ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಗ್ರಾಮದ ಬಳಿ ಸತ್ಯ ಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಯ (Sri Sathya Sai Sarla Memorial Hospital) ವತಿಯಿಂದ ಪ್ರತಿಯೊಬ್ಬರಿಗೂ ಉಚಿತವಾಗಿ ಆರೋಗ್ಯ ಸೇವೆ ನೀಡುತ್ತಿದ್ದು, ಈ ಸೇವೆ ಮತಷ್ಟು ವಿಸ್ತಾರಗೊಳ್ಳುತ್ತಿದೆ. ಅವರ ಈ ಜನಪರ ಸೇವೆ ಅನೇಕ ಬಡವರಿಗೆ ಉಪಯೋಗವಾಗಿದೆ ಎಂದು ಸೋಮೇನಹಳ್ಳಿ ಗ್ರಾಮದ ಮುಖಂಡ ಅಶ್ವತ್ಥಪ್ಪ ಅಭಿಪ್ರಾಯಪಟ್ಟರು.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಸೋಮೇನಹಳ್ಳಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಸತ್ಯ ಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಯ ವತಿಯಿಂದ ಹೊಸದಾಗಿ ಆರಂಭಿಸಿದ ಸಾಯಿ ಸ್ವಾಸ್ಥ್ಯ ಕ್ಲಿನಿಕ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸೋಮೇನಹಳ್ಳಿ ಗ್ರಾಮದ ಮುಖಂಡ ಅಶ್ವತ್ಥಪ್ಪ ಇಂದಿನ ಕಾಲದಲ್ಲಿ ಆರೋಗ್ಯ ಸೇವೆ ತುಂಬಾನೆ ದುಬಾರಿಯಾಗಿದೆ ಎಂದು ಹೇಳಬಹುದು. ಆದರೆ ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿ ಗ್ರಾಮದಲ್ಲಿರುವ ಸತ್ಯ ಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಯ ವತಿಯಿಂದ ಉಚಿತವಾಗಿ ಅನೇಕ ರೋಗಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ನಮ್ಮ ಗ್ರಾಮ ಪಂಚಾಯತಿಯಲ್ಲಿ ಸ್ವಾಸ್ಥ್ಯ ಕ್ಲಿನಿಕ್ ಸೆಂಟರ್ ತೆರೆದಿದ್ದು, ಇದರಿಂದ ನಮ್ಮ ಸ್ಥಳೀಯರಿಗೆ ಅನುಕೂಲವಾಗಲಿದೆ. ನಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈಗಾಗಲೇ ಸರ್ಕಾರಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗಿತ್ತು. ಕೆಲವೊಂದು ಕಾರಣಗಳಿಂದ ಅದು ತಡವಾಗುತ್ತಿದೆ. ಇದೀಗ ಸತ್ಯ ಸಾಯಿ ಆಸ್ಪತ್ರೆಯವರು ಸ್ವಾಸ್ಥ್ಯ ಕ್ಲಿನಿಕ್ ಆರಂಭವಾಗಿರುವುದು ನಮಗೆ ತುಂಬಾನೆ ಅನುಕೂಲವಾಗಲಿದೆ ಎಂದರು.
ಬಳಿಕ ಸತ್ಯಸಾಯಿ ಆಶ್ರಮದ ಪ್ರಭು ಮಾತನಾಡಿ, ಗ್ರಾಮೀಣ ಭಾಗದ ಜನತೆಗೆ ಉಚಿತ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಸತ್ಯ ಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಯ ವತಿಯಿಂದ ಸ್ವಾಸ್ಥ್ಯ ಕ್ಲಿನಿಕ್ ಆರಂಭಿಸಲಾಗುತ್ತದೆ. ಈ ಕ್ಲಿನಿಕ್ ಮೂಲಕ ಗ್ರಾಮೀಣ ಭಾಗದ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡಲಾಗುತ್ತದೆ. ಸ್ಥಳೀಯ ಜನರು ತಮ್ಮ ಆರೋಗ್ಯ ಸಮಸ್ಯೆಗಳ ಬಗ್ಗೆ ಈ ಕ್ಲಿನಿಕ್ ಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಒಂದು ವೇಳೆ ನಿಮಗೆ ಗಂಭೀರ ಸಮಸ್ಯೆಯಿದ್ದರೇ ಮುದ್ದೇನಹಳ್ಳಿ ಸತ್ಯ ಸಾಯಿ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ ಎಂದರು.
ಈ ವೇಳೆ ಸೋಮೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಮಂಗಳಮ್ಮ, ಸತ್ಯಸಾಯಿ ಆಸ್ಪತ್ರೆಯ ಮಂಜುನಾಥ್, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ಸ್ವಾಸ್ಥ್ಯ ಕ್ಲಿನಿಕ್ ಸಿಬ್ಬಂದಿಯಾದ ಶಿರೀಷಾ ಹಾಜರಿದ್ದರು.