Thursday, December 4, 2025
HomeEntertainmentಬಾಲಿವುಡ್ ಸ್ಟಾರ್ ಗಳ ಜೊತೆಗೆ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾದ ಜೂನಿಯರ್ ಎನ್.ಟಿ.ಆರ್, ವೈರಲ್ ಆದ ವಿಡಿಯೋ….!

ಬಾಲಿವುಡ್ ಸ್ಟಾರ್ ಗಳ ಜೊತೆಗೆ ಡಿನ್ನರ್ ಪಾರ್ಟಿಯಲ್ಲಿ ಭಾಗಿಯಾದ ಜೂನಿಯರ್ ಎನ್.ಟಿ.ಆರ್, ವೈರಲ್ ಆದ ವಿಡಿಯೋ….!

RRR ಸಿನೆಮಾದ ಮೂಲಕ ಗ್ಲೋಬಲ್ ಸ್ಟಾರ್‍ ಆದ ಜೂನಿಯರ್‍ ಎನ್.ಟಿ.ಆರ್‍ ವಿಶ್ವದಾದ್ಯಂತ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ಸದ್ಯ ಅವರು ಬಾಲಿವುಡ್ ನ ಬಹುನಿರೀಕ್ಷಿತ ವಾರ್‍-2 ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಶೂಟಿಂಗ್ ನಲ್ಲಿ ಸಹ ಭಾಗಿಯಾಗಿದ್ದಾರೆ. ಸದ್ಯ ಶೂಟಿಂಗ್ ನಿಮಿತ್ತ ಅವರು ಮುಂಬೈನಲ್ಲಿದ್ದು, ಈ ನಡುವೆ ಅವರು ಬಾಲಿವುಡ್ ದೊಡ್ಡ ಸೆಲೆಬ್ರೆಟಿಗಳ ಜೊತೆ ಡಿನ್ನರ್‍ ನಲ್ಲಿ ಭಾಗಿಯಾಗಿದ್ದು, ಈ ಸಂಬಂಧ ಪೊಟೋಗಳು, ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.

Junior NTR in bollywood stars dinner party 1

ಬಾಲಿವುಡ್ ನ ಬಹುನಿರೀಕ್ಷಿತ ವಾರ್‍-2 ಸಿನೆಮಾದ ಶೂಟಿಂಗ್ ಗಾಗಿ ಜೂನಿಯರ್‍ ಎನ್.ಟಿ.ಆರ್‍ ಮುಂಬೈನಲ್ಲಿ ಮೊಕ್ಕಾಂ ಹೂಡಿದ್ದಾರೆ. ಅವರ ಪಾತ್ರಕ್ಕೆ ಸಂಬಂಧಿಸಿದ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು.  ಕಳೆದೆರಡು ದಿನಗಳ ಹಿಂದೆ ಶೂಟಿಂಗ್ ಮುಗಿದ ಬಳಿಕ ಹೋಟೆಲ್ ಗೆ ಹೋಗುತ್ತಿದ್ದಾಗ ಜೂನಿಯರ್‍ ಎನ್.ಟಿ.ಆರ್‍ ರವರ ಅನುಮತಿಯಿಲ್ಲದೇ ಪೊಟೋ ತೆಗೆಯಲು ಪೊಟೋಗ್ರಾಫರ್ಸ್ ಮುಂದಾಗಿದ್ದರು. ಈ ಕಾರಣದಿಂದ ಎನ್.ಟಿ.ಆರ್‍ ಅವರ ಮೇಲೆ ಸೀರಿಯಸ್ ಆಗಿದ್ದರು. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗಿತ್ತು. ಇದೀಗ ಬಾಲಿವುಡ್ ಸ್ಟಾರ್‍ ಸೆಲೆಬ್ರೆಟಿಗಳ ಜೊತೆಗೆ ಡಿನ್ನರ್‍ ಸವಿದಿರುವಂತಹ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಮುಂಬೈನ ಹೋಟೆಲ್ ಒಂದರಲ್ಲಿ ಜೂನಿಯರ್‍ ಎನ್.ಟಿ.ಆರ್‍, ಹೃತಿಕ್ ರೋಷನ್ ಹಾಗೂ ಆತನ ಗರ್ಲ್ ಫ್ರೆಂಡ್ ಸಭಾ ಆಜಾದ್, ಆಲಿಯಾ ಭಟ್-ರಣಬೀರ್‍ ಕಪೂರ್‍, ಬಾಲಿವುಡ್ ಬಡಾ ನಿರ್ಮಾಪಕ ಕರಣ್ ಜೋಹರ್‍ ರವರುಗಳು ಸೇರಿದಂತೆ ಅನೇಕ ಸ್ಟಾರ್‍ ಸೆಲೆಬ್ರೆಟಿಗಳು ಈ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಈ ಸಮಯದಲ್ಲಿ ಸಾಕಷ್ಟು ಅಭಿಮಾನಿಗಳೂ ಸಹ ಜಮಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಕಾರನ್ನು ಏರಲು ಸಹ ತುಂಬಾನೆ ಕಷ್ಟಪಡುವಂತಾಗಿತ್ತು. ರಣಬೀರ್‍ ಕಪೂರ್‍ ತಮ್ಮ ಪತ್ನಿ ಆಲಿಯಾ ಭಟ್ ರನ್ನು ತುಂಬಾ ಎಚ್ಚರಿಕೆಯಿಂದ ಕಾರಿನವರೆಗೂ ಬಿಟ್ಟರು. ಈ ವೇಳೆ ಎಲ್ಲರೂ ಜೂನಿಯರ್‍ ಎನ್.ಟಿ.ಆರ್‍ ಎಂದು ಜೋರಾಗಿ ಕೂಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular