ಇಂದಿನ ಜಗತ್ತಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹೇರಳವಾದ ಅವಕಾಶಗಳಿವೆ. ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಸಂಗ ಮಾಡಿದವರಿಗೆ ಭರ್ಜರಿ ಉದ್ಯೋಗಾವಕಾಶಗಳು ಸಹ ಇದೆ. ಅದರಲ್ಲೂ ವಿದೇಶಗಳಲ್ಲೂ ಸಹ ಹೆಚ್ಚಿನ ಅವಕಾಶಗಳು ಇದೆ ಎಂದೇ ಹೇಳಬಹುದಾಗಿದೆ. ವಿದೇಶದಲ್ಲಿ ಕೆಲಸ ಮಾಡಲು ಬಯಸುವಂತಹವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ. ವಿದೇಶದಲ್ಲಿ ಕೆಲಸ ಮಾಡಲು ಆಸಕ್ತಿ ಇದ್ದರೇ ಅಂತಹವರಿಗೆ ಯುಕೆಯಲ್ಲಿ ನರ್ಸಿಂಗ್ ಹುದ್ದೆಗಳಿವೆ. ಅರ್ಜಿ ಹೇಗೆ ಸಲ್ಲಿಸಬೇಕು. ವೇತನ ಎಷ್ಟಿರಲಿದೆ ಎಂಬ ಮಾಹಿತಿಯನ್ನು ಈ ಮುಂದೆ ತಿಳಿಸಲಾಗಿದೆ.
ನರ್ಸಿಂಗ್ ಪೂರ್ಣಗೊಳಿಸಿರುವಂತಹ ಅನೇಕರಿಗೆ ಇದೊಂದು ಒಳ್ಳೆಯ ಅವಕಾಶ ಎಂದೇ ಹೇಳಬಹುದು. ನರ್ಸ್‌ಗಳಿಗೆ ಸೂಪರ್ ಜಾಬ್ ಆಫರ್ ಇಲ್ಲಿದೆ. ಕೈತುಂಬಾ ಸಂಬಳ ಸೇರಿದಂತೆ ಹಲವು ಸೌಲಭ್ಯಗಳನ್ನು ಈ ಹುದ್ದೆಯಲ್ಲಿ ಪಡೆಯಬಹುದಾಗಿದೆ. ಯುನೈಟೆಡ್ ಕಿಂಗ್ ಡಮ್ ನಲ್ಲಿ ನರ್ಸಿಂಗ್ ಕೆಲಸಕ್ಕೆ ನೇಮಕಾತಿ ನಡೆಯುತ್ತಿದೆ. ಈ ಹುದ್ದೆಗೆ ಆಯ್ಕೆಯಾದವರಿಗೆ ಬರೊಬ್ಬರಿ 40 ಲಕ್ಷದವರೆಗೆ ಸಂಬಳ ಸಿಗಲಿದೆ. ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ IELTS/OET, CBT, NMC ಅರ್ಜಿ ಫೀಸ್, ವೀಸಾ, ಫ್ಲೈಟ್ ಟಿಕೆಟ್‌ಗಳಿಗೆ ರಿಫಂಡ್ ಕೂಡ ಇದೆ. ನೋರ್ಕಾ ರೂಟ್ಸ್ ಎಂಬ ಸಂಸ್ಥೆ ಈ ನೇಮಕಾತಿಯನ್ನು ಮಾಡುತ್ತಿದೆ.
ವಿದ್ಯಾರ್ಹತೆ: ನರ್ಸಿಂಗ್‌ನಲ್ಲಿ ಡಿಗ್ರಿ ಅಥವಾ ಡಿಪ್ಲೊಮಾ ಮಾಡಿರೋರು ಅರ್ಜಿ ಹಾಕಬಹುದು. ಕನಿಷ್ಠ ಆರು ತಿಂಗಳು ಕೆಲಸದ ಅನುಭವ ಇರಬೇಕು. IELTS 7 (ರೈಟಿಂಗ್‌ನಲ್ಲಿ 6.5) ಅಥವಾ OET B (ರೈಟಿಂಗ್‌ನಲ್ಲಿ C+) ಬೇಕು. NMC ರಿಜಿಸ್ಟ್ರೇಷನ್‌ಗೆ ಅರ್ಹತೆ ಹೊಂದಿರಬೇಕು. IELTS/OET ಸರ್ಟಿಫಿಕೇಟ್ 2025 ನವೆಂಬರ್ 15ರವರೆಗೆ ವ್ಯಾಲಿಡ್ ಇರಬೇಕು.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತರು www.norkaroots.org ಅಥವಾ www.nifl.norkaroots.org ವೆಬ್‌ಸೈಟ್ ಗೆ ಭೇಟಿ ನಿಡಬೇಕು. CV ಮತ್ತು IELTS/OET ಮಾರ್ಕ್ಸ್ ಕಾರ್ಡ್ ಜೊತೆ ಅಕ್ಟೋಬರ್ 25ರೊಳಗೆ ಅರ್ಜಿ ಹಾಕಿ. ಆಯ್ಕೆಯಾದವರನ್ನ 2025 ಮಾರ್ಚ್ ನಂತರ ನೇಮಕ ಮಾಡಲಾಗುತ್ತದೆ. ಅರ್ಜಿ ಹಾಕುವಾಗ ಸೂಕ್ತ ದಾಖಲೆಗಳನ್ನು ಲಗತ್ತಿಸಬೇಕು. ವಿವರಗಳನ್ನು ಭರ್ತಿ ಮಾಡಬೇಕು. IELTS/OET, CBT, NMC ಅರ್ಜಿ ಫೀಸ್, ವೀಸಾ, ಫ್ಲೈಟ್ ಟಿಕೆಟ್‌ಗಳಿಗೆ ರಿಫಂಡ್ ಸೌಲಭ್ಯ ಇದೆ. ಏರ್‌ಪೋರ್ಟ್‌ನಿಂದ ಫ್ರೀ ಟ್ರಾವೆಲ್. ಒಂದು ತಿಂಗಳು ಫ್ರೀ ವಸತಿ. OSCE ಪರೀಕ್ಷೆ ಖರ್ಚು ಕೂಡ ಯುಕೆ ನೀಡಲಿದೆ. ಉತ್ತಮ ಪಾವತಿ, ಇತರ ಸೌಲಭ್ಯ, ಕನಿಷ್ಠ ಗಂಟೆ ಕೆಲಸ ಸೇರಿದಂತೆ ಉತ್ತಮ ಕೆಲಸದ ವಾತಾವರಣ ಕೂಡ ಇರಲಿದೆ.
ವೇತನ ವಿವರ: NMC ರಿಜಿಸ್ಟ್ರೇಷನ್ ಮೊದಲು £26,928 (₹30 ಲಕ್ಷ) ಸಂಬಳ. NMC ರಿಜಿಸ್ಟ್ರೇಷನ್ ಆದ್ಮೇಲೆ £30,420 ರಿಂದ £37,030 ವರೆಗೆ (₹40 ಲಕ್ಷ) ಸಂಬಳ. 5 ವರ್ಷಗಳಿಗೆ ₹5.74 ಲಕ್ಷ ಫೈನಾನ್ಶಿಯಲ್ ಅಸಿಸ್ಟೆನ್ಸ್ ಕೂಡ ಇದೆ. ಹೆಚ್ಚಿನ ಮಾಹಿತಿಗೆ ನೋರ್ಕಾ ಗ್ಲೋಬಲ್ ಕಾಲ್ ಸೆಂಟರ್‌ಗೆ 1800 425 3939 ಅಥವಾ +91-8802 012 345 ನಂಬರ್‌ಗೆ ಕಾಲ್ ಮಾಡಿ ಮಾಹಿತಿ ಪಡೆಯಬಹುದು.
ಅಭ್ಯರ್ಥಿಗಳಿಗೆ ಮುಖ್ಯ ಸೂಚನೆ: ಇನ್ನೂ ನರ್ಸಿಂಗ್ ನೇಮಕಾತಿ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಯಲ್ಲಿ ಕೆಲವೊಂದು ನಕಲಿ ಏಜೆನ್ಸಿಗಳೂ ಸಹ ಇರುತ್ತವೆ. ಅಂತಹ ನಕಲಿ ಏಜೆನ್ಸಿಗಳ ಮೊರೆ ಹೋಗಿ ಅಥವಾ ನಕಲಿ ವೆಬ್ ಸೈಟ್ ಗಳಲ್ಲಿ ನೊಂದಾಯಿಸಿಕೊಂಡು ಮೋಸ ಹೋಗಬೇಡಿ. ಏಜೆನ್ಸಿಗಳ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸುವುದು ಸೂಕ್ತ.