ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ಮಾಹೆ ಮನೆಯ ಯಜಮಾನಿಗೆ 2000 ಹಣ ಜಮೆ ಮಾಡಲಾಗುತ್ತಿತ್ತು. ಆದರೆ ಕಳೆದೆರಡು ತಿಂಗಳಿಂದ ಗೃಹಲಕ್ಷ್ಮೀ ಮೊತ್ತ ಜಮೆ ಆಗಿರಲಿಲ್ಲ. ಇದೀಗ ದಸರಾ ಹಬ್ಬದ ಗಿಫ್ಟ್ ಎಂಬಂತೆ ಶೀಘ್ರದಲ್ಲೇ ಎರಡು ತಿಂಗಳ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಗೃಹಲಕ್ಷ್ಮೀ ಬಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ಗುಡ್ ನ್ಯೂಸ್ ಕುರಿತು ಮುಂದೆ ತಿಳಿಸಲಾಗಿದೆ.
ಸದ್ಯ ನವರಾತ್ರಿ ಸಂಭ್ರಮ ಎಲ್ಲಾ ಕಡೆ ಮನೆ ಮಾಡಿದೆ. ಒಂಬತ್ತು ದಿನಗಳ ಕಾಲ ದಸರಾ ಹಬ್ಬವನ್ನು ಎಲ್ಲಾ ಕಡೆ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ದಸರಾ ಹಬ್ಬಕ್ಕೆ ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಒಂದನ್ನು ರಾಜ್ಯ ಸರ್ಕಾರ ನೀಡಿದೆ. ಗೃಹಲಕ್ಷ್ಮೀ ಯೋಜನೆಯಡಿ ಇಲ್ಲಿಯವರೆಗೂ ಬರೋಬ್ಬರಿ 1 ಕೋಟಿ 24 ಲಕ್ಷಕ್ಕೂ ಅಧಿಕ ಮನೆಯ ಯಜಮಾನಿಯರು ಗೃಹಲಕ್ಷ್ಮೀ ಯೋಜನೆಯಡಿ ನೊಂದಣಿ ಮಾಡಿಕೊಂಡಿದ್ದಾರೆ. ಅದರಂತೆ ಇಲ್ಲಿಯವರೆಗೂ ನೊಂದಣಿಯಾದ ಗೃಹಲಕ್ಷ್ಮೀಯರಿಗೆ 26 ಸಾವಿರ ಅವರ ಖಾತೆಗೆ ಜಮೆಯಾಗಿದೆ. ಆದರೆ ಕಳೆದ 2 ತಿಂಗಳಿಂದ (ಜುಲೈ ಹಾಗೂ ಆಗಸ್ಟ್) ಹಣ ಜಮೆಯಾಗಿರಲಿಲ್ಲ. ಕೆಲವೊಂದು ತಾಂತ್ರಿಕ ಕಾರಣಗಳಿಂದ ಹಣ ಜಮೆಯಾಗಿಲ್ಲ ಎಂದು ಹೇಳಲಾಗಿದ್ದು, ಇದೀಗ ಜುಲೈ ಹಾಗೂ ಆಗಸ್ಟ್ ಎರಡೂ ಕಂತಿನ (Gruha Lakshmi) ಹಣ ದಸರಾ ಹಬ್ಬದ ಸಮಯದಲ್ಲೇ ಜಮೆಯಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಅವರು, ಜುಲೈ ಹಾಗೂ ಆಗಸ್ಟ್ ಮಾಹೆಯ ಗೃಹಲಕ್ಷ್ಮೀ ಕಂತಿನ ಹಣ ಹಾಕಿಯೇ ಬೆಳಗಾವಿಗೆ ಬಂದಿದ್ದೇನೆ. ಜುಲೈ ತಿಂಗಳ ಕಂತಿನ ಹಣ ಅ.7 ರಂದು ಹಾಗೂ ಆಗಸ್ಟ್ ತಿಂಗಳ ಹಣವನ್ನು ಅ.9 ರಂದು ಜಮೆ ಮಾಡಲಾಗುತ್ತದೆ. ಎರಡು ದಿನದ ಅಂತರದಲ್ಲಿ ಒಟ್ಟು ನಾಲ್ಕು ಸಾವಿರ ಮೊತ್ತವನ್ನು ಜಮೆ ಮಾಡಲಾಗುತ್ತದೆ. ಈ ಹಣವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಿ. ರಾಜ್ಯದ 1 ಲಕ್ಷ 22 ಸಾವಿರ ಗೃಹಲಕ್ಷ್ಮೀಯರಿಗೆ ಐದು ಸಾವಿರ ಕೋಟಿ ರೂ. ಹಣ ಜಮಾವಣೆ ಮಾಡುತ್ತಿರುವುದಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದು, ಸಚಿವೆಯ ಈ ಶುಭಸುದ್ದಿಗೆ ಮಹಿಳೆಯರು ಪುಲ್ ಖುಷ್ ಆಗಿದ್ದಾರೆ ಎನ್ನಲಾಗಿದೆ.