ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಬ್ಯಾಂಕಿಂಗ್ ವ್ಯವಹಾರ ತುಂಬಾನೆ ಪಾತ್ರ ವಹಿಸುತ್ತದೆ. ಆದರೆ ಬ್ಯಾಂಕ್ ಗಳಿಗೆ ರಜೆ ಇದ್ದಾಗ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಗ್ರಾಹಕರು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್ ಮಾಹೆಯಲ್ಲಿನ ಬ್ಯಾಂಕ್ (Bank Holidays) ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ದೇಶದ ವಿವಿಧ ಬ್ಯಾಂಕ್ ಗಳಿಗೆ ಒಟ್ಟು 15 ದಿನಗಳ ರಜೆ ಇರುತ್ತದೆ.
RBI ಅಕ್ಟೋಬರ್ ಮಾಹೆಯ ಬ್ಯಾಂಕ್ ರಜೆಗಳ ಪಟ್ಟಿಯನ್ನು ರಿಲೀಸ್ ಮಾಡಿದ್ದು, ಬ್ಯಾಂಕ್ ಗಳಿಗೆ ಒಟ್ಟು 15 ದಿನಗಳ ರಜೆ ಇರಲಿದೆ. ಈ ಪೈಇಕೆ ಕೆಲವು ರಾಷ್ಟ್ರೀಯ ರಜಾದಿನಗಳು ಹಾಗೂ ಇನ್ನಿತರ ಪ್ರಾದೇಶಿಕ ರಜಾದಿನಗಳು ಸೇರಿದೆ. ಈ ರಜಾ ದಿನಗಳನ್ನು ನೆನಪಿನಲ್ಲಿಟ್ಟುಕೊಂಡು ಬ್ಯಾಂಕ್ ಗ್ರಾಹಕರು ಬ್ಯಾಂಕ್ ವ್ಯವಹಾರಗಳನ್ನು ಮಾಡಿಕೊಳ್ಳಬೇಕಿದೆ. ಇದೀಗ ಯಾವೆಲ್ಲಾ ದಿನಗಳಲ್ಲಿ ರಜೆ ಇರಲಿದೆ ಎಂಬುದನ್ನು ಈ ಕೆಳಗೆ ತಿಳಿಸಲಾಗಿದೆ.
ಅಕ್ಟೋಬರ್ ತಿಂಗಳ ಬ್ಯಾಂಕ್ ರಜೆಗಳ ಪಟ್ಟಿ:
- ಅಕ್ಟೋಬರ್ 1 (ಮಂಗಳವಾರ): ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರನೇ ಹಂತದ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆ ದಿನ ಜಮ್ಮುವಿನ ಬ್ಯಾಂಕ್‌ಗಳಿಗೆ ರಜೆ.
- ಅಕ್ಟೋಬರ್ 2 (ಬುಧವಾರ): ಮಹಾತ್ಮ ಗಾಂಧಿ ಜಯಂತಿ ಮತ್ತು ಮಹಾಲಯ ಅಮಾವಾಸ್ಯೆಯ ಸಂದರ್ಭದಲ್ಲಿ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ರಜೆ.
- ಅಕ್ಟೋಬರ್ 3 (ಗುರುವಾರ): ನವರಾತ್ರಿ ಪ್ರಯುಕ್ತ ರಾಜಸ್ಥಾನದಲ್ಲಿ ಬ್ಯಾಂಕ್ ರಜೆ ಇರಲಿದೆ.
- ಅಕ್ಟೋಬರ್ 6 (ಭಾನುವಾರ)
- ಅಕ್ಟೋಬರ್ 10 (ಗುರುವಾರ): ದುರ್ಗಾ ಪೂಜೆ/ದಸರಾ ಸಂದರ್ಭದಲ್ಲಿ ತ್ರಿಪುರಾ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಬಂಗಾಳದಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
- ಅಕ್ಟೋಬರ್ 11 (ಶುಕ್ರವಾರ): ದಸರಾ, ಆಯುಧ ಪೂಜೆ ಮತ್ತು ದುರ್ಗಾಷ್ಟಮಿ ಪ್ರಯುಕ್ತ ಬ್ಯಾಂಕ್ ರಜೆ ಇರಲಿದೆ.
- ಅಕ್ಟೋಬರ್ 12 (ಎರಡನೇ ಶನಿವಾರ)
- ಅಕ್ಟೋಬರ್ 13 (ಭಾನುವಾರ)
- ಅಕ್ಟೋಬರ್ 14 (ಸೋಮವಾರ): ದುರ್ಗಾ ಪೂಜೆ (ದಾಸೈನ್) ಪ್ರಯುಕ್ತ ಸಿಕ್ಕಿಂನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
- ಅಕ್ಟೋಬರ್ 16 (ಬುಧವಾರ): ಲಕ್ಷ್ಮಿ ಪೂಜೆ ಪ್ರಯುಕ್ತ ತ್ರಿಪುರಾ ಮತ್ತು ಬಂಗಾಳ ರಾಜ್ಯಗಳಲ್ಲಿ ಬ್ಯಾಂಕ್ ರಜೆ ಇರಲಿದೆ.
- ಅಕ್ಟೋಬರ್ 17 (ಗುರುವಾರ): ಮಹರ್ಷಿ ವಾಲ್ಮೀಕಿ ಜಯಂತಿ/ ಕತಿ ಬಿಹು ಪ್ರಯುಕ್ತ ಕರ್ನಾಟಕ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶದ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
- ಅಕ್ಟೋಬರ್ 20 (ಭಾನುವಾರ)
- ಅಕ್ಟೋಬರ್ 26 (ಶನಿವಾರ): ಜಮ್ಮು ಮತ್ತು ಕಾಶ್ಮೀರ ಭಾರತಕ್ಕೆ ವಿಲೀನವಾದ ದಿನ ಪ್ರಯುಕ್ತ ಜಮ್ಮು ಮತ್ತು ಶ್ರೀನಗರದ ಬ್ಯಾಂಕುಗಳಿಗೆ ರಜೆ ಇರಲಿದೆ.
- ಅಕ್ಟೋಬರ್ 27 (ಭಾನುವಾರ)
- ಅಕ್ಟೋಬರ್ 31 (ಗುರುವಾರ): ದೀಪಾವಳಿ/ನರಕ ಚತುರ್ದಶಿ, ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ದಿನ ಬ್ಯಾಂಕ್ ರಜೆ ಇರಲಿದೆ.
ಇನ್ನೂ 15 ದಿನಗಳ ಕಾಲ ಬ್ಯಾಂಕ್ ರಜೆಯಿದ್ದರೂ ಸಹ ಇಂಟರ್ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ನಡೆಯಲಿದೆ. ಜೊತೆಗೆ ಯುಪಿಐ, ಎಟಿಎಂ ಸೌಲಭ್ಯಗಳೂ ಸಹ ಎಂದಿನಂತೆ ಕಾರ್ಯನಿರ್ವಹಿಸುವ ಕಾರಣ ನಿಮ್ಮ ಹಣಕಾಸಿನ ವ್ಯವಹಾರಕ್ಕೆ ಅಷ್ಟೊಂದು ಸಮಸ್ಯೆಯಾಗದೇ ಇರಬಹುದು. ಆದರೆ ಬ್ಯಾಂಕ್ ನಲ್ಲಿಯೇ ಮಾಡುವ ವ್ಯವಹಾರಕ್ಕೆ ಸಮಸ್ಯೆಯಾಗಬಹುದು.