Sunday, August 31, 2025
HomeNationalHimachal Pradesh: ಹಿಮಾಚಲ ಪ್ರದೇಶದಲ್ಲಿ ಹೊಸ ತೆರಿಗೆಯಂತೆ, ಮನೆಯ ಟಾಯ್ಲೆಟ್ ಗೂ ಟ್ಯಾಕ್ಸ್ ಅಂತೆ?

Himachal Pradesh: ಹಿಮಾಚಲ ಪ್ರದೇಶದಲ್ಲಿ ಹೊಸ ತೆರಿಗೆಯಂತೆ, ಮನೆಯ ಟಾಯ್ಲೆಟ್ ಗೂ ಟ್ಯಾಕ್ಸ್ ಅಂತೆ?

ಸರ್ಕಾರಗಳು ವಿವಿಧ ರೀತಿಯ ತೆರಿಗೆಗಳನ್ನು ಹಾಕುತ್ತಾರೆ. ರಸ್ತೆ, ನೀರು ಸೇರಿದಂತೆ ಹಲವು ವಿಚಾರಗಳಿಗೆ ಟ್ಯಾಕ್ಸ್ ಹಾಕುತ್ತಾರೆ. ಕೆಲವೊಂದು ಕಡೆ ಮನೆಯಿಂದ ಹೊರ ಹಾಕುವ ಕಸದ ಮೇಲೂ ತೆರಿಗೆ ಹಾಕುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಸುದ್ದಿ ಕೇಳಿ ನೀವೂ ಶಾಕ್ ಆಗಬಹುದು. ಮನೆಯಲ್ಲಿರುವ ಟಾಯ್ಲೆಟ್ ಗಳ ಮೇಲೆ ತೆರಿಗೆ ವಿಧಿಸಲು ಹಿಮಾಚಲ ಪ್ರದೇಶ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಹಿಮಾಚಲ ಪ್ರದೇಶ (Himachal Pradesh) ಜನರ ಮನೆಯಲ್ಲಿರುವ ಟಾಯ್ಲೆಟ್ ಗಳ ಮೇಲೆ ತೆರಿಗೆ ವಿಧಿಸಲು ಅಧಿಸೂಚನೆ ನೀಡಿದ್ದು. ಈ ವಿಚಾರ ಅಚ್ಚರಿಗೆ ಕಾರಣವಾಗಿದೆ. ಜೊತೆಗೆ ಉಚಿತ ಯೋಜನೆಗಳಿಂದ ಹಿಮಾಚಲ ಪ್ರದೇಶಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.

Himachal Pradesh Govt Imposes Toilet Seat Tax 0

ಹಿಮಾಚಲ ಪ್ರದೇಶದಲ್ಲಿ ಆರ್ಥಿಕ ಸಂಕಷ್ಟ ಸೃಷ್ಟಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮನೆಯಲ್ಲಿರುವ ಟಾಯ್ಲೆಟ್ ಗಳಿಗೆ ಟ್ಯಾಕ್ಸ್ ವಿಧಿಸಲು ಕಾನೂನು ಜಾರಿಗೆ ಬಂದಿದೆ ಎನ್ನಲಾಗಿದೆ. ಹಿಮಾಚಲ ಪ್ರದೇಶದ ಮನೆಯಲ್ಲಿರುವ ಟಾಯ್ಲೆಟ್ ಗಳ ಮೇಲೆ ಸರ್ಕಾರ ತೆರಿಗೆ ವಿಧಿಸಲು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್‍ ಸಿಂಗ್ ಸುಖು ನೇತೃತ್ವದ ಕಾಂಗ್ರೇಸ್ ಸರ್ಕಾರ ಅಧಿಸೂಚನೆ ನೀಡಿದೆ. ಈ ಭಾಗದಲ್ಲಿರುವ ಪ್ರತಿ ಟಾಯ್ಲೆಟ್ ಮೇಲೆ 25 ರೂಪಾಯಿ ತೆರಿಗೆ ವಿಧಿಸಲು ಆದೇಶ ನೀಡಲಾಗಿದೆ. ಈ ಆದೇಶದಂತೆ ಇನ್ನು ಮುಂದೆ ಹಿಮಾಚಲ ಪ್ರದೇಶದಲ್ಲಿ ಪ್ರತಿ ತಿಂಗಳು ಪ್ರತಿಯೊಂದು ಟಾಯ್ಲೆಟ್ ಗೆ 25 ರೂಪಾಯಿ ತೆರಿಗೆ ಕಟ್ಟಬೇಕು. ಒಳಚರಂಡಿ ಬಿಲ್ ಜೊತೆಗೆ ಟಾಯ್ಲೆಟ್ ಬಿಲ್ ಸಹ ಜಲಶಕ್ತಿ ಇಲಾಖೆಗೆ ಪಾವತಿಸಬೇಕು ಎಂದು ತಿಳಿದುಬಂದಿದೆ.

ಇನ್ನೂ ಹಿಮಾಚಲ ಪ್ರದೇಶದಲ್ಲಿ ನೀರಿನ ಬಿಲ್ ಜೊತೆಗೆ ಶೇ.30 ರಷ್ಟು ಒಳಚರಂಡಿ ಬಿಲ್ ಸಹ ನೀಡಬೇಕಂತೆ. ನಗರ ಪ್ರದೇಶದ ಎಲ್ಲಾ ಉಪವಿಭಾಗಗಳಿಗೂ ಈ ಆದೇಶವನ್ನು ಹಿಮಾಚಲ ಪ್ರದೇಶ ಸರ್ಕಾರ ಹೊರಡಿಸಿದೆ. ಈ ಹಿಂದೆ ಈ ಭಾಗದಲ್ಲಿ ನೀರಿನ ಬಿಲ್ ಸಹ ಇರಲಿಲ್ಲ. ಇದೀಗ ಪ್ರತಿಯೊಂದು ನೀರಿನ ಸಂಪರ್ಕಕ್ಕೂ ಪ್ರತಿ ಮಾಹೆ ನೂರು ರೂಪಾಯಿ ಬಿಲ್ ಪಾವತಿ ಮಾಡಬೇಕಿದೆ. ಅಕ್ಟೋಬರ್‍ ಮಾಹೆಯಿಂದಲೇ ನೀರಿನ ಬಿಲ್ ನೀಡಲು ರಾಜ್ಯ ಸರ್ಕಾರ ಆದೇಶ ನೀಡಿದೆ ಎಂದು ತಿಳಿದುಬಂದಿದೆ.

ನಿರ್ಮಲಾ ಸೀತಾರಾಮನ್  ರವರ ಟ್ವೀಟ್ ಇಲ್ಲಿದೆ ನೋಡಿ: https://x.com/nsitharaman/status/1842074706482204691

ಇನ್ನೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಿಮಾಚಲ ಪ್ರದೇಶದ ಈ ಆದೇಶದ ವಿರುದ್ದ ಕಿಡಿಕಾರಿದ್ದಾರೆ. ಈ ಕುರಿತು ತಮ್ಮ ಎಕ್ಸ್ (ಟ್ವಿಟರ್‍) ಖಾತೆಯಲ್ಲಿ ಪೋಸ್ಟ್ ಮೂಲಕ ಆಕ್ರೋಷ ಹೊರಹಾಕಿದ್ದಾರೆ. ಇದು ನಿಜವೇ, ಇದನ್ನು ನಂಬಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಚ ಭಾರತ್ ಆಂದೋಲನ ನಡೆಸುತ್ತಿದ್ದಾರೆ. ಆದರೆ ಹಿಮಾಚಲ ಪ್ರದೇಶದ ಕಾಂಗ್ರೇಸ್ ಸರ್ಕಾರ ಮಾತ್ರ ಟಾಯ್ಲೆಟ್ ಮೇಲೂ ತೆರಿಗೆ ಹಾಕುತ್ತಿದೆ. ಕಾಂಗ್ರೇಸ್ ಆಡಳಿತದ ಅವಧಿಯಲ್ಲಿ ಉತ್ತಮ ಶೌಚಾಲಯದ ವ್ಯವಸ್ಥೆ ಸಹ ನೀಡಲಿಲ್ಲ. ಇದೊಂದು ದೇಶಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular