲ್ಲಾ ದೂರುಗಳು ಇತ್ಯರ್ಥವಾಗಿರಬೇಕು. (Lokayukta) ಜೊತೆಗೆ ಪ್ರತಿಯೊಂದು ಗ್ರಾಮದಲ್ಲೂ ಲೋಕಾಯುಕ್ತ ಕುಂದು ಕೊರತೆ ಸಭೆಯ ಬಗ್ಗೆ ಮಾಹಿತಿ ನೀಡಬೇಕು. ಈ ಸಂಬಂಧ ಅಧಿಕಾರಿಗಳು ಕ್ರಮ ವಹಿಸಬೇಕು. ಸಭೆಗೆ ಗೈರು ಹಾಜರಿಯಾದ ಅಧಿಕಾರಿಗಳಿಗೆ ನೊಟೀಸ್ ನೀಡುವುದಾಗಿ ಹಾಗೂ (Lokayukta) ಮುಂದಿನ ಸಭೆಗೆ ಪಿಡಿಒ ಹಾಗೂ ಗ್ರಾಮ ಲೆಕ್ಕಿಗರು ಕಡ್ಡಾಯವಾಗಿ ಹಾಜರಾಗಲು ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

Lokayukta Meeting in Gudibande 0

ಇನ್ನೂ (Lokayukta) ಸಭೆಯಲ್ಲಿ 27 ದೂರುಗಳು ಬಂದಿದ್ದು, ಈ ಪೈಕಿ ಕಂದಾಯ ಇಲಾಖೆ 17, ತಾಲೂಕು ಪಂಚಾಯತಿ 3, ಆಹಾರ, ಪಟ್ಟಣ ಪಂಚಾಯತಿ ಸೇರಿದಂತೆ ವಿವಿಧ ಇಲಾಖೆಗಳ ವಿರುದ್ದ ದೂರುಗಳು ಬಂದವು.  ಮುಂದಿನ ಸಭೆಯೊಳಗೆ ಎಲ್ಲಾ (Lokayukta) ದೂರುಗಳನ್ನುಇತ್ಯರ್ಥಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಭೆಯ ಬಳಿಕ ಲೋಕಾಯುಕ್ತ ಪೊಲೀಸರು ಲಂಚ ಪಡೆದುಕೊಳ್ಳುವುದು ಹಾಗೂ ನೀಡುವುದು ತಪ್ಪು ಎಂಬ (Lokayukta) ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಈ ವೇಳೆ (Lokayukta) ಲೋಕಾಯುಕ್ತ ಡಿ.ವೈ.ಎಸ್.ಪಿ. ದೇವೇಂದ್ರ ಕುಮಾರ್‍, ಇನ್ಸ್‌ಪೆಕ್ಟರ್ ಶಿವಪ್ರಸಾದ್, ತಹಸೀಲ್ದಾರ್‍ ಸಿಗ್ಬತ್ ವುಲ್ಲಾ, ತಾ.ಪಂ. ಇ.ಒ ಹೇಮಾವತಿ, ಕೃಷಿ ಇಲಾಖೆಯ ಕೇಶವರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಲಕ್ಷ್ಮೀಪತಿ ರೆಡ್ಡಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular