Thursday, January 29, 2026
HomeEntertainmentರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ...

ರಾಮಾಯಣದಲ್ಲಿ ಸೀತೆಯ ಪಾತ್ರದಲ್ಲಿ ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ, ಬಾಯ್ ಕಟ್ ಸಾಯಿಪಲ್ಲವಿ ಎಂದ ನೆಟ್ಟಿಗರು, ಯಾಕೆ ಗೊತ್ತಾ?

ಬಾಲಿವುಡ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ರಾಮಾಯಣ ಸಿನೆಮಾದ ಶೂಟಿಂಗ್ ಈಗಾಗಲೇ ಶುರುವಾಗಿದೆ. ಈ ಸಿನೆಮಾದಲ್ಲಿ ರಣಬೀರ್‍ ಕಪೂರ್‍ ರಾಮನ ಪಾತ್ರದಲ್ಲಿ ಹಾಗೂ ಸಾಯಿಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನದಲ್ಲಿ ಈ ಸಿನೆಮಾ ಸೆಟ್ಟೇರಿದ್ದು, ಶೂಟಿಂಗ್ ಭರದಿಂದ ಸಾಗುತ್ತಿದೆ. ಇದೀಗ ಸಾಯಿಪಲ್ಲವಿಯ ಈ ಸಿನೆಮಾದಲ್ಲಿ ನಟಿಸುತ್ತಿರುವ ಕಾರಣದಿಂದ ಆಕೆಯ ವಿರುದ್ದ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ.

nettizens rejects saipallavi ramayana 1

ಬಾಲಿವುಡ್ ನ ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಈ ಸಿನೆಮಾವನ್ನು ಭಾರಿ ನಿರೀಕ್ಷೆಯಿಂದ ಸೆಟ್ಟೇರಿಸಿದ್ದಾರೆ. ಭಾರಿ ಬಜೆಟ್ ನೊಂದಿಗೆ ಈ ಸಿನೆಮಾ ಮೂರು ಭಾಗಗಳಾಗಿ ತೆರೆಕಾಣಲಿದೆ. ಕೆಲವು ದಿನಗಳ ಹಿಂದೆಯಷ್ಟೆ ಸಿನೆಮಾದ ಶೂಟಿಂಗ್ ಸಹ ಆರಂಭವಾಗಿದ್ದು, ಶೂಟಿಂಗ್ ಸೆಟ್ ನಿಂದ ಕೆಲವೊಂದು ಪೊಟೋಗಳು ಸಹ ಬಿಡುಗಡೆಯಾಗಿತ್ತು. ನಟಿ ಲಾರಾ ದತ್ತ ಹಾಗೂ ನಟ ಅರುಣ್ ಗೊವಿಲ್ ರವರು ಈ ಶೂಟಿಂಗ್ ನಲ್ಲಿ ಭಾಗಿಯಾಗಿದ್ದು, ಅವರ ಪೊಟೋಗಳು ಲೀಕ್ ಆಗಿತ್ತು. ಇದೀಗ ಸೀತಾ ಹಾಗೂ ರಾಮನ ಪಾತ್ರಗಳು ಲೀಕ್ ಆಗಿದೆ. ಸಾಯಿಪಲ್ಲವಿ ಸೀತೆಯ ಪಾತ್ರದಲ್ಲಿ ತುಂಬಾ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಅದೇ ಮಾದರಿಯಲ್ಲಿ ರಾಮನಾಗಿ ರಣಬೀರ್‍ ಸಹ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಲ್ಲಿ ಗೋಲ್ಡನ್ ಟೆಂಪಲ್ ಸಹ ಕಾಣಿಸಿತ್ತು. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿವೆ.

nettizens rejects saipallavi ramayana 0

ಇದೀಗ ಮತ್ತೊಂದು ಸುದ್ದಿ ಈ ಸಿನೆಮಾದ ಬಗ್ಗೆ ಕೇಳಿಬರುತ್ತಿದೆ. ನ್ಯಾಚುರಲ್ ಬ್ಯೂಟಿ ಸಾಯಿಪಲ್ಲವಿ ರಾಮಾಯಣ ಸಿನೆಮಾದಲ್ಲಿ ಸೀತೆಯ ಪಾತ್ರದಲ್ಲಿ ನಟಿಸುತ್ತಿರುವ ಕಾರಣದಿಂದ ನೆಟ್ಟಿಗರು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ದಿ ಕಾಶ್ಮೀರಿ ಫೈಲ್ಸ್ ಸಿನೆಮಾ ಬಂದಾಗ ಸಿನೆಮಾದ ಬಗ್ಗೆ ಮಾತನಾಡುತ್ತಾ ಆಕೆ ಹಿಂದೂ ವಿರೋಧಿ ಹೇಳಿಕೆಯನ್ನು ನೀಡಿ ಭಾರಿ ವಿರೋಧ ಕಟ್ಟಿಕೊಂಡಿದ್ದರು. ಬಳಿಕ ಈ ಕುರಿತು ಆಕೆ ಕ್ಷಮೆ ಸಹ ಕೇಳಿದ್ದರು. ಹಿಂದೂ ವಿರೋಧಿ ಹೇಳಿಕೆ ನೀಡಿದ ಸಾಯಿಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುವುದು ತಮಗೆ ಇಷ್ಟವಿಲ್ಲ ಎಂದು ಸಿನೆಮಾವನ್ನು ಬ್ಯಾನ್ ಮಾಡಬೇಕು ಎಂದು ಅನೇಕರು ಸೋಷಿಯಲ್ ಮಿಡಿಯಾ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

by ISM Kannada News Deskhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular