HomeStateSeed Balls: ಗುಡಿಬಂಡೆಯಲ್ಲಿ ಟೆಕ್ಕಿಗಳಿಂದ ಬೀಜದುಂಡೆ ತಯಾರಿಕೆ ಹಾಗೂ ಪ್ರಸರಣ ಕಾರ್ಯಕ್ರಮ....!

Seed Balls: ಗುಡಿಬಂಡೆಯಲ್ಲಿ ಟೆಕ್ಕಿಗಳಿಂದ ಬೀಜದುಂಡೆ ತಯಾರಿಕೆ ಹಾಗೂ ಪ್ರಸರಣ ಕಾರ್ಯಕ್ರಮ….!

ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಐತಿಹಾಸಿಕ ಹಿನ್ನೆಲೆಯ ಸುರಸದ್ಮಗಿರ ಬೆಟ್ಟದಲ್ಲಿ ಬೆಂಗಳೂರು ಮೂಲದ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಗ್ರೂಪ್ (LSEG) ಫೌಂಡೇಷನ್, ಯೂತ್ ಫಾರ್‍ ಸೇವಾ (Youth for Seva) ಹಾಗೂ ಸ್ಥಳೀಯ ಗ್ರಾಮ ವಿಕಾಸ ಸಂಸ್ಥೆಯ ವತಿಯಿಂದ ಬೀಜದುಂಡೆ (Seed Balls) ತಯಾರಿಕೆ ಹಾಗೂ ಬೆಟ್ಟದಲ್ಲಿ ಬೀಜದುಂಡೆಗಳ ಪ್ರಸರಣದ ಜೊತೆಗೆ ಸ್ವಚ್ಚತಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 50 ಕ್ಕೂ ಅಧಿಕ ಮಂದಿ ಟೆಕ್ಕಿಗಳು ಭಾಗವಹಿಸಿದ್ದರು.

Seed balls making in gudibande 0

ಈ ವೇಳೆ (Seed Balls) ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಗ್ರೂಪ್ ಫೌಂಡೇಷನ್ ನ ನಿರ್ದೇಶಕ ನಿತಿನ್ ಶಾಸ್ತ್ರಿ ಮಾತನಾಡಿ, ನಮ್ಮ ಕಂಪನಿಯಲ್ಲಿ ಸುಮಾರು ಆರೂವರೆ ಸಾವಿರ ಮಂದಿ ನೌಕರರಿದ್ದಾರೆ. ಪ್ರತಿ ವರ್ಷ ನಮ್ಮ ಕಂಪನಿಯ ವತಿಯಿಂದ ಈ ರೀತಿಯ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ನೌಕರರಲ್ಲಿ ಸೇವಾ ಮನೋಭಾವ, ಸಾಮಾಜಿಕ ಕಳಕಳಿ ಬೆಳೆಸುವ ನಿಟ್ಟಿನಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಕಂಪನಿಯ ಸಿ.ಎಸ್.ಆರ್‍ ನಿಧಿಯಡಿ ಆಯೋಜನೆ ಮಾಡಲಾಗುತ್ತದೆ. ಗುಡಿಬಂಡೆ ತುಂಬಾ ಸುಂದರವಾದ ಪ್ರದೇಶವಾಗಿದೆ. ಈ ಭಾಗದಲ್ಲಿ ಸುಂದರವಾದ ಪ್ರಕೃತಿಯಿದೆ. ಆ ಪ್ರಕೃತಿಯ ಸೌಂದರ್ಯ ಕಂಡು ನಾವೆಲ್ಲರೂ ಸಂತಸಪಟ್ಟಿದ್ದೇವೆ. ಆ ಪ್ರಕೃತಿಯನ್ನು ಮತಷ್ಟು ಹೆಚ್ಚಿಸಲು ನಮ್ಮ ಕಡೆಯಿಂದ ಈ ಬೀಜದುಂಡೆ ತಯಾರಿಕೆ ಹಾಗೂ ಪ್ರಸರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೀಜದುಂಡೆಗಳ ಪ್ರಸರಣದ ಬಳಿಕ ನಮ್ಮ (Seed Balls) ಸಿಬ್ಬಂದಿಯಿಂದ ಬೆಟ್ಟದಲ್ಲಿ ಸ್ವಚ್ಚತಾ ಅಭಿಯಾನ ಸಹ ಹಮ್ಮಿಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿಯೇ ಹೆಚ್ಚು ಕಾರ್ಯಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತೇವೆ ಎಂದರು.

Seed balls making in gudibande 1

ಬಳಿಕ ಲಂಡನ್ ಸ್ಟಾಕ್ ಎಕ್ಸ್ ಚೇಂಜ್ ಗ್ರೂಪ್ ಫೌಂಡೇಷನ್ ನ ಸಿಬ್ಬಂದಿ ಆಲ್ಬರ್ಟ್ ಬೆಕ್ಕಿ ಮಾತನಾಡಿ, ಬೆಂಗಳೂರಿನಲ್ಲಿರುವ ಅನೇಕರಿಗೆ ಈ ಗ್ರಾಮೀಣ ಭಾಗಗಳ ಬಗ್ಗೆ ಪರಿಚಯವೇ ಇರುವುದಿಲ್ಲ. ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಈ ಭಾಗಗಳೂ ಸಹ ಪರಿಚಯವಾಗುತ್ತವೆ. ಈಗಾಗಲೇ ನಮ್ಮ ಸಂಸ್ಥೆಯ ವತಿಯಿಂದ (Seed Balls) ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್‍ ಲ್ಯಾಬ್, ಶುದ್ದ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್, ಪೀಠೋಪಕರಣಗಳು, ಕ್ರೀಡಾಕೂಟಗಳ ಆಯೋಜನೆಯಂತಹ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನಮ್ಮ ಈ ಕಾರ್ಯಕ್ಕೆ ಗ್ರಾಮ ವಿಕಾಸ ಸಂಸ್ಥೆ ತುಂಬಾನೆ ಸಹಕಾರ ನೀಡಿದೆ. ಮುಂದೆ ಈ ರೀತಿಯಲ್ಲೇ ಮತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಯೂತ್ ಫಾರ್‍ ಸೇವಾ ಸಂಸ್ಥೆಯ ಕೋ ಆರ್ಡಿನೇಟರ್ ಮಂಜುನಾತ್ ಮಾತನಾಡಿ, ಯೂತ್ ಫಾರ್‍ ಸೇವಾ ಸಂಸ್ಥೆಯೊಂದಿಗೆ ಅನೇಕ ಕಂಪನಿಗಳು ಸೇರಿಕೊಂಡು ಗ್ರಾಮೀಣ ಹಾಗೂ ಹಿಂದುಗಳಿದ ಭಾಗಗಳಲ್ಲಿ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಗುಡಿಬಂಡೆಯಲ್ಲಿ ಈಗಾಗಲೇ ಶಾಲಾ ಕಟ್ಟಡಗಳ ದುರಸ್ಥಿ, ಕಲ್ಯಾಣಿಗಳ ಪುನಃಚ್ಚೇತನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯೂತ್ ಫಾರ್‍ ಸೇವಾ ಸಂಸ್ಥೆಯ ವತಿಯಿಂದ ಈ ಭಾಗದಲ್ಲಿ ಮತಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.

Seed balls making in gudibande 2

ಈ ವೇಳೆ ಗ್ರಾಮ ವಿಕಾಸ ಸಂಸ್ಥೆಯ ಮುಖ್ಯಸ್ಥ ಶ್ರೀಧರ ಸಾಗರ ಜೀ, ಯೂತ್ ಫಾರ್‍ ಸೇವಾ ಸಂಸ್ಥೆಯ ನಾಗರಾಜ್ ಭಟ್, ಪ್ರಶಾಂತ್, ವಾಹಿನಿ ಸಂಸ್ಥೆಯ ಸುರೇಶ್, ಚಲಪತಿ, ಪರಿಸರ ವೇದಿಕೆಯ ಗುಂಪು ಮರದ ಆನಂದ್, ಕಸಾಪ ಅಧ್ಯಕ್ಷ ಬಿ.ಮಂಜುನಾಥ್ ಸೇರಿದಂತೆ ಹಲವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular